ದಕ್ಷಿಣ ಕನ್ನಡ

ಬಿಜೆಪಿ ಚುನಾವಣೆಗೆ ಹೆದರಿಲ್ಲ: ಡಿವಿಎಸ್

Published On :

ಸುಳ್ಯ/ಪುತ್ತೂರು: ಬಿಜೆಪಿ ಯಾವತ್ತೂ ಚುನಾವಣೆಗೆ ಹೆದರುವ ಪಕ್ಷವಲ್ಲ. ಮೀಸಲಾತಿ ಪ್ರಕಾರ ಅರ್ಹರಿಗೆ ಹೆಚ್ಚಿನ ಅವಕಾಶ ನೀಡಲು ಚುನಾವಣೆ ಮುಂದೂಡಿಕೆಗೆ ಎಲ್ಲರ ಅಪೇಕ್ಷೆಯಂತೆ ಬಯಸಿತ್ತೇ ಹೊರತು, ಚುನಾವಣೆ ಮುಂದೂಡುವುದು ಸರ್ಕಾರದ ಉದ್ದೇಶವಾಗಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.
ಸುಳ್ಯ ನಗರ ಪಂಚಾಯಿತಿ ಚುನಾವಣೆ ಸಲುವಾಗಿ ಬಿಜೆಪಿ ಸರ್ಕಾರದ ಸಾಧನೆಗಳ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ, ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿ, ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳಿತ್ತು ನಿಜ. ಆದರೆ, ಈ ಗೊಂದಲಗಳಿಂದಾಗಿ ಒಂದೇ ಒಂದು ದಿನವೂ ಆಡಳಿತ ಯಂತ್ರ ಸ್ಥಗಿತಗೊಂಡ, ಅಭಿವೃದ್ಧಿಗೆ ಅಡ್ಡಿಯಾದ ಉದಾಹರಣೆಯಿಲ್ಲ ಎಂದರು.
ಭ್ರಷ್ಟಾಚಾರಿಗಳು, ಸ್ವಜನ ಪಕ್ಷಪಾತ ಮಾಡಿದವರು, ಅರೋಪ ಹೊತ್ತವರು, ಆರೋಪ ತಂದವರು ಇವರೆಲ್ಲ ಈಗ ಪಕ್ಷದಿಂದ ಹೊರಹೋಗಿ ಬಿಜೆಪಿ ಶುದ್ಧ ಪಕ್ಷವಾಗಿದೆ ಎಂದು ಹೇಳಿದರು.
ಶಾಸಕ ಎಸ್. ಅಂಗಾರ, ಕೆಎಫ್‌ಡಿಸಿ ಅಧ್ಯಕ್ಷ ಎಸ್.ಎನ್. ಮನ್ಮಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಲಸ್ಯ ರೈ ಮೊದಲಾದವರು ಇದ್ದರು. ದಲಿತ ನಾಯಕಿ ಸರಸ್ವತಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಭೆಗೆ ಮೊದಲು ಪ್ರಚಾರ ಅಭಿಯಾನ ಜಾಥಾ ನಡೆಯಿತು.
ಮತ್ತೆ ಬಿಜೆಪಿ ಆರಿಸಿ-ಡೀವಿ: ಈ ಭಾಗದ ಜನತೆಯಲ್ಲಿ ಗೂಡಾಂಗಿರಿಯಂತಹ ಕಲ್ಪನೆಗಳನ್ನು ದೂರವಿರಿಸಲು ಹಾಗೂ ಜನರ ಕಣ್ಣೀರನ್ನು ಒರಸಬೇಕಾದರೆ ಮತ್ತೆ ಬಿಜೆಪಿಯನ್ನು ಬಹುಮತಗಳಿಂದ ಆರಿಸಿ ಎಂದು ಡಿ.ವಿ ಸದಾನಂದ ಗೌಡ ಹೇಳಿದರು.
ಗುರುವಾರ ಪುತ್ತೂರು ಜೈನಭವನದಲ್ಲಿ ನಡೆದ ಬಿಜೆಪಿ ನಗರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಸರ್ಕಾರ ಹಾಗೂ ಪಕ್ಷದಲ್ಲಿ ಇಂಥ ಗೊಂದಲಗಳಿದ್ದರೂ ಆಡಳಿತ ಯಂತ್ರಕ್ಕೆ ಒಂದಷ್ಟು ಚ್ಯುತಿ ಬಾರದಂತೆ ಆಡಳಿತ ನಡೆಸಿದ ಕೀರ್ತಿ ರಾಜ್ಯದ ಬಿಜೆಪಿ ಸರ್ಕಾರದ ಹೆಗ್ಗಳಿಕೆಯಾಗಿದೆ ಎಂದರು.
ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿ,  ಪುತ್ತೂರಿನ ಬಿಜೆಪಿ ಆಡಳಿತದಲ್ಲಿ ಯಾವುದೇ ರೀತಿಯ ಭಿನ್ನಮತ ಹಾಗೂ ಭ್ರಷ್ಟಾಚಾರ ಆಗಿಲ್ಲ ಎಂದರು.
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ದೀಪ ಸುರೇಶ್ ಅವರನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.