ದಕ್ಷಿಣ ಕನ್ನಡ

ಕಿಂಡಿ ಅಣೆಕಟ್ಟು ಉದ್ಘಾಟನೆ ಮರುದಿನವೇ ನೀರು ಖಾಲಿ!

Published On :

ವಿಟ್ಲ: ಕಿಂಡಿ ಅಣೆಕಟ್ಟು ಉದ್ಘಾಟನೆಯಾದ ಮರುದಿನವೇ ನೀರೆಲ್ಲ ಬತ್ತಿಹೋಗಿ ಇಡೀ ಯೋಜನೆಯೇ ನೀರುಪಾಲಾದ ಸನ್ನಿವೇಶ ಕೊಳ್ನಾಡು ಗ್ರಾಮದ ಕಟ್ಟತ್ತಿಲಮಠ ಎಂಬಲ್ಲಿ ಬೆಳಕಿಗೆ ಬಂದಿದೆ.
ಕೊಳ್ನಾಡು ಗ್ರಾಮದ ಕಟ್ಟತ್ತಿಲಮಠ ಎಂಬಲ್ಲಿ ದ.ಕ. ಜಿಪಂ. ಅನುದಾನದಿಂದ ಇತ್ತೀಚೆಗಷ್ಟೆ ನಿರ್ಮಾಣವಾದ ಬರೋಬ್ಬರಿ ರು. ಹತ್ತು ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು ಮರುದಿನವೇ ಬತ್ತಿಹೋಗಿದೆ. ಕಿಂಡಿ ಅಣೆಕಟ್ಟು ಕಾಮಗಾರಿ ನಡೆಯುತ್ತಿದ್ದಾಗ ಆರಂಭದಲ್ಲೇ ಸ್ಥಳೀಯರು ಅಡಿಪಾಯದ ಬಗ್ಗೆ ತೀವ್ರ ಆಕ್ಷೇಪ ಮಾಡಿದ್ದಲ್ಲದೆ, ಎಂಜಿನಿಯರ್ ಮತ್ತು ಸ್ಥಳೀಯ ಗ್ರಾಪಂಗೆ ವಿಚಾರ ತಿಳಿಸಿದ್ದರು. ಆದರೆ ಬಡ ಕೃಷಿಕರ ದೂರಿಗೆ ಕ್ಯಾರೇ ಅನ್ನದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ.
ಕಳಪೆ ಕಾಮಗಾರಿ: ಯಾವುದೇ ಅಣೆಕಟ್ಟು ಕಟ್ಟಬೇಕಾದರೆ ಮೇಲ್ಪದರವಾದ ಮರಳಿನಿಂದ ಅಡಿಭಾಗದ ಬಂಡೆಕಲ್ಲುಗಳ ಹಾಸು ಸಿಗುವವರೆಗೆ ಕಾಂಕ್ರಿಟ್ ಹಾಕಿ ಗಟ್ಟಿ ಮಾಡಬೇಕು. ಆದರೆ ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಮೊದಲು ಅಡಿಪಾಯದ ಆಳ ಸಾಕಷ್ಟು ಮಾಡದೆ ಮೇಲ್ಭಾಗದಲ್ಲೇ ಕಾಂಕ್ರಿಟ್ ಹಾಕಿದ್ದರಿಂದ ಹೊಳೆಯ ನೀರೆಲ್ಲಾ ಸೋರಿಕೆಯಾಗಿದೆ ಎಂಬುದು ಕೃಷಿಕರ  ಆರೋಪ.
ಇಷ್ಟೆಲ್ಲ ಆಗಿ ಅಣೆಕಟ್ಟು ಉದ್ಘಾಟನೆಯೇನೋ ಆಗಿತ್ತು. ಆದರೆ 24 ಗಂಟೆಗಳಲ್ಲೇ ಹೊಳೆ ನೀರು ಅಣೆಕಟ್ಟಿನ ಅಡಿಪಾಯದ ಮೂಲಕ ಹೊರಗೆ ಸೋರಿಕೆಯಾಗಿ ಸಂಪೂರ್ಣ ಬತ್ತಿ ಮರುಭೂಮಿಯಂತಾಗಿದೆ. ಗ್ರಾಮದ ಕಿಂಡಿ ಅಣೆಕಟ್ಟು ಕೃಷಿಗೆ ಅನುಕೂಲವಾಗುವ ಬದಲು ಗುತ್ತಿಗೆದಾರರ ಜೇಬು ಗಟ್ಟಿ ಮಾಡಿದೆ ಎನ್ನುವುದು ಗ್ರಾಮಸ್ಥರ ಆರೋಪ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.