ಕೆಲಸಕ್ಕಿದ್ದ ಯುವತಿಗೆ ಕಿರುಕುಳ: ಸಹೋದರನಿಂದ ಮ್ಯಾನೇಜರ್‌ಗೆ ಹಲ್ಲೆ
ಮಂಗಳೂರು: ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಮ್ಯಾನೇಜರ್ ಮೇಲೆ ಯುವತಿಯ ಸಹೋದರ ಹಲ್ಲೆ ನಡೆಸಿದ್ದಾರೆ.
ನಗರದ ಲೇಡಿಗೋಶನ್ ಬಳಿಯ ಸ್ವೀಟ್ಸ್ ಒಂದರಲ್ಲಿ ಕುಲಶೇಖರದ ಯುವತಿ ಕೆಲಸ ಮಾಡುತ್ತಿದ್ದಳು. ಮ್ಯಾನೇಜರ್ ಮತ್ತು ಕೆಲಸಕ್ಕಿದ್ದ ಲಾಯ್ಡ್, ಪುನೀತ್, ಅಶೋಕ್ ಸದಾ ಒಂದಿಲ್ಲ ಒಂದು ರೀತಿಯಲ್ಲಿ ನಿಂದಿಸಿ, ಯುವತಿಗೆ ಕಿರುಕುಳ ನೀಡಿ, ಅಶ್ಲೀಲವಾಗಿ ಮಾತನಾಡುತ್ತಿದ್ದರು. ಇದರಿಂದ ರೋಸಿ ಹೋದ ಯುವತಿ ಮನೆಯಲ್ಲಿ ದೂರು ನೀಡಿದ್ದಳು.
ತಂದೆ, ಅಣ್ಣ, ಭಾವ ಯುವತಿಯನ್ನು ಕರೆದುಕೊಂಡು ಗುರುವಾರ ಅಂಗಡಿಗೆ ಬಂದು ವಿಚಾರಿಸಿದಾಗ ಲಾಯ್ಡ್ ಉಡಾಫೆ ಮಾತನಾಡಿದ್ದ. ಯುವತಿ ಅಳುತ್ತಾ ಅಂಗಡಿ ಮುಂದೆ ನಿಂತಿರುವುದನ್ನು ನೋಡಿದ ರಿಕ್ಷಾ ಚಾಲಕರು, ಸಾರ್ವಜನಿಕರು, ಯುವತಿ ಸಹೋದರ ಒಟ್ಟು ಸೇರಿ ಲಾಯ್ಡ್ ಎಂಬಾತನಿಗೆ ತದಕಿದ್ದಾರೆ. ಬಳಿಕ ಬಜರಂಗ ದಳ ಕಾರ್ಯಕರ್ತರು ಆಗಮಿಸಿ ಮತ್ತೆ ಹಲ್ಲೆ ನಡೆಸಿದ್ದಾರೆ. ಯುವತಿ ಮೂವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳಾ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. 'ಯುವತಿ ಅಂಗಡಿಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದು, ಇತ್ತೀಚೆಗೆ ಯುವಕನ ಮೇಲೆ ಹಲ್ಲೆ ನಡೆಸಿದ್ದಳು. ನನ್ನ ಅಣ್ಣ ಬಜರಂಗದಳ ಸಂಘಟನೆಯಲ್ಲಿದ್ದಾನೆ, ಅವರ ಬಳಿ ಹೇಳುತ್ತೇನೆ ಎಂದು ಬುಧವಾರ ಹೆದರಿಸಿದ್ದಳು' ಎಂದು ಅಂಗಡಿ ಮ್ಯಾನೇಜರ್ ಹೇಳಿಕೆ ನೀಡಿದ್ದಾನೆ.
ಬಂದರು ಪೊಲೀಸ್ ಠಾಣೆಯಲ್ಲಿ ಬಜರಂಗದಳದ ಹತ್ತು ಮಂದಿ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

