ಗುರಿ ಹಿರಿದಾಗಿದ್ದಾಗ ಬದುಕು ಹಸನು: ರಾಘವೇಶ್ವರಶ್ರೀ
ವಿಟ್ಲ: ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಸೋಮವಾರ ಜರುಗಿದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ರಾಮಕಥೆ ಪ್ರವಚನ ಮಾಲೆಯಲ್ಲಿ, ಹನುಮ ಪುನರ್ಜನ್ಮ ಪಡೆದು ವಿಶ್ವವಿಕ್ರಮನಾಗಿ ನಿಂತ ದೃಶ್ಯ ಪ್ರದರ್ಶಿಸಲ್ಪಟ್ಟಿತು.
ಗುರಿ ಹಿರಿದಾಗಿದ್ದಾಗ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದು ಆಂಜನೇಯನ ಕಥೆಯ ಮೂಲಕ ಸಂದೇಶ ನೀಡಿದ ಶ್ರೀಗಳು, ಸತ್ಯವನ್ನು ಕಂಡರೆ ಅಸತ್ಯಕ್ಕೆ ಯಾವತ್ತೂ ಭಯವಿರುತ್ತದೆ ಎಂದರು.
ಈ ಇಡೀ ಕಥೆಯನ್ನು ರೂಪಕದಲ್ಲಿ ಪ್ರಸ್ತುತಪಡಿಸಲಾಯಿತು. ಬಾಲ ಹನುಮನ ತುಂಟಾಟ, ವಜ್ರಾಯುಧದೊಂದಿಗೆ ಇಂದ್ರ, ವಜ್ರಾಘಾತ, ವಾಯು, ಬ್ರಹ್ಮ, ಅಂಜನೆ, ಘೋರ ರಾಹುವಿನ ಪಾತ್ರಗಳು ಪ್ರದರ್ಶಿಸಲ್ಪಟ್ಟವು. ಗಾಯಕರ ಕಂಠದಲ್ಲಿ ಹೊರಬಂದ ಹಾಡುಗಳಿಗೆ ನೀರ್ನಳ್ಳಿ ಗಣಪತಿ ಕುಂಚದಿಂದ ಸುಂದರ ಚಿತ್ತಾರಗಳು ಮೂಡಿಬಂದವು. ಕಲಾವಿದರ ಸಾಲಲ್ಲಿ ಪ್ರಸಿದ್ಧ ಗಾಯಕ ಶಶಿಧರ ಕೋಟೆ, ವಿಶ್ವೇಶ್ವರ ಹೆಗಡೆ ಮೂರೂರು ಅವರ ಸೇರ್ಪಡೆಯಾಗಿತ್ತು. ಕೊನೆಯಲ್ಲಿ 'ಜೈ ಜೈ ರಾಮಕಥಾ' ಗಾಯನ ನಡೆಯಿತು.
ಸೋಮವಾರ ರಮೇಶ್ ಪ್ರಸಾದ್ ಗೋಕರ್ಣ ಶ್ರೀಗಳಿಗೆ ಭಿಕ್ಷಾ ಸೇವೆ ನೆರವೇರಿಸಿದ್ದರು. ಮಂಗಳೂರು ದಕ್ಷಿಣ ಹವ್ಯಕ ವಲಯ ರಾಮಕಥಾದ ಪ್ರಾಯೋಜಕತ್ವ ವಹಿಸಿತ್ತು. ಅಧ್ಯಕ್ಷ ಗಣೇಶ ಮೋಹನ ದಂಪತಿ, ಇಮಾಮಿ ಗ್ರೂಪ್ನ ಆರ್.ಎಸ್. ಗೋಯೆಂಕಾ, ಉಷಾ ಅಗರ್ವಾಲ್, ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧ್ಯಕ್ಷ ಬಂಗಾರಡ್ಕ ಜನಾರ್ದನ ಭಟ್, ರಾಮಕಥಾ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮ ಭಟ್, ಕಾರ್ಯದರ್ಶಿ ಸತ್ಯನಾರಾಯಣ ಎಡಂಬಳೆ, ಶ್ರೀಪತಿ ಭಟ್ ಬಳ್ಳೇರಿ, ಹೇರಂಭ ಶಾಸ್ತ್ರಿ ಇದ್ದರು.
ಆಂಜನೇಯನಿಗೆ ಕಣಜ ಸೇವೆ: ರಾಮಕಥಾ ಆರಂಭದಿಂದ ಶ್ರೀಗಳ ಮಾರ್ಗದರ್ಶನದಲ್ಲಿ ಆಂಜನೇಯನಿಗೆ ವಿವಿಧ ರೀತಿಯ ಕಣಜ ಸೇವೆ ಸಮರ್ಪಿಸಲಾಗುತ್ತಿದೆ. ಹನುಮನ ಗುಡಿಯಲ್ಲಿ ವಡೆ ಕಣಜ ಸೇವೆ, ಚಂದನ ಸೇವೆ ಮಾಡಿ ಹನುಮನನ್ನು ಪೂಜಿಸಲಾಗಿದೆ. ಮಂಗಳವಾರ ಮುಸುಂಬಿ ಕಣಜ ಸೇವೆ ನಡೆಸಲಾಗಿದೆ. ಜು.31ರಂದು ತರಕಾರಿ ಕಣಜ, ಆ.1ರಂದು ಹೂವು, 2ರಂದು ಬಾಳೆಹಣ್ಣುಗಳ ಕಣಜ, ಆ.3 ಮತ್ತು4 ರಂದು 1008 ಸೀಯಾಳಾಭಿಷೇಕ ಮತ್ತು ಹಣ್ಣಡಿಕೆಗಳ ಕಣಜ ಸೇವೆ ನಡೆಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

