ದಕ್ಷಿಣ ಕನ್ನಡ

ಅಂಗಡಿಯೊಳಗೆ ಗಂಟೆಗಟ್ಟಲೆ ಉಳಿದ ವಿದ್ಯಾರ್ಥಿನಿಯರು: ತಪ್ಪಿದ ಸಂಘರ್ಷ

Published On :

ಉಪ್ಪಿನಂಗಡಿ: ಅನ್ಯಕೋಮಿನ ವ್ಯಕ್ತಿಯ ಅಂಗಡಿಯೊಳಗೆ ಗಂಟೆಗಟ್ಟಲೆ ಬಾಕಿಯಾದ ವಿದ್ಯಾರ್ಥಿನಿಯರ ಬಗ್ಗೆ ಜಾಗೃತ ಸಮಾಜ ತ್ವರಿತ ಕಾರ್ಯಾಚರಣೆ ನಡೆಸಿ ಸಂಭವನೀಯ ಸಂಘರ್ಷ ತಪ್ಪಿಸಿದ ಘಟನೆ ಮಂಗಳವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮಂಗಳವಾರ ಇಲ್ಲಿನ ವಿದ್ಯಾರ್ಥಿನಿ ನಿಲಯದ ಐವರು ವಿದ್ಯಾರ್ಥಿನಿಯರು ಬ್ಯಾಂಕ್ ರಸ್ತೆಯ ಅಂಗಡಿಯೊಳಕ್ಕೆ ಹೋದವರು ಒಂದುವರೆ ಗಂಟೆ ಕಾಲ ಹೊರ ಬಾರದಿರುವುದನ್ನು ಸ್ಥಳೀಯರು ಗಮನಿಸಿದ್ದರು. ಈ ಬಗ್ಗೆ ಸುದ್ದಿ ಹಬ್ಬಿ ಹಲವಾರು ವದಂತಿ ನಿರ್ಮಾಣವಾಗಿ, ಯುವಕರ ಗುಂಪು ಅಂಗಡಿಯೊಳಕ್ಕೆ ದಾಳಿ ನಡೆಸುವ ಸಾಧ್ಯತೆ ನಿರ್ಮಾಣವಾಗಿತ್ತು.
ಈ ಸೂಕ್ಷ್ಮತೆಯ ಸಂದರ್ಭದಲ್ಲಿ ಜಾಗೃತ ನಾಗರಿಕರು ಅಂಗಡಿಯೊಳಗೆ ಅನಪೇಕ್ಷಿತ ಗ್ರಾಹಕರಾಗಿದ್ದ ವಿದ್ಯಾರ್ಥಿನಿಯರನ್ನು ಹೊರ ಹೋಗುವಂತೆ ಸೂಚಿಸಿದ್ದರು.
ಕೂಡಲೆ ವಿದ್ಯಾರ್ಥಿನಿಯರು ಅಂಗಡಿಯಿಂದ ಕಾಲ್ಕಿತ್ತರು.
ಅವರನ್ನು ಹಿಂಬಾಲಿಸಿದ ಗುಂಪು, ವಿದ್ಯಾರ್ಥಿನಿಯರಿಗೆ, ಸಮಾಜದಲ್ಲಿನ ಸಂಭಾವ್ಯ ಅಪಾಯವನ್ನು ಮನದಟ್ಟು ಮಾಡಿ, ಇಂತಹ ವರ್ತನೆ ಕಂಡು ಬಂದರೆ ಮನೆ ಮಂದಿಗೆ ತಿಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.