ದಕ್ಷಿಣ ಕನ್ನಡ: ನಿರಂತರ ಮಳೆ
ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಅಬ್ಬರ ಕಡಿಮೆಯಾಗಿದ್ದು, ದಿನವಿಡೀ ಬಿಡದೆ ಮಳೆ ಸುರಿದಿದೆ.
ನಗರದ ಪಾಂಡೇಶ್ವರ, ಉಳ್ಳಾಲ, ಧರ್ಮನೂರು, ಕೋಟೆಕಾರ್, ಮಣ್ಣಬೆಟ್ಟು ಬಳಿಯ ಮನೆಗಳಿಗೆ ಮರ ಬಿದ್ದಿದ್ದು, ಮನೆಗಳಿಗೆ ಹಾನಿಯುಂಟಾಗಿದೆ. ಮುಲ್ಕಿ ಕಾರ್ನಾಡು ಬಳಿ ಮನೆಯೊಂದಕ್ಕೆ ಮರ ಬಿದ್ದಿದ್ದು, ಮನೆ ಜಖಂಗೊಂಡಿದೆ. ಉಳ್ಳಾಲ ಉಚ್ಚಿಲ ನಿವಾಸಿ ಚಂದ್ರಶೇಖರ್ ಅವರ ಮನೆ ಸಮುದ್ರ ಕೊರೆತದಿಂದ ಅಪಾಯದಂಚಿನಲ್ಲಿದ್ದು, ಮನೆಯೆದುರಿನ ತೆಂಗಿನಮರಗಳು ನೀರುಪಾಲಾಗಿದೆ. ಮಂಗಳವಾರ ಬೆಳಗ್ಗಿನವರೆಗೆ ಜಿಲ್ಲೆಯ ಬಜ್ಪೆಯಲ್ಲಿ 162.0 ಮಿ.ಮೀ., ಅಧಿಕ ಮಳೆ ಸುರಿದಿದೆ.
ಮಳೆ ವರದಿ: ಬಂಟ್ವಾಳ- 145.2 ಮಿ.ಮೀ., ಮಂಗಳೂರು- 140.5 ಮಿ.ಮೀ., ಮೂಡುಬಿದಿರೆ- 118.2 ಮಿ.ಮೀ., ಸುಳ್ಯ- 118.2 ಮಿ.ಮೀ., ಪುತ್ತೂರು- 91.5 ಮೀ.ಮೀ., ಬೆಳ್ತಂಗಡಿ- 73.6 ಮೀ.ಮೀ., ಕಡಬ- 84.0 ಮಿ.ಮೀ., ಮಳೆ ದಾಖಲಾಗಿದೆ.
ನಾಟಕ ಡಿಪ್ಲೋಮಾ ತರಬೇತಿಗೆ ಅರ್ಜಿ ಆಹ್ವಾನ
ಕುಂದಾಪುರ; ಕುಂದಾಪುರದ ರಂಗ ಅಧ್ಯಯನ ಕೇಂದ್ರ 2013-14ನೇ ಸಾಲಿನ ಒಂದು ವರ್ಷ ಅವಧಿಯ ನಾಟಕ ಡಿಪ್ಲೋಮಾ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಇದು ಪೂರ್ಣಾವಧಿ ಕೋರ್ಸ್ ಆಗಿದ್ದು ಆ.1ರಿಂದ ಮೇ 31ರವರೆಗೆ ನಡೆಯಲಿದೆ. ತರಗತಿಗಳು ಪ್ರತಿದಿನ ಬೆಳಗ್ಗೆ 6.30ರಿಂದ 9 ಗಂಟೆ ವರೆಗೆ ನಡೆಯಲಿದೆ. ತರಬೇತಿಗೆ ಗರಿಷ್ಠ 20 ಮಂದಿಗೆ ಅವಕಾಶವಿದ್ದು, ತರಬೇತಿಯಲ್ಲಿ ತೇರ್ಗಡೆಯಾದವರಿಗೆ ಹಂಪಿ ಕನ್ನಡ ವಿವಿ ಪ್ರಮಾಣ ಪತ್ರ ನೀಡಲಿದೆ. ಆಯ್ಕೆಯಾದವರಿಗೆ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುತ್ತದೆ. ಅಭ್ಯರ್ಥಿಗಳ ಕನಿಷ್ಠ ಅರ್ಹತೆ ಎಸ್ಎಸ್ಎಲ್ಸಿ ತೇರ್ಗಡೆಯಾಗಿರಬೇಕು. ರಂಗಭೂಮಿಯಲ್ಲಿ ವಿಶೇಷ ಹಿನ್ನೆಲೆ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಸಕ್ತರು: ನಿರ್ದೇಶಕರು, ರಂಗ ಅಧ್ಯಯನ ಕೇಂದ್ರ, ಭಂಡಾರ್ಕಾರ್ಸ್ ಕಾಲೇಜು ವಠಾರ, ಕುಂದಾಪುರ ಇಲ್ಲಿಗೆ 100 ಡಿಡಿ ಸಲ್ಲಿಸಿ ಅರ್ಜಿ ಪಡೆಯಬಹುದು.
ಡಿಡಿಯನ್ನು: ನಿರ್ದೇಶಕರು, ರಂಗ ಅಧ್ಯಯನ ಕೇಂದ್ರದ ಹೆಸರಿನಲ್ಲಿ ಪಡೆಯಬೇಕು. ಅರ್ಜಿ ಸಲ್ಲಿಸಲು ಜು.3 ಕೊನೆ ದಿನ. ಜು.22ರಿಂದ ರಂಗ ಅಧ್ಯಯನ ಕೇಂದ್ರದಲ್ಲಿ ಸಂದರ್ಶನ ನಡೆಯಲಿದೆ. ವಿವರಗಳಿಗೆ: 9449105052ನ್ನು ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

