ದಕ್ಷಿಣ ಕನ್ನಡ

ಸಿಹಿ ತಿಂಡಿ ಕೊಂಡರೆ ಚಿನ್ನದ ನಾಣ್ಯ ಗೆಲ್ಲುವ ಅದೃಷ್ಟ; ಗ್ರಾಹಕರಿಗೆ ಕೆಎಂಎಫ್ ಕೊಡುಗೆ

Published On :

ಮಂಗಳೂರು: ದಕ್ಷಿಣಕನ್ನಡ ಹಾಲು ಉತ್ಪಾದಕರ ಒಕ್ಕೂಟ ತಯಾರಿಸಿದ ಸಿಹಿತಿನಿಸುಗಳನ್ನು ತಿಂದವರಿಗೆ ಸಿಹಿ ಜತೆಗೆ ಚಿನ್ನ, ಬೆಳ್ಳಿ ಗೆಲ್ಲುವ ಅವಕಾಶ. ಜು.15ರಿಂದ ಸೆ.30ರವರೆಗೆ ಕೆಎಂಎಫ್‌ನ ಮೈಸೂರ್ ಪಾಕ್, ನಂದಿನಿ ಪೇಡಾ, ನಂದಿನಿ ಬೈಟ್ ಖರೀದಿಸಿದ ಗ್ರಾಹಕರಿಗೆ 1 ಗ್ರಾಂ ಚಿನ್ನ, ಬೆಳ್ಳಿ ನಾಣ್ಯ, ಸಿಹಿತಿಂಡಿ ಪ್ಯಾಕ್‌ಗಳನ್ನು ಅದೃಷ್ಟ ಮೂಲಕ ಗೆಲ್ಲಬಹುದು.
ಕುಲಶೇಖರದಲ್ಲಿರುವ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಸೋಮವಾರ ಹೈಸ್ಪೀಡ್ ಹಾಲು ಪ್ಯಾಕಿಂಗ್ ಯಂತ್ರ ಮತ್ತು ನಂದಿನಿ ಉತ್ಪನ್ನಗಳ ವಿಶೇಷ ಮಾರಾಟ ಯೋಜನೆ ಉದ್ಘಾಟನೆ ಸಂದರ್ಭ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡುಗೆ ಪ್ರಕಟಿಸಿದರು. ಒಕ್ಕೂಟದ ಇತಿಹಾಸದಲ್ಲಿ.ಯೇ ಮೊದಲ ಬಾರಿಗೆ 2.75 ಲಕ್ಷ ಹಾಲು ಉತ್ಪಾದನೆಯಾಗುತ್ತಿದೆ. ಇದು ಹಾಲಿಗೆ ನೀಡುವ 4 ಸಬ್ಸಿಡಿ ಕಾರಣ ಎಂದರು.  ಮೇವು ಬೆಳೆಯುವ ರೈತರಿಗೆ ಒಕ್ಕೂಟ ವತಿಯಿಂದ 10 ಸಾವಿರ ಸಬ್ಸಿಡಿ ನೀಡಲಾಗುವುದು. ಈ ವರ್ಷ ಸಹಕಾರಿ ಸಪ್ತಾಪದಲ್ಲಿ ಗೋಡಂಬಿ ಬರ್ಫಿ ಮಾರುಕಟ್ಟೆಗೆ ಪರಿಚಯಿಸಲಾಗುವುದು. ಬ್ರಹ್ಮಾವರದಲ್ಲಿ ಡೈರಿ ಘಟಕ ಆರಂಭಕ್ಕೆ ಚಿಂತನೆ, ಹಾಲು ಉತ್ಪನ್ನಗಳ ತಯಾರಿಕೆ ಮಂಗಳೂರಲ್ಲಿ ಘಟಕ ಆರಂಭಕ್ಕೆ ಚಿಂತನೆ ನಡೆಸಲಾಗುವುದು ಎಂದರು.
'ಹೈನುಗಾರಿಕೆ ನಡೆಸುವವರು ಕೃಷಿ ಭೂಮಿ ಹೊಂದಿದ್ದರೆ ಅವರಿಗೆ ಶೇ.3 ಬಡ್ಡಿ ದರದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನೇರ ಸಾಲ ನೀಡುತ್ತದೆ ಎಂದು ಹೈಸ್ಪೀಡ್ ಪ್ಯಾಕಿಂಗ್ ಯಂತ್ರ ಉದ್ಘಾಟಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು. ಇತರ ಕ್ಷೇತ್ರಗಳಲ್ಲಿ ಸಹಾಯಧನ, ಯೋಜನೆಗಳು ಫಲಾನುಭವಿಗಳನ್ನು ಮುಟ್ಟುವಾಗ ಮಂಜುಗಡ್ಡೆ ತುಂಡಿನಂತೆ ಕೊನೆಗೆ ಏನೂ ಇರುವುದಿಲ್ಲ. ಆದರೆ ಸರ್ಕಾರದ ಯೋಜನೆಗಳು ಸಹಕಾರಿ ಬ್ಯಾಂಕ್ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ. ಶಾಲೆ ಮಕ್ಕಳಿಗೆ ಪ್ರತಿದಿನ ಹಾಲು ಪೂರೈಸುವುದಾಗಿ ಸರ್ಕಾರ ಭರವಸೆ ನೀಡಿದೆ ಆದರೆ ಯೋಜನೆ ಇಲ್ಲಿ ಜಾರಿಗೊಳಿಸುವುದು ಸುಲಭ ಅಲ್ಲ. ಶಾಲೆಗೆ ರಜೆ ಇದ್ದ ದಿನ ಉಳಿಕೆ ಹಾಲು ಬಳಸುವುದು ಹೇಗೆ ಎಂಬ ಬಗ್ಗೆ ಯೋಚಿಸಿ ಯೋಜನೆ ರೂಪಿಸಬೇಕು ಎಂದರು. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಪೊರೇಟರ್ ಭಾಸ್ಕರ ಕೆ., ಒಕ್ಕೂಟ ವ್ಯವಸ್ಥಾಪಕ ಡಾ.ಬಿ.ವಿ.ಸತ್ಯನಾರಾಯಣ, ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಸವಣೂರು ಸೀತಾರಾಮ ರೈ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.