ಗ್ರಾಪಂ ಕಾಯ್ದಿಟ್ಟ ಜಮೀನಿಗೆ ಕೆಎಫ್ಡಿಸಿ ಅಡ್ಡಿ: ದೂರು
ಸುಳ್ಯ: ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಮೀನನ್ನು ಕನಾಟಕ ಅರಣ್ಯ ಅಭಿವೃದ್ಧಿ ನಿಗಮದವರು ರಬ್ಬರ್ ನೆಡುತೋಪು ಬೆಳೆಸಲು ಯತ್ನಿಸುತ್ತಿದ್ದು, ಇದಕ್ಕೆ ಅವಕಾಶ ನೀಡದಂತೆ ಮುಖ್ಯಮಂತ್ರಿಗಳಿಗೆ ಪಂಚಾಯಿತಿ ವತಿಯಿಂದ ದೂರು ನೀಡಲಾಗಿದೆ.
ಗ್ರಾಮದ 45 ಎಕರೆ ಸ್ಥಳವನ್ನು ಕುಡಿಯುವ ನೀರಿನ ಯೋಜನೆ, ಅಂಬೇಡ್ಕರ್ ಭವನ ನಿರ್ಮಿಸಲು ಮೀಸಲು ಇಡಲಾಗಿದೆ. ಸುಮಾರು 20- 25 ವರ್ಷಗಳಿಂದ ಈ ಸ್ಥಳವೂ ಗ್ರಾಮ ಪಂಚಾಯಿತಿ ಸ್ವಾಧೀನದಲ್ಲಿದ್ದು, ಭೂಮಿ ಸಮತಟ್ಟು ಮಾಡಲಾಗಿದೆ.
ಯಾವುದೇ ಮರಗಿಡಗಳು ಇರುವುದಿಲ್ಲ. ಪ್ರಸ್ತುತ ಅದರ ಪಕ್ಕದಲ್ಲಿ ರಬ್ಬರ್ ಪ್ಲಾಂಟೇಶನ್ ಹೊಸದಾಗಿ ನಿರ್ಮಿಸುತ್ತಿದ್ದು, ಪಂಚಾಯಿತಿ ಕಾಯ್ದಿರಿಸಿದ ಸ್ಥಳವನ್ನು ಅರಣ್ಯ ಸ್ಥಳವೆಂದೂ ಅರಣ್ಯ ಇಲಾಖೆಯವರು ಸಮರ್ಥಿಸುತ್ತಿದ್ದು, ಗ್ರಾಮ ಪಂಚಾಯಿತಿಗೆ ಯಾವುದೇ ಯೋಜನೆಗಳಿಗೆ ಬದಲಿ ಸ್ಥಳವಿರುವುದಿಲ್ಲ. ರಬ್ಬರ್ ಪ್ಲಾಂಟೇಶನ್ ಆದಲ್ಲಿ ಇದರಿಂದ ಪರಿಸರದಲ್ಲಿ ನೀರಿನ ಅಂಶ ಕಡಿಮೆಯಾಗಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

