ದಕ್ಷಿಣ ಕನ್ನಡ

ಡಾ.ಶಂಕರ್‌ಗೆ 'ರಾಷ್ಟ್ರೀಯ ಜೈವಿಕ ತಾಂತ್ರಿಕತೆ' ಪ್ರಶಸ್ತಿ

Published On :

ಮಂಗಳೂರು: ಹೈಬ್ರಿಡೋಮ ತಾಂತ್ರಿಕತೆಯ ಮೊನೋಕ್ಲೋನಲ್ ಆಂಟಿಬಾಡಿ ಬಳಸಿ ರೈತರೇ ಶೀಘ್ರವಾಗಿ, ಸುಲಭವಾಗಿ ಹಾಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗ ಪತ್ತೆ ಹಚ್ಚುವ ಕಿಟ್ ಮತ್ತು ಅದನ್ನು ವಾಣಿಜ್ಯೀಕರಣಗೊಳಿಸಿದ್ದನ್ನು ಗುರುತಿಸಿ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ಡೀನ್ ಡಾ.ಕೆ.ಎಂ.ಶಂಕರ್‌ಗೆ ರಾಷ್ಟ್ರೀಯ ಜೈವಿಕ ತಾಂತ್ರಿಕತೆ ಪ್ರಶಸ್ತಿ ನೀಡಲಾಗಿದೆ.  ದೆಹಲಿಯಲ್ಲಿ ಈಚೆಗೆ ನಡೆದ ರಾಷ್ಟ್ರೀಯ ತಾಂತ್ರಿಕ ದಿನದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರು. 2 ಲಕ್ಷ ನಗದು, ಪ್ರಮಾಣಪತ್ರ, ಫಲಕ ಪ್ರದಾನ ಮಾಡಿದರು.  ಸಿಗಡಿ ಕೃಷಿಯಲ್ಲಿ ಮಾರಕವಾದ ಬಿಳಿ ಚುಕ್ಕೆ ವೈರಸ್ ರೋಗ ಹಾಗೂ ಇನ್ನೂ ನಾಲ್ಕು ಇತರೆ ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರದಿಂದ ಬರುವ ಮೀನು ರೋಗ ಪತ್ತೆಹಚ್ಚುವ ಸಾಧನವನ್ನು ಕಂಡುಹಿಡಿದಿದ್ದಾರೆ. ಈ ಐದು ರೋಗಗಳು ಭಾರತದ ಜಲಕೃಷಿಯಲ್ಲಿ ವರ್ಷಕ್ಕೆ ಸುಮಾರು ರು. 1 ಸಾವಿರ ಕೋಟಿ ನಷ್ಟ ಉಂಟು ಮಾಡುತ್ತವೆ. 2008ರಲ್ಲಿ ಜಲಕೃಷಿಯಲ್ಲಿ ಜೈವಿಕ ವಿಜ್ಞಾನ ಬೋಧನೆ ಮತ್ತು ಸಂಶೋಧನೆ ಅಳವಡಿಕೆಗೆ 'ಭಾರತ ರತ್ನ ಡಾ.ಸಿ.ಸುಬ್ರಹ್ಮಣಿಯನ್ ಅತ್ಯುತ್ತಮ ಶಿಕ್ಷಕ' ಪ್ರಶಸ್ತಿ ಪಡೆದಿದ್ದರು. 20 ವರ್ಷಗಳಿಂದ ಡಾ.ಶಂಕರ್, ತಂಡ ಬಯೋಫಿಲ್ಮ್ ಲಸಿಕೆ, ಹೈಬ್ರಿಡೋಮ ತಾಂತ್ರಿಕತೆಯ ಜೈವಿಕ ತಂತ್ರಜ್ಞಾನದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳ ನೆರವಿನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಜಲಕೃಷಿಗೆ ಸಂಬಂಧಿಸಿ ಹಲವು ಜೈವಿಕ ತಾಂತ್ರಿಕತೆ, 50ಕ್ಕೂ ಹೆಚ್ಚು ಅಂ.ರಾ. ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.