ದಕ್ಷಿಣ ಕನ್ನಡ

ತುಳುನಾಡ ಸಂರಕ್ಷಣೆಗೆ ಬಲಿಷ್ಠ ಸಂಘಟನೆ ಅಗತ್ಯ: ಜಯರಾಂ ರೈ

Published On :

ಮಂಗಳೂರು: ತುಳುನಾಡಿಗೆ ಅನೇಕ ಕೈಗಾರಿಕೆಗಳು ಲಗ್ಗೆ ಹಾಕುತ್ತಿದ್ದು, ತುಳನಾಡಿನ ಮೇಲೆ ಅತಿಕ್ರಮಣ ನಡೆಯುತ್ತಿದೆ. ಆದ್ದರಿಂದ ತುಳುನಾಡು ಹಾಗೂ ಭಾಷೆಯನ್ನು ಉಳಿಸಲು ಬಲಿಷ್ಠ ಸಂಘಟನೆ ಸೃಷ್ಟಿಯಾಗಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಜಯರಾಂ ರೈ ಹೇಳಿದ್ದಾರೆ. ತುಳುನಾಡಿನ ಸಂರಕ್ಷಣೆ ಮತ್ತು ಬೆಳವಣಿಗೆಯ ಉದ್ದೇಶದಿಂದ ಸಮಸ್ತ ತುಳುವರನ್ನು ಒಗ್ಗೂಡಿಸಿ, ಜಾಗತಿಕ ಮಟ್ಟದ ಸಂಘಟನೆ ರಚನೆಗೆ ಸಂಬಂಧಿಸಿದಂತೆ ನಗರದಲ್ಲಿ ಭಾನುವಾರ ಸಮಾನಾಸಕ್ತರ ಸಭೆಯಲ್ಲಿ ಮಾತನಾಡಿದರು.  ಪುರಾತನದ ಪ್ರಕಾರ ತುಳುನಾಡು ಗೋಕರ್ಣದಿಂದ ರಾಮೇಶ್ವರದವರೆಗೆ ಹರಡಿತ್ತು. ವಿಶಾಲ ಮನೋಭಾವದಿಂದ ತುಳುನಾಡನ್ನು ಅನ್ಯರು ಆಕ್ರಮಿಸಿದ್ದು, ಇದನ್ನು ಉಳಿಸಲು ಸಮಸ್ತ ತುಳುವರು ಭೇದಭಾವ ಬಿಟ್ಟು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು. ಸಾಮಾಜಿಕ ಕಾರ್ಯಕರ್ತ ಅನಂತಕೃಷ್ಣ ಮಾತನಾಡಿ, ತುಳುನಾಡಿನಲ್ಲಿ ಜಾತಿವಾರು ಸಂಘಟನೆಗಳು ಅನೇಕ ಇದ್ದು, ಸಾತ್ವಿಕ ಸಾಮರಸ್ಯದ ಸಂಘಟನೆ ರಚನೆಯಾಗಬೇಕಾಗಿದೆ. ಭಾಷೆಯ ಬಗ್ಗೆ ಇರುವ ಅಭಿಮಾನಕ್ಕೆ ಉತ್ತೇಜಿಸುವಂತೆ ಸಂವಿಧಾನದಲ್ಲಿ ತಿಳಿಸಲಾಗಿದೆ. ಆದ್ದರಿಂದ 1ಕೋಟಿ ಜನಸಂಖ್ಯೆಯಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ಜಾಗತಿಕ ಸಂಘಟನೆಗೆ ತುಳುವರ ಒಗ್ಗಟ್ಟು ಅಡಿಪಾಯವಾಗಲಿ ಎಂದರು. ಸಂಘಟನಾ ಸಮಿತಿಯ ಡಾ. ನಿರಂಜನ ರೈ ಉಪ್ಪಿನಂಗಡಿ ಮಾತನಾಡಿ, ತುಳುಭಾಷೆಯನ್ನು ಕೇವಲ ಪುಸ್ತಕದಲ್ಲಿ ಉಳಿಸಲು ಸಾಧ್ಯವಿಲ್ಲ ಎಂದರು. ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಶ್ರೀನಾಥ್, ತಾಲೂಕು ಮಟ್ಟದಲ್ಲಿ ಸಂಘಟನೆಯ ಸಮಿತಿಯನ್ನು ರಚಿಸಿ, ತುಳುನಾಡಿನ ಭಾಷೆ ಮತ್ತು ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ತುಳುನಾಡಿನ ಸಂರಕ್ಷಣೆಗೆ ಜಾಗತಿಕ ಸಂಘಟನೆ ರಚನೆಯಾಗಬೇಕಾಗಿದ್ದು, ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಂಘಟಿತರಾಗಿ ನಂತರ ರಾಜ್ಯಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವಲ್ಲಿ ಕಾರ್ಯಪ್ರವೃತಗೊಳ್ಳುವಂತೆ ತೀರ್ಮಾನ ಕೈಗೊಳ್ಳಲಾಯಿತು. ಸಾಮಾಜಿಕ ಕಾರ್ಯಕರ್ತರಾದ ಜಗದೀಶ್, ರಾಜೇಶ್, ಯೋಗಿಶ್ ಶೆಟ್ಟಿ ಜಪ್ಪು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.