ಕಾಂಗ್ರೆಸ್ ತಾಕತ್ತಿದ್ದರೆ ನೇರ ಸ್ಪರ್ಧೆಗೆ ಇಳಿಯಲಿ: ಜೆಡಿಎಸ್
ಮಂಗಳೂರು: 'ಜೆಡಿಎಸ್ ಗೆಲವು ಸಾಧಿಸಿದರೆ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ' ಎಂಬ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ಮಾತು ಉದ್ಧಟತನವಾಗಿದೆ. ತಾಕತಿದ್ದರೆ ನೇರ ಸ್ಪರ್ಧೆಗಿಳಿಯಲಿ ಎಂದು ಜೆಡಿಎಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕ ಅಧ್ಯಕ್ಷ ಡಿ.ಎಂ. ಅಸ್ಲಾಂ ಹೇಳಿದ್ದಾರೆ. ಕುದ್ರೋಳಿ, ಬಂದರ್ ಪ್ರದೇಶದ ಮತದಾರರ ಬಳಿ ಜೆಡಿಎಸ್ಗೆ ಮತ ನೀಡಬೇಡಿ, ಮತ್ತೆ ಜಯಗಳಿಸಿದರೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡುತ್ತದೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಜನರಲ್ಲಿ ಮತ ಕೇಳುತ್ತಿದೆ ಹೊರತು ಕಾಂಗ್ರೆಸ್, ಬಿಜೆಪಿಗೆ ಮತ ಹಾಕಬೇಡಿ ಎಂದಲ್ಲ ಎಂದು ಟೀಕಿಸಿದರು. ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡುವ ಅವಶ್ಯಕತೆ ಇಲ್ಲ. ಎರಡೂ ಪಕ್ಷಗಳನ್ನು ವಿರೋಧಿಯಾಗಿಯೇ ಕಾಣಲಾಗುತ್ತಿದೆ. ಬಿಜೆಪಿ ಸರ್ಕಾರದ ಮೇಲಿದ್ದ ಭರವಸೆ 5ವರ್ಷದಲ್ಲಿ ಜನರಿಂದ ಮರೆಯಾಗಿದೆ. ಮತದಾರರು ನೊಂದಿದ್ದು, ರಾಜಕೀಯ ಪರಿಸ್ಥಿತಿ ಬೇಡ ಎಂಬ ಮನಃಸ್ಥಿತಿ ಹೊಂದಿದ್ದಾರೆ ಎಂದರು. ರಾಜ್ಯ ಉಪಾಧ್ಯಕ್ಷ ಸುಶೀಲ್ ನೊರೆನ್ಹಾ, ಪಾಲಿಕೆ ಸದಸ್ಯ ಅಜೀಜ್ ಇದ್ದರು.
ಬಿಜೆಪಿ ಅಧಿಕಾರಿಗಳ ಪ್ರಭಾವ: ಐವನ್ ಡಿಸೋಜ ಆರೋಪ
ಮಂಗಳೂರು: ಬಿಜೆಪಿ ಬೂತ್ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಪ್ರಭಾವ ಬೀರುತ್ತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಆರೋಪಿಸಿದರು. ಅಧಿಕಾರಿಗಳು ತಾರತಮ್ಯ ಮಾಡಿದರೆ ನಾವು ಪ್ರತ್ಯುತ್ತರ ನೀಡಬೇಕಾಗುತ್ತಿದೆ. ಪೊಲೀಸರು ಸೂಕ್ಷ್ಮ ಬೂತ್ಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಜೆಡಿಎಸ್ ಜಾತ್ಯತೀತ ಪಕ್ಷ ಎಂದು ಹೇಳಿಕೊಂಡು ಮುಸ್ಲಿಮರ ಮತಗಳನ್ನು ಬಾಚಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿದೆ. ಜೆಡಿಎಸ್ ಜಾತ್ಯತೀತನೆ ಕಾಗದದಲ್ಲಿ ಮಾತ್ರ. ಅಧಿಕಾರ ಲಾಲಸೆಯಿಂದ ಬಿಜೆಪಿ ಜತೆ ಕೈಜೋಡಿಸಿದ ಜೆಡಿಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು. ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

