ವಾಸುದೇವ ಅಡಿಗ ತಾಯಿ ಡಿಎನ್ಎ ಪರೀಕ್ಷೆಗೆ ನ್ಯಾಯಾಲಯ ಆದೇಶ
ಕ.ಪ್ರ. ವಾರ್ತೆ ಕುಂದಾಪುರ ಮಾ.5
ಆರ್ಟಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತ ವಂಡಾರು ವಾಸುದೇವ ಅಡಿಗ ಅವರ ಹತ್ಯೆಯಾಗಿ 2 ತಿಂಗಳಾಗುತ್ತಿದ್ದು, ಕೊಲೆಯಾದ ವ್ಯಕ್ತಿ ಅವರೇ ಎಂಬುದನ್ನು ದೃಢಪಡಿಸಲು ಅವರ ತಾಯಿಯ ಡಿಎನ್ಎ ಪರೀಕ್ಷೆಗೆ ನ್ಯಾಯಾಲಯ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಮೃತ ಅಡಿಗ ಅವರ ತಾಯಿ ಶೃಂಗಾರೇಶ್ವರಿ ಅವರು ಸೋಮವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರಾಗಿ, ರಕ್ತದ ಮಾದರಿಯನ್ನು ವೈದ್ಯರಿಗೆ ನೀಡಿದ್ದಾರೆ.
ಅಡಿಗ ಅವರು ಅಪಹರಣಗೊಂಡು ವಾರದ ನಂತರ, ಚಿಕ್ಕಮಗಳೂರಿನಲ್ಲಿ ಕೆರೆಯೊಂದರಲ್ಲಿ ಶವ ಪತ್ತೆಯಾಗಿತ್ತು. ಆಗ ಶವದ ಜೊತೆ ಸಿಕ್ಕಿದ್ದ ಕರವಸ್ತ್ರದಲ್ಲಿ ಡಿಟಿಎಚ್ ರಿಚಾರ್ಜ್ ಬಿಲ್ ಆಧಾರದಲ್ಲಿ ಅದು ಅಡಿಗರ ಶವ ಎಂದು ಪತ್ತೆಯಾಗಿತ್ತು. ಅದನ್ನು ಬಿಟ್ಟರೆ ಬೇರೆ ಪುರಾವೆಗಳು ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ನ್ಯಾಯಾಲಯವು ಅಡಿಗ ಅವರ ತಾಯಿಯ ರಕ್ತವನ್ನು ಡಿಎನ್ಎ ಪರೀಕ್ಷೆಗೊಳಪಡಿಸುವಂತೆ ಸೂಚಿಸಿತ್ತು.
ನ್ಯಾಯಾಲಯಕ್ಕೆ ಹಾಜರಾದ ಶೃಂಗಾರೇಶ್ವರಿ ಅವರಿಂದ ತಜ್ಞ ವೈದ್ಯರಾದ ಡಾ. ರಾಬರ್ಟ್ ಅವರು ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತ ಸಂಗ್ರಹಿಸಿದರು. ಸಂಗ್ರಹಿಸಲಾದ ರಕ್ತವನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಿದ್ದು, ಅಲ್ಲಿಯ ವರದಿಯ ನಂತರ ಮೃತದೇಹದ ದೃಢೀಕರಣವಾಗಲಿದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

