ಕೋಮುವಾದದಿಂದ ಮಹಿಳೆ 'ಬಂಧನ'
ಮಂಗಳೂರು: ಕೋಮುವಾದ ಎಂಬುದು ಸಮುದಾಯದೊಳಗೆ ಮಹಿಳೆಯರನ್ನು ಬಂಧನಕ್ಕೆ ಒಳಪಡಿಸುತ್ತಿದೆ ಹೊರತು, ಬಂಧಮುಕ್ತವಲ್ಲ ಎಂದು ಬೆಂಗಳೂರು ವಿಮೋಚನಾ ಸಂಘಟನೆ ಪ್ರಮುಖ್ ಮಮತಾ ಎಸ್. ಯಜಮಾನ್ ಹೇಳಿದ್ದಾರೆ.
ನಗರದ ರೋಶನಿ ನಿಲಯ ಕಾಲೇಜಿನಲ್ಲಿ ಭಾನುವಾರ 'ನೈತಿಕ ಪೊಲೀಸ್ಗಿರಿ- ಪೂರ್ವೊತ್ತರಗಳು' ಎಂಬ ವಿಷಯದ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಸಮುದಾಯದೊಳಗಿನ ಸಂಪ್ರದಾಯಗಳನ್ನು ಹೆಣ್ಣಿನ ಮೇಲೆ ಹೊರಿಸಲಾಗುತ್ತಿದೆ. ಚೌಕಟ್ಟಿನಿಂದ ಹೊರಬಂದ ಮಹಿಳೆ ಸಮಾಜದಲ್ಲಿ ತನ್ನ ಸ್ಥಾನ ಸ್ಥಾಪಿಸುತ್ತಿರುವ ಸಂದರ್ಭದಲ್ಲಿ ಪುರುಷರಿಗೆ ಭಯ ಉಂಟಾಗಿದ್ದು, ಇದನ್ನು ತಡೆಗಟ್ಟಲು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿ ಕೋಮುವಾದದ ವೇದಿಕೆಗಳು ಹಗಲು ದರೋಡೆ ನಡೆಸುತ್ತಿವೆ. ಇದರ ಪರಿಣಾಮ ಒಗ್ಗಟ್ಟಿನಲ್ಲಿ ಗೊಂದಲ ಉಂಟಾಗಿದೆ. ಸಮುದಾಯದ ಎಲ್ಲರೂ ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಹೋರಾಡಿ ನ್ಯಾಯವನ್ನು ಉಳಿಸಲು ಪ್ರಯತ್ನ ಮಾಡಬೇಕು ಎಂದು ಮಮತಾ ಕಿವಿಮಾತು ಹೇಳಿದರು.
ವಕೀಲ ಅರವಿಂದ್ ನಾಯರ್ ಮಾತನಾಡಿ, ಸಮಾನತೆಯ ಹಕ್ಕು ಮಹಿಳೆಯರಿಗೂ ಅನ್ವಯ ಆಗಬೇಕು. ವೈಯುಕ್ತಿಕ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಬದುಕುವ ಹಕ್ಕು ಎಂದರೆ ಘನತೆಗೆ ತಕ್ಕಂತೆ ವರ್ತಿಸಿ ಸಮಾಜದಲ್ಲಿ ಎಲ್ಲರೊಂದಿಗೆ ಜೀವಿಸುವುದಾಗಿದೆ ಎಂದರು.
ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ಮಾಹಿತಿ ನೀಡಿದ ನಂತರ ಕೂಡ ಪೊಲೀಸರಿಗೆ ದಾಳಿಯನ್ನು ತಡೆಗಟ್ಟಲು 15 ನಿಮಿಷಗಳ ಅವಕಾಶವಿತ್ತು ಎಂದರು.
ದಾಳಿಗೊಳಗಾದ ಗುರುಪ್ರಸಾದ್ ಮಾತನಾಡಿ, ಘಟನೆ ಸಂಭವಿಸಿದ ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋದ ಸಂದರ್ಭದಲ್ಲಿಯೂ ಸಂಘಟನೆಗಳು ಬೆದರಿಕೆ ಹಾಕಿದ್ದವು. ಎಲ್ಲ ಘಟನೆ ಜೀವನದ ಪಾಠದಂತಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ವಿಜಯ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

