ವಿದ್ಯಾರ್ಥಿಗಳ ಸವಲತ್ತಿಗೆ ವಿರೋಧಿಸಿದ ನೌಕರರ ಅಮಾನತು ಮಾಡಿದ್ದು ಸಿಂಡಿಕೇಟ್: ಕುಲಪತಿ
ಮಂಗಳೂರು: ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ವಿಕಸನಕ್ಕೆ ಮೈದಾನ ನಿರ್ಮಿಸಲು ಹೊರಟಾಗ ಅಡ್ಡಿ ಮಾಡಿದವರನ್ನು ವಿವಿ ಸಿಂಡಿಕೇಟ್ ಮಂಡಳಿ ಅಮಾನತು ಮಾಡಿದೆ ಎಂದು ಕುಲಪತಿ ಟಿ.ಸಿ.ಶಿವಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ 400 ಮೀಟರ್ ಓಟದ ಟ್ರ್ಯಾಕ್ ನಿರ್ಮಿಸಬಾರದು. ನಿರ್ಮಿಸಿದರೆ ಶಿಕ್ಷಕೇತರ ನೌಕಕರಿಗೆ ಸಮಸ್ಯೆ ಆಗುತ್ತದೆ ಎಂದು ವಿವಿ ರಿಜಿಸ್ಟ್ರಾರ್ಗೆ ಪತ್ರ ಬರೆದರು. ವಿವಿ ಪ್ರಗತಿಗೆ, ವಿದ್ಯಾರ್ಥಿಗಳ ಸವಲತ್ತಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಈ ಪತ್ರ ನೋಡಿ ಸಿಂಡಿಕೇಟ್ ಸದಸ್ಯರುಸಭೆಯಲ್ಲಿ ಸ್ಪಷ್ಟನೆ ಬಯಸಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು ಕುಲಪತಿಯಲ್ಲಿ, ಸಿಂಡಿಕೇಟ್ ಸದಸ್ಯರು, ಅಮಾನತು ಅದೇಶ ಹೊರಡಿಸಿದ್ದೂ ಸಿಂಡಿಕೇಟ್ ಮಂಡಳಿ ಎಂದು ಕುಲಪತಿ ಸ್ಪಷ್ಟಪಡಿಸಿದ್ದಾರೆ. 32 ವರ್ಷದಿಂದ ವಿವಿಯಲ್ಲಿ 400 ಮೀಟರ್ ಓಟದ ಟ್ರ್ಯಾಕ್ ಇಲ್ಲ.
ಕ್ರೀಡೆಯಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂಬ ಕಾರಣಕ್ಕೆ ನ್ಯಾಕ್ ಉತ್ತಮ ಗ್ರೇಡ್ ಪಡೆಯಲು ಕಷ್ಟವಾಗುತ್ತಿದೆ. ಇತ್ತೀಚೆಗೆ ಹುಟ್ಟಿದ ವಿವಿಗಳಲ್ಲಿಯೂ ಇಂಥಾ ಟ್ರ್ಯಾಕ್ ಇದೆ. ಸಿಂಡಿಕೇಟ್ ಮಂಡಳಿ ಕಠಿಣ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆದರಿಕೆ ತಂತ್ರವಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ ಎಂದು ಕುಲಪತಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

