ದಕ್ಷಿಣ ಕನ್ನಡ

ಭೂ ಮಾಫಿಯಾ ಹಿಡಿತದಲ್ಲಿ ನಿಡ್ಡೋಡಿ ಯೋಜನೆ: ದೇವಿಪ್ರಸಾದ್ ಶೆಟ್ಟಿ ಆರೋಪ

Published On :

ಪಡುಬಿದ್ರಿ: ವಿವಾದಿತ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಗುರುತಿಸಲಾಗಿರುವ ದ.ಕ. ಜಿಲ್ಲೆ ಕಲ್ಲಮುಂಡ್ಕೂರು ಗ್ರಾಪಂ ವ್ಯಾಪ್ತಿಯ ನಿಡ್ಡೋಡಿಯಲ್ಲಿ ಕೆಲವು ವ್ಯಕ್ತಿಗಳು ಭೂಗತ ಪಾತಕಿಗಳ ಸಂಪರ್ಕದಲ್ಲಿದ್ದು, ಲ್ಯಾಂಡ್ ಮಾಫಿಯಾ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಮಾರುಕಟ್ಟೆ ದರದಿಂದ ಕಡಿಮೆ ದರದಲ್ಲಿ ಜಾಗ ಖರೀದಿಸಿ, ಪರಿಸರ ಮಾರಕ ಕಂಪನಿಗಳಿಗೆ ಮಾರುವುದಕ್ಕೆ, ಹೋರಾಟ ನಡೆಸುತ್ತಿರುವ ಸಂಘಟನೆಗಳನ್ನು ಒಡೆಯಲು ಪ್ರಯತ್ನಿಸುವುದು ಕೂಡ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ತಕ್ಷಣ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಐಕಳಬಾವ ದೇವಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.
ಇಲ್ಲಿ ಸ್ಥಾಪಿಸಲುದ್ದೇಶಿಸಿರುವ ಪರಿಸರ ಮಾರಕ, ರೈತ ವಿರೋಧಿ, ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗೊಂದಲ ಸೃಷ್ಟಿಸುತ್ತಿವೆ. ಈ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಯೋಜನೆಯ ಪ್ರಸ್ತಾವಿತ ಜಮೀನು ಕೃಷಿಭೂಮಿಯಾಗಿದ್ದು, ಐತಿಹಾಸಿಕವಾಗಿಯೂ ಮಹತ್ವ ಹೊಂದಿದೆ. ಉನ್ನತ ಸರ್ಕಾರಿ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಯೋಜನೆಗೆ ಸಿದ್ಧತೆ ನಡೆಯುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳ ವಿರೋಧವನ್ನೂ ನಿರ್ಲಕ್ಷಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಆದ್ದರಿಂದ ಈ ಯೋಜನೆ ರದ್ದಾಗುವವರೆಗೆ ರಾಜಕೀಯ ರಹಿತ ಹೋರಾಟ ನಡೆಸಬೇಕು ಎಂದು ಶೆಟ್ಟಿ ಆಗ್ರಹಿಸಿದ್ದಾರೆ.
ತಮ್ಮ ಕುಟುಂಬ ಕೂಡ ಈ ಪ್ರದೇಶದಲ್ಲಿ ಜಮೀನು ಹೊಂದಿದ್ದು, ಒಂದಿಂಚೂ ಭೂಮಿಯನ್ನು ಈ ಯೋಜನೆಗೆ ನೀಡುವುದಿಲ್ಲ ಎಂದು ತಮ್ಮ ಕುಟುಂಬ ನಿರ್ಣಯಿಸಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.