ದ.ಕ.: ಗಾಳಿ-ಮಳೆ ಅಬ್ಬರ, ನೆರೆ ಭೀತಿ
ಮಂಗಳೂರು: ಮಂಗಳೂರಿನಲ್ಲಿ ಶುಕ್ರವಾರ ಬೆಳಗ್ಗಿನಿಂದ ಗಾಳಿ, ಮಳೆ ಅಬ್ಬರ ಹೆಚ್ಚಾಗಿದ್ದು, ದಿನವಿಡೀ ಬಿಡದೆ ಮಳೆ ಸುರಿದಿದೆ. ಗುರುವಾರ ರಾತ್ರಿಯಿಂದಲೇ ಮಳೆ ಧಾರಾಕಾರ ಸುರಿದ ಪರಿಣಾಮ ನೇತ್ರಾವತಿ ನದಿ ನೀರಿನಮಟ್ಟ ಹೆಚ್ಚಾಗಿದ್ದು, ಜಪ್ಪಿನಮೊಗರು, ಪಟ್ಲ, ಕಲ್ಲಾಪು, ಆಡಂಕುದ್ರು ಪ್ರದೇಶದಲ್ಲಿ ನೆರೆ ಭೀತಿ ಉಂಟಾಗಿದೆ. ಮುಕ್ಕಚ್ಚೇರಿ, ಉಚ್ಚಿಲ, ಸೋಮೇಶ್ವರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಕದ್ರಿಯಲ್ಲಿ ಮನೆಯ ಗೋಡೆ ಕುಸಿದಿದ್ದು, ಸುಮಾರು ರು. 50 ಸಾವಿರ ನಷ್ಟ ಸಂಭವಿಸಿದೆ. ಪಡೀಲಿನ ಅಳಪೆಯ ಬಳಿಯ ಮನೆಗೆ ಮರ ಬಿದ್ದಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ಪುತ್ತೂರಿನ ಚಿಕ್ಕಮುಟ್ನೂರು ಬಳಿಯ ಮನೆಯ ಗೋಡೆ ಕುಸಿದು, ಮನೆ ಮೇಲ್ಛಾವಣಿ ಬಿದ್ದಿದ್ದು, ಹಾನಿಯುಂಟಾಗಿದೆ. ಬ್ರಹ್ಮರಕೂಟ್ಲು, ವಳಚ್ಚಿಲ್, ಅಡ್ಯಾರ್, ಫರಂಗಿಪೇಟೆ, ಅರ್ಕುಳ ಬಳಿಯ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ದಡ ಮುಳುಗಡೆಯಾಗಿದೆ. ತುಂಬೆ ಪದವಿ ಪೂರ್ವ ಕಾಲೇಜಿನ ಬಳಿಯ ತಿರುವ ರಸ್ತೆಯ ಬದಿಯಲ್ಲಿ ನೀರು ತುಂಬಿಕೊಂಡಿದ್ದು, ಅರ್ಧ ರಸ್ತೆಯನ್ನು ಆವರಿಸಿದೆ. ಶುಕ್ರವಾರ ಬೆಳಗ್ಗಿನವರೆಗೆ ಜಿಲ್ಲೆಯ ಕಡಬದಲ್ಲಿ 85.2 ಮಿ.ಮೀ. ಗರಿಷ್ಠ ಮಳೆ ದಾಖಲಾಗಿದೆ.
ಮಳೆ ವಿವರ: ಸುಳ್ಯ- 74.2 ಮಿ.ಮೀ., ಬೆಳ್ತಂಗಡಿ- 61.2 ಮಿ.ಮೀ., ಪುತ್ತೂರು- 54.6 ಮಿ.ಮೀ., ಮಂಗಳೂರು- 45.0 ಮಿ.ಮೀ., ಬಂಟ್ವಾಳ- 47.6 ಮಿ.ಮೀ. ಮಳೆ ದಾಖಲಾಗಿದೆ.
ಉಡುಪಿಯಲ್ಲಿ ಸಾಧಾರಣ ಮಳೆ: ಮನೆಗಳಿಗೆ ಹಾನಿ
ಉಡುಪಿ: ಜಿಲ್ಲೆಯಲ್ಲಿ ಕಳೆದ 2- 3 ದಿನಗಳಿಂದ ಸಾಧಾರಣವಾಗಿ ಮಳೆಯಾಗುತ್ತಿದೆ. ಶುಕ್ರವಾರ ಒಂದರೆಡು ಬಾರಿ ಜೋರಾಗಿ ಮಳೆ ಬಂದರೂ ನಂತರ ಬಿಡುವಿನ ವಾತಾವರಣ ಇತ್ತು. ಒಂದೆರಡು ಕಡೆಗಳಲ್ಲಿ ಗಾಳಿ ಮಳೆಗೆ ಹಾನಿಯಾಗಿದೆ.
ಉಡುಪಿ ತಾಲೂಕಿನ ಹನೆಹಳ್ಳಿ ಗ್ರಾಮದ ಹಾಡಿಮನೆ ಮೂಡುತೋಟ ಎಂಬಲ್ಲಿ ಕೃಷ್ಣ ಪೂಜಾರಿ ಮನೆ ಮೇಲೆ ಮರ ಬಿದ್ದು ಅವರಿಗೆ ಸುಮಾರು ರು. 75 ಸಾವಿರ ನಷ್ಟವಾಗಿದೆ. ಕುಂದಾಪುರ ತಾಲೂಕಿನ ವಕ್ವಾಡಿಯ ಸುಬ್ಬಣ್ಣ ಶೆಟ್ಟಿ ಹಾಗೂ ಸಕೀನಾ ಅವರ ಮನೆಗಳಿಗೆ ಗಾಳಿ ಮನೆಯಿಂದ ಹಾನಿಯಾಗಿದ್ದು, ತಲಾ ರು. 5 ಸಾವಿರ ನಷ್ಟವುಂಟಾಗಿದೆ.
ಜಿಲ್ಲೆಯಲ್ಲಿ ಮಳೆ ವಿವರ: ಶುಕ್ರವಾರ ಮುಂಜಾನೆ ವರೆಗೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 37.52 ಮಿ.ಮೀ. ಮಳೆ ದಾಖಲಾಗಿದೆ. ಅದರಲ್ಲಿ ಉಡುಪಿ ತಾಲೂಕಿನಲ್ಲಿ 31 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 44.40 ಮಿ.ಮೀ. ಹಾಗೂ ಕುಂದಾಪುರ ತಾಲೂಕಿನಲ್ಲಿ 37.20 ಮಿ.ಮೀ. ಮಳೆ ಸುರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

