ದಕ್ಷಿಣ ಕನ್ನಡ

ಅನಾರೋಗ್ಯದಿಂದ ಬಳಲುತ್ತಿರುವ ಯಕ್ಷಗಾನ ಕಲಾವಿದಗೆ ನೆರವಾಗಿ

Published On :

ಕ.ಪ್ರ. ವಾರ್ತ್ಣೆ ಸುಬ್ರಹ್ಮಣ್ಯ   ಜು 11
ಯಕ್ಷಗಾನ ವೇಷಧಾರಿಯಾಗಿ, ತಾಳಮದ್ದಳೆಯ ಪ್ರಬುದ್ಧ ಅರ್ಥಧಾರಿಯಾಗಿ ಯಕ್ಷಗಾನಕ್ಕೆ ಅಮೂಲ್ಯ ಕೊಡುಗೆ ನೀಡಿದ ಅಪ್ರತಿಮ ಕಲಾವಿದ ಕನ್ಯಾನ ಕೇಶವ ಭಟ್ (58) ಇದೀಗ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ.
ಕಡು ಬಡತನದ ನಡುವೆಯೂ ಬದುಕನ್ನು ಕಲೆಗೆ ಮೀಸಲಿಟ್ಟ ಅವರ ಜೀವನ ಈಗ ದುಸ್ತರವಾಗಿದೆ. ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದು, ತನ್ನ ಮುಂದಿನ ಆಸ್ಪತ್ರೆ ವೆಚ್ಚ ಹಾಗೂ ಜೀವನೋಪಾಯಕ್ಕಾಗಿ ಸಹಾಯ ಕೋರುತ್ತಿದ್ದಾರೆ.
ಭಟ್ ಅವರು 10 ವರ್ಷಗಳ ಹಿಂದೆ ವಿಟ್ಲದ ಕನ್ಯಾನದಿಂದ ಸುಬ್ರಹ್ಮಣ್ಯಕ್ಕೆ ಬಂದು ಇಲ್ಲಿ ಸರ್ಪಸಂಸ್ಕಾರ ಪೂಜಾದಿಗಳನ್ನು ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಗಿ ಹಾಸಿಗೆ ಹಿಡಿದಿದ್ದರು. ಬಳಿಕ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಎರಡು ತಿಂಗಳ ಚಿಕಿತ್ಸೆ ಬಳಿಕ ಹಣಕಾಸಿನ ಅಡಚಣೆಯಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಡದ ಕಾಲು ಗ್ಯಾಂಗ್ರಿನ್‌ಗೆ ಒಳಗಾದ ಕಾರಣ ತೆಗೆಯಲಾಗಿದೆ. ಹಾಗಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಜೀವನ ನಿರ್ವಹಣೆಗೆ ಇವರಿಗೆ ಯಾವುದೇ ಆಸ್ತಿಪಾಸ್ತಿಯೂ ಇಲ್ಲ.
ನೆರವು ನೀಡಿ: ಕೇಶವ ಭಟ್ ಅವರಿಗೆ ಈಗ ವಾರದಲ್ಲಿ ಮೂರು ಡಯಾಲಿಸಿಸ್ ಮಾಡಬೇಕು. ಅಲ್ಲದೆ ಆಸ್ಪತ್ರೆ ಖರ್ಚು ಸೇರಿ, ಔಷಧಿ ಇತ್ಯಾದಿಗಳಿಗೆ ತಿಂಗಳಿಗೆ ಸುಮಾರು 40 ಸಾವಿರ ಖರ್ಚಾಗುತ್ತದೆ. ಆದ್ದರಿಂದ ಈ ಬಡ ಕಲಾವಿದರ ಆರೋಗ್ಯ ರಕ್ಷಣೆಗಾಗಿ ಸಹೃದಯಿಗಳು ಸಹಕರಿಸಬೇಕಾಗಿದೆ.
ಧನ ಸಹಾಯ ನೀಡುವವರು ಕೇಶವ ಭಟ್ ಪತ್ನಿ ವಿನೋದಾ ಭಟ್ ಅವರ ಕಾರ್ಪೊರೇಷನ್ ಬ್ಯಾಂಕ್‌ನ ಉಳಿತಾಯ ಖಾತೆ ಸಂಖ್ಯೆ- ಎಸ್.ಬಿ/01/007229ಗೆ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಿನೋದಾ ಭಟ್ ಅವರನ್ನು (ಮೊ. 9448616336) ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.