ಗುಟ್ಕಾ ನಿಷೇಧ ಹಿಂಪಡೆಯುವ ಪ್ರಶ್ನೆಯೇ ಇಲ್ಲ-ಸಚಿವ ಸ್ಪಷ್ಟನೆ
ಮಂಗಳೂರು: ದೇಶದಲ್ಲಿ 20 ರಾಜ್ಯಗಳು ಗುಟ್ಕಾ ನಿಷೇಧಿಸಿದರೂ ಕೂಡಾ, ಹಿಂದಿನ ರಾಜ್ಯ ಸರ್ಕಾರಗಳು ಬೃಹತ್ ಕಂಪನಿಗಳ ಲಾಬಿಗೆ ಮಣಿದು ಗುಟ್ಕಾ ನಿಷೇಧ ಜಾರಿಗೊಳಿಸಿರಲಿಲ್ಲ. ಈಗ ನಾವು ಧೈರ್ಯದಿಂದ ಮಾಡಿದ್ದೇವೆ, ಇದನ್ನು ಹಿಂಪಡೆಯವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 20ರಿಂದ 40 ವರ್ಷದೊಳಗಿನ ಯುವಕರು ಗುಟ್ಕಾ ಚಟಕ್ಕೆ ಬಲಿ ಬೀಳುತ್ತಾರೆ. ಅಂಥವರ ಪ್ರಾಣ ಉಳಿಸಿದ್ದೇವೆ. ಇದರಿಂದ ಎಷ್ಟೊ ಕುಟುಂಬಗಳು ಸಂತಸವಾಗಿದೆ. ರೈತರು ಮೊದಲು ಗುಟ್ಕಾ ಪ್ಯಾಕ್ ತೆರೆದು ನೋಡಲಿ. ಅಲ್ಲಿ ಅಡಕೆಗಿಂತ ವಿಷವೇ ಹೆಚ್ಚಿದೆ. ಜತೆಗೆ ಅಡಕೆ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ. ಸರ್ಕಾರ ಅವರ ಬೆಂಬಲಕ್ಕಿದೆ ಎಂದರು. ಎಲ್ಲ ರಾಜ್ಯ ಎಲ್ಲ ಶಾಲೆಗಳಲ್ಲಿ ಡೆಂಘೀ ತಪಾಸಣೆ ಕೇಂದ್ರ ಮಾಡಲಾಗುವುದು. ಜ್ವರದಿಂದ ಬಳಲುತ್ತಿದ್ದವರು ತಕ್ಷಣ ತಪಾಸಣೆ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

