ಚಿತ್ರಾಪುರ ಸದ್ಯೋಜಾತ ಶ್ರೀಗಳ ಕೊಡಿಯಾಲ್ ಚಾತುರ್ಮಾಸ
ಮಂಗಳೂರು: ಭಟ್ಕಳ ಶಿರಾಲಿ ಚಿತ್ರಾಪುರ ಮಠದ 11ನೇ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಚಾತುರ್ಮಾಸ ಮಂಗಳೂರಿನ ರಥಬೀದಿ ಬಳಿ ಶ್ರೀ ವಾಮನಾಶ್ರಮ ಸ್ವಾಮೀಜಿ ಸಮಾಧಿ ಸ್ಥಳದಲ್ಲಿ ನಡೆಯಲಿದೆ.
ಕೊಡಿಯಾಲ್ ಚಾತುರ್ಮಾಸ ಜು.22ರ ಗುರುಪೂರ್ಣಿಮೆ ದಿನ ವ್ಯಾಸ ಪೂಜೆಯಿಂದ ಆರಂಭಗೊಳ್ಳಲಿದೆ. ಸೆ.19ರಂದು ಸೀಮೋಲ್ಲಂಘನ ಮೂಲಕ ಕೊನೆಗೊಳ್ಳಲಿದೆ ಎಂದು ಚಿತ್ರಾಪುರ ಮಠ ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್ ಎಣ್ಣೆಮಿಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಾತುರ್ಮಾಸ ಅವಧಿಯಲ್ಲಿ ಪ್ರತಿದಿನ ಅಧ್ಯಾತ್ಮಿಕ ಉದ್ದೀಪನಕ್ಕೆ ಪೂಜೆ, ಸಮಾಲೋಚನೆ, ಭಜನೆ, ಸಂಗೀತ ವೈವಿಧ್ಯಮಯ ಕಾರ್ಯಕ್ರಮ ಜರುಗಲಿದೆ. ಸ್ವಾಮೀಜಿ ಅವರು ಅನುಷ್ಠಾನ, ಸ್ವಾಧ್ಯಾಯ ಮತ್ತು ಶಿವಪೂಜೆ, ದೇವಿ ಪೂಜೆ ನಡೆಸುವರು. ಗಣೇಶ ಚೌತಿ ಸಹಿತ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುವುದು.
ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಪ್ರವಾಸ ದುಸ್ತರವಾಗಿತ್ತು. ಪಾದಚಾರಿಗಳಾಗಿದ್ದ ಸನ್ಯಾಸಿಗಳು ಸಸ್ಯಸಂಕುಲಕ್ಕೆ ಹಾನಿ ಮಾಡಬಾರದು ಎಂಬ ಉದ್ದೇಶದಿಂದ ಅನುಕೂಲ ಸ್ಥಳಗಳಲ್ಲಿ ತಳವೂರಿ ಧಾರ್ಮಿಕ ವಿಧಿಗಳಲ್ಲಿ ತೊಡಗುತ್ತಿದ್ದರು. ಅವರೊಂದಿಗೆ ಗೃಹಸ್ಥರು ಸೇರಿಕೊಂಡು, ಪ್ರಾರ್ಥನೆ, ಉಪವಾಸ, ಜಪತಪಗಳಲ್ಲಿ ತೊಡಗಿ ಅಂತಃಶಕ್ತಿ ಉದ್ದೀಪನಗೊಳಿಸುತ್ತಿದ್ದರು.
ಮಂಗಳೂರಿನ ಚಾತುರ್ಮಾಸ ವಿಶೇಷವೆಂದರೆ ಸದ್ಯೋಜಾತ ಸ್ವಾಮೀಜಿ 11 ವರ್ಷಗಳ ಬಳಿಕ ಮಂಗಳೂರಲ್ಲಿ ವ್ರತ ನಡೆಸುತ್ತಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಸಾರಸ್ವತ ಶಿಕ್ಷಣ ಸಂಸ್ಥೆ ವಿನಂತಿ ಮೇರೆಗೆ ಸ್ವಾಮೀಜಿಯವರು ಗಣಪತಿ ಪ್ರೌಢಶಾಲೆ ಮತ್ತು ಅದರ ಅಂಗಸಂಸ್ಥೆಗಳ ಅಧ್ಯಾತ್ಮಿಕ ಚೇತನರಾಗಿ ಮಾರ್ಗದರ್ಶನ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಿಯಾಲ ಚಾತುರ್ಮಾಸ ಸಮಿತಿ ಸಂಯೋಜಕ ಮಹೇಶ್ ಎಲ್.ಬೊಂಡಾಲ, ಅಧ್ಯಕ್ಷ ಕಿರಣ್ ಎ.ಪಾಣೆಮಂಗಳೂರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

