ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿ: ಕಾರ್ಪೊರೇಟರ್ ತಂಡ ನಿರೀಕ್ಷಣಾ ಜಾಮೀನು ಅರ್ಜಿ
ಮಂಗಳೂರು: ಅಳಕೆ ಮೈದಾನ ಬಳಿ ಕರ್ತವ್ಯ ನಿರತ ಪೊಲೀಸರ ಲಾಠಿ ಕಿತ್ತುಕೊಂಡು ಹಲ್ಲೆ ನಡೆಸಿದ ಆರೋಪಿ ಕಾರ್ಪೊರೇಟರ್ ಮತ್ತವರ ತಂಡವನ್ನು ಬಂಧಿಸಲು ಪೊಲೀಸರು ಮೀನ ಮೇಷ ಎಣಿಸುತ್ತಿದ್ದಾರೆ.
ಇತ್ತ ಆರೋಪಿ ಕಾರ್ಪೊರೇಟರ್ ಮತ್ತವರ ತಂಡ ನಿರೀಕ್ಷಣಾ ಜಾಮೀನಿಗೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜೂ.15ಕ್ಕೆ ಮುಂದೂಡಿದೆ. ಇದೇ ವೇಳೆಗೆ ಹಲ್ಲೆಗೊಳಗಾದ ಇಬ್ಬರು ಪೊಲೀಸರು 15 ದಿನಗಳ ಅನಾರೋಗ್ಯ ರಜೆ ಮುಗಿಸಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಮೇ 27ರಂದು ಅಳಕೆ ಮೈದಾನದಲ್ಲಿ ಮಧ್ಯರಾತ್ರಿ ವೇಳೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಬಿಜೆಪಿ ಕಾರ್ಪೊರೇಟರ್ ರಘುವೀರ್, ಮಾಜಿ ಕಾರ್ಪೊರೇಟರ್ ಯಶವಂತ್ ಸಹಿತ ಐವರಿದ್ದ ತಂಡದ ವಿರುದ್ಧ ಸ್ಥಳೀಯರೇ ದೂರು ನೀಡಿದ್ದರು.
ಪೊಲೀಸ್ ನಿಯಂತ್ರಣ ಕೊಠಡಿಯಿಂದ ಬಂದ ಸೂಚನೆಯಂತೆ ಪೊಲೀಸರಾದ ದಾಮೋದರ್ ಮತ್ತು ಈಶ್ವರಸ್ವಾಮಿ ಸ್ಥಳಕ್ಕೆ ಧಾವಿಸಿದಾಗ ದುಷ್ಕರ್ಮಿಗಳು ಪೊಲೀಸರನ್ನೇ ದಿಗ್ಬಂಧಿಸಿ ಲಾಠಿಯಿಂದ ಹಲ್ಲೆ ನಡೆಸಿದ್ದರು. ಇವರಿಂದ ತಪ್ಪಿಸಿಕೊಂಡು ಹೋದ ಈಶ್ವರಸ್ವಾಮಿ ಕೇಂದ್ರ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದರು.
ತಮ್ಮ ಜೀವನದ ಕರ್ತವ್ಯ ಅವಧಿಯಲ್ಲಿ ಇಂಥ ದಾರ್ಷ್ಟ್ಯವನ್ನು ಯಾವ ರೌಡಿಗಳೂ ತೋರಿಸಿಲ್ಲ. ಜನಪ್ರತಿನಿಧಿ ಮತ್ತೇರಿಸಿ ಹಲ್ಲೆ ನಡೆಸಿರುವುದು ಆಘಾತ ತಂದಿದೆ ಎಂದು ಇಬ್ಬರು ಗಾಯಾಳು ಪೊಲೀಸರು ಆಪ್ತರ ಬಳಿ ಅವಲತ್ತುಕೊಂಡಿದ್ದರು. ಆದರೆ ಇವರ ಕೂಗು ಮೇಲಧಿಕಾರಿಗಳಿಗೆ ತಲುಪಿಲ್ಲ. ಆರೋಪಿ ಕಾರ್ಪೊರೇಟರ್ಗೆ ಪೊಲೀಸ್ ಇಲಾಖೆಯಲ್ಲಿಯೂ ಗೆಳಯರು ಇರುವುದರಿಂದ ಬಂಧನಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ. ಆರೋಪಿ ಕಾರ್ಪೊರೇಟರ್ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ಸುಮ್ಮನೆ ರಿಸ್ಕ್ ಏಕೆ ಎಂದು ಬಂಧಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಆದರೆ ಪೊಲೀಸರ ಮೇಲೆ ಹಲ್ಲೆ ನಡೆಸಿದರೂ ಪೊಲೀಸರು ಬಂಧಿಸದೆ ಇರುವುದು ಪೊಲೀಸ್ ಇಲಾಖೆ ಸಾಮರ್ಥ್ಯವನ್ನು ಅಣಕಿಸುವಂತೆ ಮಾಡಿದೆ.
ಆರೋಪಿಗಳ ಮೊಬೈಲ್ ಸ್ವಿಚ್ಡ್ ಆಫ್ ಬರುತ್ತಿದೆ, ರಾಜ್ಯವನ್ನೇ ಬಿಟ್ಟು ಬೇರೆಡೆ ಅಡಗಿ ಕುಳಿತಿರುವ ಸಾಧ್ಯತೆ ಇದೆ. ಕೋರ್ಟ್ ಜೂ.15ರಂದು ನೀಡುವ ತೀರ್ಪಿನ ಬಳಿಕ ಪೊಲೀಸರು ಅದರಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಂದರು ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

