ಯುವಕರು ದೇಶದ ಶಕ್ತಿ: ಶೈಲಜಾ ಭಟ್
ವಿಟ್ಲ: ಯುವಕರು ದೇಶದ ಶಕ್ತಿಯಾಗಿದ್ದು, ಅವರಿಂದ ಉತ್ತಮವಾದ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್ ಹೇಳಿದ್ದಾರೆ.
ಫ್ರೆಂಡ್ಸ್ ವಿಟ್ಲ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ವಿಟ್ಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಪ್ತಸ್ವರ-2013 ಸಮಾರಂಭದಲ್ಲಿ ಅವರು ಮಾತನಾಡಿದರು. ಜಯಕರ್ನಾಟಕ ಸಂಘಟನೆ ಮುಖಂಡ ನೆಲ್ಲಿಕಟ್ಟೆ ಜಗನ್ನಾಥ ಶೆಟ್ಟಿ, ನ್ಯಾಯವಾದಿ ಜಯರಾಮ್ ರೈ, ಜಯಕರ್ನಾಟಕ ಸಂಘಟನಾ ಕಾರ್ಯದರ್ಶಿ ಸುರೇಂದ್ರನಾಥ್ ಆಳ್ವ, ರಾಜರಾಮ್ ಬಲಿಪಗುಳಿ, ಪ್ರಕಾಶ್ಚಂದ್ರ ಆಳ್ವ, ವಿಟ್ಲ ಬಜರಂಗದಳದ ಸಂಚಾಲಕ ಜಯಂತ ವಿಟ್ಲ, ನಾಗೇಶ ಬಸವನಗುಡಿ, ಶಾಂತಾ ಎಸ್.ಎನ್. ಭಟ್, ವೀರಪ್ಪ ಕುಲಾಲು, ಶಾಲಾ ಮುಖೋಪಾಧ್ಯಾಯ ವಿಶ್ವನಾಥ ಎಚ್, ಕರುಣಾಕರ ನಾಯ್ತೊಟ್ಟು, ಜ್ಯೋತಿಪ್ರಕಾಶ್ ಪುಣಚ ಇದ್ದರು.
ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಪ್ರಭು ಮಂಚಿ ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದಿಸಿದರು. ಬಳಿಕ ನಡೆದ ಸಪ್ತಸ್ವರ-2013 ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಕೇರಳದ ಅತ್ತು ಮತ್ತು ಅಮ್ಮು ಅವಳಿ ಸಹೋದರಿಯರ ಸ್ವರ ಮಾಧುರ್ಯ, ಕಿರುತೆರೆ ನಿರೂಪಕಿ ಅನುಶ್ರೀ, ಆರ್.ಜೆ ಗಣೇಶ್ ಮೊದಲಾದವರು ಸಂಗೀತ ರಸಮಂಜರಿ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

