ಮಗಳೊಂದಿಗೆ ತಾಯಿ ಆತ್ಮಹತ್ಯೆ
ಬಂಟ್ವಾಳ: ಮಹಿಳೆಯೊಬ್ಬರು ತನ್ನ 9 ವರ್ಷದ ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಮೆಲ್ಕಾರ್ ಸಮೀಪ ನಡೆದಿದೆ. ಇಲ್ಲಿನ ನಿವಾಸಿ ನಿವೃತ್ತ ಸೈನಿಕ ನವೀನ್ಚಂದ್ರ ಎಂಬವರ ಪತ್ನಿ ಪ್ರತಿಮಾ (32) ಹಾಗೂ ಮಗಳು ದಿಯಾ (9) ಮೃತಪಟ್ಟವರು. ಗುರುವಾರ ಮುಂಜಾನೆ ಇವರಿಬ್ಬರ ಶವ ಪತ್ತೆಯಾಗಿದ್ದು, ಕೌಟುಂಬಿಕ ವಿರಸದಿಂದ ಬೇಸತ್ತು ಈ ಕೃತ್ಯವೆಸಗಿಕೊಂಡಿದ್ದಾರೆ ಎನ್ನಲಾಗಿದೆ. ನವೀನ್ಚಂದ್ರ ಈ ಹಿಂದೆ ಮಿಲಿಟರಿಯಲ್ಲಿದ್ದು, ತನ್ನ ಪತ್ನಿ, ಮಗಳೊಂದಿಗೆ ಮೆಲ್ಕಾರ್ನಲ್ಲಿ ವಾಸ್ತವ್ಯವಿದ್ದರು. ಪತ್ನಿ ಪ್ರತಿಮಾ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗಳು ದಿಯಾ ಪಾಣೆಮಂಗಳೂರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಳು.
ಸಾವಿನಲ್ಲೂ ಒಂದಾದ ದಂಪತಿ
ನಾಪೋಕ್ಲು: ಪತಿ-ಪತ್ನಿ ಸಂಬಂಧ ಏಳೇಳು ಜನ್ಮದ ಅನುಬಂಧ ಎನ್ನುತ್ತಾರೆ. ಇಂತಹ ಗಾಢ ಸಂಬಂಧ ಇಂದಿನ ದಿನಗಳಲ್ಲಿ ಮರೆಯಾಗುತ್ತಿದೆ ಎಂಬ ಮಾತಿಗೆ ಅಪವಾದದಂತಿದೆ ಈ ಪ್ರಕರಣ.
ಪತಿ ನಿಧನರಾದ 12 ಗಂಟೆಯಲ್ಲಿಯೇ ಪತ್ನಿ ಕೂಡ ಸಾವನ್ನಪ್ಪಿದ ಘಟನೆ ನಾಪೋಕ್ಲು ಬಳಿಯ ಕುಂಬಳದಾಳು ಗ್ರಾಮದ ಕುಯ್ಯಂಗೇರಿಯಲ್ಲಿ ಸಂಭವಿಸಿದೆ. ಕುಯ್ಯಂಗೇರಿಯ ತಂಬಂಡ ಮುತ್ತಪ್ಪ (68) ಬುಧವಾರ ಬೆಳಗ್ಗೆ 6 ಗಂಟೆಗೆ ನಿಧನರಾದರು. ಇವರ ಅಂತ್ಯಕ್ರಿಯೆ ಸಂಜೆ 7 ಗಂಟೆಗೆ ಜರುಗಿತು. ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮೃತರ ಪತ್ನಿ ಮುತ್ತವ್ವ (62) ಪತಿಯ ಅಗಲಿಕೆಯ ದುಃಖದಲ್ಲಿಯೇ ಅಂತ್ಯಕ್ರಿಯೆ ನಡೆದ 1 ಗಂಟೆಯೊಳಗೇ ಕೊನೆಯುಸಿರೆಳೆದರು. ಪತಿ-ಪತ್ನಿ ಅತ್ಯಂತ ನಿಕಟರಾಗಿದ್ದರು. ಹೀಗಾಗಿ ಪತಿಯ ಹಾದಿಯಲ್ಲಿಯೇ ಪತ್ನಿ ಕೂಡ ಸಾಗಿದರು ಎಂದು ಈವರೀರ್ವರು ಮರಣದ ಬಗ್ಗೆ ಗ್ರಾಮಸ್ಥರು ವಿಷಾದ ವ್ಯಕ್ತಪಡಿಸಿದ್ದಾರೆ.
'108' ವಾಹನದಲ್ಲೆ ಜನ್ಮ ನೀಡಿದ ತಾಯಿ
ಕುಶಾಲನಗರ: ತುರ್ತು ವಾಹನ 108ರಲ್ಲಿಯೇ ಮಹಿಳೆಯೊಬ್ಬರು ಶಿಶುವಿಗೆ ಜನ್ಮ ನೀಡಿದ ಘಟನೆ ಕೊಪ್ಪ ಬಳಿ ನಡೆದಿದೆ. ವಿರಾಜಪೇಟೆಯ ಕಾನೂರಿನ ಮಹಿಳೆ ಅನಿತಾ ಹೆರಿಗೆಗೆಂದು ತವರು ಮನೆಗೆ ಆಗಮಿಸಿದ್ದು, 108 ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ವಾಹನದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಕ್ಷಣ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರಾಮಚಂದ್ರ ಮತ್ತು ಸಿಬ್ಬಂದಿ ಹೆಚ್ಚಿನ ಆರೈಕೆ ನಡೆಸಿದ್ದು, ಇದೀಗ ತಾಯಿ- ಮಗು ಆರೋಗ್ಯವಾಗಿ ಆಸ್ಪತ್ರೆಯಲ್ಲಿದ್ದಾರೆ.
ಕಟ್ಟಡ ಕುಸಿದು ಒಬ್ಬ ಸಾವು
ಅಥಣಿ: ಅಗ್ನಿ ದುರಂತದಲ್ಲಿ ಶಿಥಿಲಗೊಂಡಿದ್ದ ಎರಡಂತಸ್ತಿನ ಕಟ್ಟಡದ ಅಪಾಂುಕಾರಿ ಭಾಗವನ್ನು ನ್ಯಾಂಾಲಂುದ ನಿರ್ದೇಶನದಂತೆ ತೆರವುಗೊಳಿಸುತ್ತಿದ್ದಾಗಲೇ ಕಟ್ಟಡ ಕುಸಿದ ಪರಿಣಾಮ ಸ್ಥಳದಲ್ಲಿಂು ಇದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಗುರುವಾರ ಇಲ್ಲಿಯ ಕರಣಿ ಗಲ್ಲಿಂುಲ್ಲಿರುವ ಹಳೆಂು ಸ್ವಾಮಿ ಕಲೆಕ್ಷನ್ ಮಳಿಗೆಂುಲ್ಲಿ ನಡೆದಿದೆ. ಪಟ್ಟಣದ ಶಾಂತಿ ನಗರದ ನಿವಾಸಿ ಮಾಜಿ ಸೈನಿಕ ಸುಭಾಷ ಬಾಬುರಾವ್ ಯಾದವ್ (56) ಮೃತ ವ್ಯಕ್ತಿ. ಈಗ್ಗೆ ಎರಡು ವರ್ಷಗಳ ಹಿಂದೆ ಸಂಭವಿಸಿದ ಅಗ್ನಿ ದುರಂತದಲ್ಲಿ ಸ್ವಾಮಿ ಕಲೆಕ್ಷನ್ ಕಟ್ಟಡ ಬೆಂಕಿಂು ಪ್ರಖರತೆಗೆ ಸಿಲುಕಿ ಶಿಥಿಲಗೊಂಡಿತ್ತು. ನಂತರ ಈ ಕಟ್ಟಡದಲ್ಲಿ ವಹಿವಾಟು ನಡೆಸಲು ಸ್ಥಳೀಂು ಪುರಸಭೆ ಮಾಲೀಕರಿಗೆ ಅವಕಾಶ ನೀಡಿರಲಿಲ್ಲ. ಅಲ್ಲದೆ, ಅಕ್ಕಪಕ್ಕದ ನಿವಾಸಿಗಳ ನೀಡಿದ ದೂರುಗಳನ್ನು ಆಧರಿಸಿ, ಅಪಾಂುಕಾರಿ ಎಂದು ಗುರುತಿಸಲಾಗಿರುವ ಕಟ್ಟಡದ 2ನೇ ಅಂತಸ್ತನ್ನು ತೆರೆವುಗೊಳಿಸಲು ನ್ಯಾಯಾಲಯ ನಿರ್ದೇಶಿಸಿತ್ತು. ಅದರನ್ವಂು ಕಳೆದ ಕೆಲವು ದಿನಗಳಿಂದಲೂ ಮಾಲೀಕರು ಅಪಾಂುಕಾರಿ ಭಾಗ ತೆರೆವುಗೊಳಿಸುವ ಕಾಂರ್ು ಆರಂಭಿಸಿದ್ದರು. ಈ ವೇಳೆ ಗೋಡೆ ಹಠಾತ್ ಕುಸಿದು ಈ ದುರ್ಘಟನೆ ಸಂಭವಿಸಿದೆ. ಈ ಮೊದಲು ನಡೆದ ಅಗ್ನಿ ದುರಂತದಲ್ಲಿ ಮಾಲೀಕರ ಮಗ ಮತ್ತು ಸೊಸೆ ಸೇರಿ ಒಟ್ಟು ಐವರು ಸಜೀವ ದಹನವಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಪ್ರಕರಣ ಅಥಣಿ ಠಾಣೆಂುಲ್ಲಿ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

