ದಕ್ಷಿಣ ಕನ್ನಡ

ನಡು ಮಖೆ ಜಾತ್ರೆ ಸಂಪನ್ನ

Published On :

ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ನಡು ಮಖೆಯು ಸೋಮವಾರ ರಾತ್ರಿ ಸಂಪನ್ನಗೊಂಡು ಮಂಗಳವಾರ ಮಧ್ಯಾಹ್ನದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ ಸಡಗರದಿಂದ ನಡೆಯಿತು.
ಸೋಮವಾರ ರಾತ್ರಿ ದೇವರ ಉತ್ಸವ, ರಥೋತ್ಸವ, ಮಹಾಪೂಜೆಗಳು ನೆರವೇರಿದವು. ಮೈಸೂರಿನ ವಿದ್ವಾನ್ ಕೆ. ರಾಮಚಂದ್ರ ಆಚಾರ್ಯ ಅವರ ದಾಸರ ಪದಗಳು ಜಾತ್ರೆಗೆ ವಿಶೇಷ ಮೆರಗು ನೀಡಿತು.
ಮಂಗಳೂರಿನ ಸರಯೂ ಬಾಲ ಯಕ್ಷವೃಂದದ ಕಲಾವಿದರಿಂದ ಷಣ್ಮುಖ ವಿಜಯ ಹಾಗೂ ಸ್ಥಳೀಯ ಕಲಾವಿದರಿಂದ ಮಚ್ಚೇಂದ್ರನಾಥ ವಿರಚಿತ ನೆತ್ತೆರಾ ನೀರಾ ನಾಟಕ ಪ್ರದರ್ಶನಗೊಂಡಿತ್ತು.
ಮಂಗಳವಾರ ಪ್ರಾತಃ ಕಾಲದಲ್ಲಿ ಸಾವಿರಾರು ಭಕ್ತರು ನೇತ್ರಾವತಿ ಮತ್ತು ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ಪವಿತ್ರ ಮಖೆ ತೀರ್ಥ ಸ್ನಾನವನ್ನು ಗೈದು, ನದಿ ಪಾತ್ರದಲ್ಲಿನ ಉದ್ಭವ ಲಿಂಗದಲ್ಲಿ ಪೂಜಾ ಕಾರ್ಯ ನೆರವೇರಿಸಿ, ದೇವಳದಲ್ಲಿ ಪೂಜೆ ಪುನಸ್ಕಾರ ಸಲ್ಲಿಸಿದ್ದರು. ದೇವಳದಲ್ಲಿನ ದೇವರ ಉತ್ಸವ ಮತ್ತು ದರ್ಶನ ಬಲಿ ಉತ್ಸವಗಳಲ್ಲಿ ಭಾರಿ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನದಲ್ಲಿ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.  
ದೇವಳದಲ್ಲಿನ ಆಗಮಿಸುವ ಭಕ್ತರಿಗೆ ಸಕಲ ಅನುಕೂಲತೆಗಳನ್ನು ಕಲ್ಪಿಸಲು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಕಂಗ್ವೆ ವಿಶ್ವಾನಾಥ ಶೆಟ್ಟಿ, ಹರಿರಾಮಚಂದ್ರ, ಸುಂದರ ಗೌಡ, ಸುನಿಲ್, ಧನ್ಯಕುಮಾರ್ ರೈ, ಜ್ಯೋತಿ ಶಾಸ್ತ್ರಿ, ಉಷಾ ಮುಳಿಯ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಉತ್ಸವ ಸಮಿತಿಯ ಸದಸ್ಯರೊಡಗೂಡಿ ಸಹಕರಿಸಿದ್ದರು.
ಬಳಿಕ ನಡೆದ ವಿವೇಕ ಜಾಗೃತಿ ಧಾರ್ಮಿಕ ಸಭೆಯಲ್ಲಿ ಕೃಷ್ಣ ಉಪಧ್ಯಾಯ ಉಪನ್ಯಾಸ ನೀಡಿದರು. ಡಾ. ಸುರೇಶ್ ಕೊಡೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರುಣಾಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸುಧಾಕರ ಶೆಟ್ಟಿ ಸ್ವಾಗತಿಸಿ, ಹರಿರಾಮಚಂದ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.