ಅನ್ನ, ಜ್ಞಾನದ ಮಹಾಸತ್ರವೇ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ
ವಿಟ್ಲ: ಚಾತುರ್ಮಾಸ್ಯವೆಂದರೆ ಅನ್ನ, ಆನಂದ, ಜ್ಞಾನದ ಮಹಾಸತ್ರ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಶನಿವಾರ, ಮಾಣಿಯ ಪೆರಾಜೆ ಮಠದಲ್ಲಿ 60 ದಿನಗಳ ಕಾಲ ನಡೆಯುವ ವಿಜಯ ಚಾತುರ್ಮಾಸ್ಯ ಪುರಪ್ರವೇಶ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಂಗಳೂರು ಹೋಬಳಿಗೆ ಪ್ರಥಮವಾಗಿರುವ ಈ ಕಾರ್ಯಕ್ರಮ ವಿಜಯ ಸಂವತ್ಸರದಲ್ಲಿ ನಡೆಯುತ್ತಿರುವುದು ವಿಜಯದ ಸಂಕೇತವಾಗಿದೆ. ಮಂಗಳೂರು ಹೋಬಳಿಗೆ ಸಿಕ್ಕಿದ ಈ ಸೌಭಾಗ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಹಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ಕರೆ ನೀಡಿದರು.
ಬೃಹತ್ ವಾಹನ ಜಾಥಾ, ಭವ್ಯ ಸ್ವಾಗತ: ಈ ಸಂದರ್ಭ ಕಲ್ಲಡ್ಕ ಶ್ರೀಉಮಾಶಿವ ಕ್ಷೇತ್ರದಲ್ಲಿ ಶ್ರೀಗಳಿಗೆ ಭವ್ಯ ಸ್ವಾಗತ ನೀಡಲಾಯಿತು. ಬಳಿಕ, ಮಾಣಿ ಪೆರಾಜೆ ಕೋದಂಡರಾಮ ಮಹಾದ್ವಾರದವರೆಗೆ 750ಕ್ಕೂ ಮಿಕ್ಕಿ ವಾಹನಗಳ ಜಾಥಾ ನಡೆಯಿತು. ಅಲ್ಲಿಂದ ಶ್ರೀಗಳನ್ನು ತೆರೆದ ವಾಹನದಲ್ಲಿ ಮಠದವರೆಗೆ ಸಾವಿರದ ಎಂಟು ಸುಮಂಗಲಿಯರ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ರಾಘವೇಶ್ವರ ಶ್ರೀಗಳು ಆಂಜನೇಯನ ದರ್ಶನ ಪಡೆದು, ಚಾರುರ್ಮಾಸ್ಯ ಸಮಿತಿ ಅಧ್ಯಕ್ಷ ಹಾರೆಕೆರೆ ನಾರಾಯಣ ಭಟ್ ದಂಪತಿಯಿಂದ ಧೂಳೀ ಪಾದುಕಾ ಪೂಜೆ ಸ್ವೀಕರಿಸಿದರು.
ಮಹಾ ಮಂಡಲ ನಿಯೋಜಿತ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಜೆಡ್ಡು ರಾಮಚಂದ್ರ ಭಟ್, ಕೆಕ್ಕಾರು ರಾಮಚಂದ್ರ ಭಟ್, ಹಿರಿಯರಾದ ಉಂಚಗೇರಿ ಸುಬ್ರಹ್ಮಣ್ಯ ಶಾಸ್ತ್ರಿ, ಮಂಗಳೂರು ಮಂಡಲ ಅಧ್ಯಕ್ಷ ಕೆ.ಪಿ. ಭಟ್, ಕೋಶಾಧಿಕಾರಿ ಪಕಳಕುಂಜ ಗೋಪಾಲಕೃಷ್ಣ ಭಟ್, ಚಾತುರ್ಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಬಂಗಾರಡ್ಕ ಜನಾರ್ದನ ಭಟ್, ಗಣ್ಯರ ಸಂಪರ್ಕ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು ಇದ್ದರು. ಸಂಘಟನಾ ಕಾರ್ಯದರ್ಶಿ ನೂಜಿ ಕೆ.ಟಿ. ವೆಂಕಟೇಶ್ವರ ಭಟ್ ಸ್ವಾಗತಿಸಿದರು. ಸವಾರಿ ಮುಖ್ಯಸ್ಥ ರಾಘವೇಂದ್ರ ಮಧ್ಯಸ್ಥ ಸಹಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

