ಬಜ್ಪೆ ಸಂತ್ರಸ್ತರ ನೆರವಿಗೆ ಧಾವಿಸಿದ ಸಹೃದಯರು; ಹಣ, ಆಹಾರ ಪೂರೈಕೆ
ಕ.ಪ್ರ.ವಾರ್ತೆ ಮಂಗಳೂರು ಜೂ.20
ಬಜ್ಪೆ ಕಾಂಪೌಂಡ್ ಕುಸಿದು ಮನೆ ಕಳೆದುಕೊಂಡು, ನಿರ್ಗತಿಕರಾದವರ ಕಣ್ಣೀರು ಒರೆಸುವ ಕಾರ್ಯಕ್ಕೆ ಅನೇಕ ಸಹೃದಯರು ಮುಂದೆ ಬಂದಿದ್ದಾರೆ.
ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಯಾಧ್ಯಕ್ಷ ಜಗದೀಶ್ ಸಿ. ಶೆಟ್ಟಿ ಸಂತ್ರಸ್ತ ಕುಟುಂಬಗಳಿಗೆ ನಗದು, ಅಕ್ಕಿ, ಮನೆ ಸಾಮಗ್ರಿ, ತೆಂಗಿನಕಾಯಿ, ಊಟ ಮತ್ತಿತರೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಸಂತ್ರಸ್ತರನ್ನು ಸಮೀಪದ ಮಳವೂರು ಆಂಗ್ಲ ಮಾಧ್ಯಮ ಶಾಲೆಗೆ ಕರೆಯಿಸಿಕೊಂಡು ಅವರಿಗೆ ಸಾಂತ್ವನ ಹೇಳಿ, ನೆರವು ನೀಡಿದರು. ಇಂಥ ಸಂದರ್ಭದಲ್ಲಿ ಸಾಮರ್ಥ್ಯ ಇದ್ದವರು ನೆರವು ನೀಡಬೇಕು ಎಂದು ಜಗದೀಶ್ ಹೇಳಿದರು. ಬಡ ಮತ್ತು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತವಾಗಿ ವಿದ್ಯೆ ನೀಡುವ ಭರವಸೆ ನೀಡಿದರು. ಇದ್ದ ಒಬ್ಬಳೇ ಅಕ್ಕನನ್ನೂ ಕಳೆದುಕೊಂಡು ಅನಾಥನಾದ ಬಾಲಕ ರವಿಶಂಕರನನ್ನು ಜಗದೀಶ್ ದತ್ತು ತೆಗೆದುಕೊಂಡರು. ಉಚಿತ ವಿದ್ಯಾಭ್ಯಾಸ ಮತ್ತು ಸಕಲ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಭರವಸೆ ನೀಡಿದರು. ದುರಂತದಲ್ಲಿ ಮೃತಪಟ್ಟ 2 ಕುಟುಂಬಗಳಿಗೆ ರೆಡ್ಕ್ರಾಸ್ ಸಂಸ್ಥೆ 3 ಕಿಟ್ ನೀಡಿದೆ. ಈ ಕಿಟ್ನಲ್ಲಿ ಔಷಧ, ಬೆಡ್ಶೀಟ್, ಕುಕ್ಕರ್ ಹೀಗೆ ಗೃಹೋಪಯೋಗಿ ಸಾಮಗ್ರಿಗಳಿವೆ. ನಮಗೆ ನೆರವು ನೀಡಿದವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಸಂತ್ರಸ್ತೆ ಸುಜಾತ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

