ಬಾವಿಗೆ ಬಿದ್ದು ಮಣ್ಣಿನಡಿ ಸಿಲುಕಿ ವ್ಯಕ್ತಿ ಸಾವು
ವಿಟ್ಲ: ನೆರೆಮನೆಯ ಬಾವಿಯ ಪಂಪ್ಸೆಟ್ ಎತ್ತಿಡಲು ಹೋದ ವ್ಯಕ್ತಿ ಬಾವಿಗೆ ಜಾರಿ ಮಣ್ಣಿನಡಿ ಸಿಲುಕಿ ಸಾವನಪ್ಪಿದ ಘಟನೆ ಸಮೀಪದ ಪೆರುವಾಯಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಪೆರುವಾಯಿ ಗ್ರಾಮದ ತಚ್ಚಮೆ ನಿವಾಸಿ ದಿ. ಐತ್ತಪ್ಪ ನಾಯ್ಕ ಅವರ ಪುತ್ರ ಈಶ್ವರ ನಾಯ್ಕ (26) ಮೃತರು. ಇವರ ನೆರೆಮನೆಯ ರಾಜೇಶ್ ಮಣಿಯಾಣಿ ಎಂಬವರು ಉಪ್ಪಿನಂಗಡಿಗೆ ತೆರಳಿದ್ದು, ಮನೆಯಲ್ಲಿ ಯಾರು ಇಲ್ಲವಾದ ಕಾರಣ ದೂರವಾಣಿ ಮೂಲಕ ಬಾವಿಯಲ್ಲಿನ ಪಂಪ್ ಎತ್ತಿಡಲು ಭಾನುವಾರ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಪಂಪ್ ಎತ್ತಿಡಲು ಹೋದ ವ್ಯಕ್ತಿ ಬಾವಿಗೆ ಹಾಕಿದ ಮರದ ದಿಣ್ಣೆ ತುಂಡಾಗಿರುವುದನ್ನು ಗಮನಿಸದೆ ಅದರ ಮೇಲೆ ನಿಂತು ಪಂಪು ಎತ್ತಿದರು. ಮರದ ದಿಣ್ಣೆ ತುಂಡಾಗಿ ಬಾವಿಯೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮತ್ತೆ ಕರೆ ಮಾಡಿದ ಸಮಯದಲ್ಲಿ ಸ್ವೀಕರಿಸದ್ದನ್ನು ಗಮನಿಸಿದ ಅವರು, ಸ್ಥಳಕ್ಕೆ ತೆರಳಿದ ಸಂದರ್ಭ ಬಾವಿಗೆ ಹಾಕಿದ ದಿಣ್ಣೆ ತುಂಡಾಗಿರುವುದು ತಿಳಿದಿದೆ.
ಬಳಿಕ ಬಾವಿಯಲ್ಲಿ ಹುಡುಕಾಡಿದರೂ ಸಿಗದ ಸಂದರ್ಭ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿ ಅವರು ರಾತ್ರಿ ಎರಡು ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಮೃತ ದೇಹ ತೆಗೆದಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

