ದಕ್ಷಿಣ ಕನ್ನಡ

ಆಡಳಿತ ವ್ಯವಸ್ಥೆ ಸುಧಾರಿಸುವುದೇ 'ಆಮ್ ಆದ್ಮಿ' ಉದ್ದೇಶ: ಚಂದ್ರಕಾಂತ್

Published On :

ಮಂಗಳೂರು: 'ರಾಜಕೀಯ ಅಧಿಕಾರವನ್ನು ಪಡೆಯುವುದು ಆಮ್ ಆದ್ಮಿ ಪಕ್ಷದ ಉದ್ದೇಶವಲ್ಲ. ವ್ಯವಸ್ಥೆಯನ್ನು ಸರಿಪಡಿಸಿ ಜನತೆಗೆ ಉತ್ತಮ ಆಡಳಿತ ದೊರಕುವಂತೆ ಮಾಡುವುದೇ ಪಕ್ಷದ ಗುರಿ' ಎಂದು ರಾಜ್ಯ ಖಜಾಂಚಿ ಚಂದ್ರಕಾಂತ್ ಹೇಳಿದರು.
ಭಾನುವಾರ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪಕ್ಷದಲ್ಲಿ ದಿಲ್ಲಿಯ ಬೂತ್‌ಮಟ್ಟದಲ್ಲಿ ಸುಮಾರು 1.26 ಲಕ್ಷ ಸದಸ್ಯರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 70 ಜನಪ್ರತಿನಿಧಿಗಳು ಸ್ಪರ್ಧಿಸುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳನ್ನು ಪಕ್ಷದ ಗಮನಕ್ಕೆ ತಂದು ಅದನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಹರಿಸುವಲ್ಲಿ ಪಕ್ಷ ಹೋರಾಟ ನಡೆಸುತ್ತದೆ ಎಂದರು.
ಅತ್ಯಾಚಾರ ಪ್ರಕರಣ ತಡೆಗಟ್ಟಲು ಸರ್ಕಾರ ಕಾನೂನು ರೂಪಿಸಿದರೂ ಅದಕ್ಕೆ ಅರ್ಥವಿಲ್ಲದಾಗಿದೆ. ಆದರೆ ಪಕ್ಷ ಪ್ರತಿಯೊಬ್ಬ ಮಹಿಳೆಯ ಕಷ್ಟಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸಿ ಅದಕ್ಕೆ ಪರಿಹಾರ ಒದಗಿಸುವಲ್ಲಿ ಸಹಕರಿಸುತ್ತದೆ ಎಂದರು. ಚುನಾವಣೆಯಲ್ಲಿ ಪಕ್ಷ ಸಂಘಟಿತರಾಗಲು ಸುಮಾರು ರು. 14 ಕೋಟಿ ಹಣದ ಅವಶ್ಯಕತೆಯಿದೆ. ಈಗಾಗಲೇ ರಾಜ್ಯದಿಂದ ಸುಮಾರು ರು. 90 ಲಕ್ಷ ಮೊತ್ತವನ್ನು ಪಕ್ಷದ ಚುನಾವಣೆ ಖರ್ಚುವೆಚ್ಚಕ್ಕಾಗಿ ನೀಡಲಾಗಿದೆ. 6 ಜಿಲ್ಲೆಗಳಲ್ಲಿ ಸಕ್ರೀಯವಾಗಿರುವ ಪಕ್ಷದ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ.
ದ.ಕ. ಜಿಲ್ಲೆಯಲ್ಲಿ 500 ಮಂದಿ ಸದಸ್ಯರಿದ್ದು, ಜಿಲ್ಲೆಯ ಮುಖ್ಯ ಸಮಸ್ಯೆಗಳಾದ ಎತ್ತಿನಹೊಳೆ ಯೋಜನೆ ಹಾಗೂ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿರುದ್ಧ ಸ್ಥಳೀಯ ಸಂಘ ಸಂಸ್ಥೆಗಳ ಜತೆ ಸೇರಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಸದಸ್ಯ ರೊಬರ್ಟ್ ರೊಸಾರಿಯೊ, ಮೈಸೂರು ವಿಭಾಗದ ಸಂಚಾಲಕರಾದ ಗಿರಿಧರ್, ಸಂತೋಷ್ ಎನ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.