ದಕ್ಷಿಣ ಕನ್ನಡ

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ: ರವಿರಾಜ್ ಹೆಗ್ಡೆ

Published On :

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹೈನುಗಾರಿಕೆ ಕಷ್ಟ ಎನ್ನುವ ಸನ್ನಿವೇಶದಲ್ಲೂ ಕಳೆದ ಜೂನ್ ತಿಂಗಳಲ್ಲಿ ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಆರ್ಥಿಕ ಮೂಲ ಬಲಪಡಿಸಲು ಗುಣಮಟ್ಟದ ದರದಲ್ಲಿ ಹಾಲು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
ಪಟ್ಟಣದ ಪುತ್ತೂರು ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪುತ್ತೂರು ತಾಲೂಕು ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಒಕ್ಕೂಟದ ವತಿಯಿಂದ ಪ್ಲೆಕ್ಸಿ ಫ್ಯಾಕ್ ಹಾಲನ್ನು ನೀಡಲು ಉದ್ದೇಶಿಸಲಾಗಿದೆ. ಹಾಲಿನ ಉತ್ಪನ್ನಗಳಾದ ಕ್ಯಾಶ್ಯೂ ಬಫರ್ ಇನ್ನಿತರ ಉತ್ಪನ್ನಗಳನ್ನು ಜೋಡಿಸಲು, ಹಾಸನದಿಂದ ಒಣಮೇವಿನ ಅಚ್ಚುಗಳನ್ನು ತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು. ಗೋಮಾಳ ಜಾಗವನ್ನು ಹಾಲು ಉತ್ಪಾದಕ ಸಂಘಗಳಿಗೆ ಕೊಡಬೇಕೆನ್ನುವ ಬೇಡಿಕೆ ಸರ್ಕಾರದ ಹಂತದಲ್ಲಿದೆ ಎಂದು ಅವರು ಹೇಳಿದರು.
ರೈತ ಕಲ್ಯಾಣ ನಿಧಿಯಿಂದ ವಿದ್ಯಾರ್ಥಿ ವೇತನವನ್ನು ನೆಲ್ಯಾಡಿ ಹಾಲು ಉತ್ಪಾದಕ ಸಂಘದ ಲೂಯಿಸ್ ವರ್ಗೀಸ್ ಅವರ  ಪುತ್ರಿ ಕ್ರೆಸಿಕಾ, ಪಾಣಾಜೆ ಹಾಲು ಉತ್ಪಾದಕ ಸಂಘದ ಬಾಲಕೃಷ್ಣ ರೈ ಅವರ ಪುತ್ರಿ ಅನನ್ಯ ರೈ, ಬಿಳಿನೆಲೆ ಹಾಲು ಉತ್ಪಾದಕ ಸಂಘದ ಗಿರೀಶ್ ಭಟ್ ಅವರ  ಪುತ್ರ ಅಜೇಯ್ ಕಡಬ, ಹಾಲು ಉತ್ಪಾದಕ ಸಂಘದ ವಿಶ್ವನಾಥ ಪೆರ್ಲ ಅವರ ಪುತ್ರಿ ಪೂಜಾಶ್ರೀ ರೈಗೆ ವಿತರಿಸಲಾಯಿತು. ಹಾಲು ಒಕ್ಕೂಟ ನಿರ್ದೇಶಕ ಸವಣೂರು ಸೀತಾರಾಮ ರೈ, ವೀಣಾ ಆರ್. ರೈ, ನಿರಂಜನ್ ಬಾವಂತಬೆಟ್ಟು, ಪದ್ಮನಾಭ ಶೆಟ್ಟಿ ಇದ್ದರು. ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳೆಜ್ಜ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ ವಂದಿಸಿದರು. ರಾಮಕೃಷ್ಣ ಭಟ್‌ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.