ಎಚ್‌ಡಿಕೆ ಯುವಸೇನೆ ಅಸ್ತಿತ್ವಕ್ಕೆ; ಪ್ರದೀಪ್ ಪದಗ್ರಹಣ
ಮಂಗಳೂರು: ಕೋಮುಸಾಮರಸ್ಯ, ಶಾಂತಿ ಸಹಬಾಳ್ವೆಗಾಗಿ ಯುವಜನಾಂಗವನ್ನು ಸಂಘಟಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ.ಕೆ. ಅದರ್ಶವಾಗಿಟ್ಟುಕೊಂಡ ಎಚ್‌ಡಿಕೆ ಯುವಸೇನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಜಿಲ್ಲಾ ಎಚ್‌ಡಿಕೆ ಯುವಸೇನೆ ಅಧ್ಯಕ್ಷರಾಗಿ ಯುವ ಉದ್ಯಮಿ ಪ್ರದೀಪ್ ಪ್ರಭಾಕರ್ ಅವರನ್ನು ರಾಜ್ಯ ಎಚ್‌ಡಿಕೆ ಯುವಸೇನೆ ಅಧ್ಯಕ್ಷ ಶರಣ್ ಗೌಡ ನೇಮಕಗೊಳಿಸಿರುವುದಾಗಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಂಗಳವಾರ ಘೋಷಿಸಿದರು. ಪದಗ್ರಹಣ ಮಾಡಿದ ಪ್ರದೀಪ್ ಪ್ರಭಾಕರ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿಯವರ ತತ್ವ, ಆದರ್ಶ, ಜನಪರ ಕಾಳಜಿ ಮಾದರಿಯಾಗಿಟ್ಟುಕೊಂಡು ಯುವಸೇನೆ ಕಾರ್ಯಾಚರಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಧರ್ಮಗಳ ಜನರು ಪರಸ್ಪರ ಅನ್ಯೋನ್ಯವಾಗಿರಲು, ಸರ್ವಧಮ ಸಮಭಾವ ಪರವಾಗಿ, ಕೋಮು ದ್ವೇಷಿಗಳ ವಿರುದ್ಧ ಕೆಲಸ ಮಾಡಲಿದೆ. ಎಲ್ಲ ವರ್ಗದ ಯುವಕ, ಯುವತಿಯರನ್ನು ಸಂಘಟಿಸುತ್ತೇವೆ ಎಂದರು. ಜೆಡಿಎಸ್‌ನ ಮಾತೃಘಟಕದ ಅದೇಶದಂತೆ ಎಲ್ಲ ಘಟಕಗಳ ಜತೆ ಹೊಂದಾಣಿಕೆಯಿಂದ ಕೆಲಸ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮೀನುಗಾರಿಕೆ ಘಟಕ ರತ್ನಾಕರ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಪೂಜಾರಿ, ವಲಯ ಅಧ್ಯಕ್ಷ ಗೋಪಾಲಕೃಷ್ಣ ಅತ್ತಾವರ, ಯುವಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀನಾಥ್ ರೈ, ಮಂಗಳೂರು ವಲಯ ಎಚ್‌ಡಿಕೆ ಸೇನೆ ಅಧ್ಯಕ್ಷ ಸಂದೀಪ್ ಸಾಲ್ಯಾನ್, ಮೀನುಗಾರಿಕೆ ಘಟಕ ತಾಲೂಕು ಅಧ್ಯಕ್ಷ ಶರತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುನೀರ್ ಮುಕ್ಕಚ್ಚೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

