ಬೆಳ್ತಂಗಡಿ : ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಗೆ ಬಿಜೆಪಿ ಆಕ್ಷೇಪ
ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರ ಕುರಿತು ಬಿಜೆಪಿ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ.
ಪ.ಪಂ.ಗೆ ಹಿಂದುಳಿದ ವರ್ಗ ಬಿ ಮೀಸಲಾತಿಯಿಂದ ಕಾಂಗ್ರೆಸ್ನಿಂದ ಮಮತಾ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಮಮತಾ ಅವರು ಹಿಂದುಳಿದ ವರ್ಗ ಬಿ ಪ್ರಮಾಣಪತ್ರವನ್ನು ತಹಸೀಲ್ದಾರರಿಂದ ದೃಢಪಡಿಸಿಕೊಂಡಿದ್ದಾರೆ. ಇವರು ಎಲ್ಐಸಿ ಏಜೆಂಟರಾಗಿದ್ದು, ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ಕೇಂದ್ರದ ಗುತ್ತಿಗೆ ಕಂಪೆನಿಯಾದ ಆಸ್ಟ್ರೀಕ್ ಟೆಕ್ನೋಲಜಿ ಪ್ರೈ.ಲಿ.ನ ಉದ್ಯೋಗಿಯೂ ಆಗಿದ್ದಾರೆ. ಅವರ ಪತಿ ವಿಶ್ವನಾಥ ಶೆಟ್ಟಿ ಸರ್ವಶಿಕ್ಷಣ ವಸತಿ ಶಾಲೆಗೆ ಊಟದ ವ್ಯವಸ್ಥೆಯನ್ನು ಗುತ್ತಿಗೆ ಪಡೆದ ಭಾಗ್ಯಲಕ್ಷ್ಮೀ ಎಂಟರ್ಪ್ರೈಸಸ್ ಮಾಲಕರಾಗಿದ್ದಾರೆ. ಇವರ ಕುಟುಂಬವು ನಿಯಮಾವಳಿ ಪ್ರಕಾರ ತೆರಿಗೆ ಪಾವತಿಸುತ್ತಿದೆ. ಈ ವಿಷಯವನ್ನು ಮುಚ್ಚಿ ಸುಳ್ಳು ಮಾಹಿತಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಜಾತಿ ಆದಾಯದ ದೃಢಪತ್ರವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ನಗರದ ವ್ಯಕ್ತಿಯೊಬ್ಬರು ತಹಸೀಲ್ದಾರರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದರೂ ತನಿಖೆ ಮಾಡದೆ ವಿಲೇವಾರಿ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಚುನಾವಣಾ ನಾಮಪತ್ರ ಪರಿಶೀಲನೆ ಸಂದರ್ಭ ಆಕ್ಷೇಪ ಎತ್ತಿದ್ದು ಕೂಡ ಗಣನೆಗೆ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸರ್ಕಾರದ ನಿಯಮಾವಳಿಯಂತೆ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ. ಮಮತಾ ಶೆಟ್ಟಿ ಒಂದೊಮ್ಮೆ ಗೆದ್ದರೂ ಸದಸ್ಯತ್ವ ರದ್ದಾಗುವ ಸಾಧ್ಯತೆಯಿಂದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ನಿಂದ
ಸುಳ್ಳು ಪ್ರಚಾರ
ಮಂಗಳೂರು: ಪಾಲಿಕೆ ಚುನಾವಣೆಯ ಒಂದು ಸುತ್ತಿನ ಪ್ರಚಾರ ಕಾರ್ಯ ಈಗಾಗಲೇ ಮುಗಿದಿದ್ದು, ಮತದಾರರ ಬಿಜೆಪಿ ಪಕ್ಷದ ಒಲವಿಗೆ ಹತಾಶೆಗೊಂಡ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಮೇಶ್ ಆರೋಪಿಸಿದ್ದಾರೆ. ಬಿಜೆಪಿ ಪಕ್ಷ 1.33 ಸೆಂಟ್ಸ್ ಮೇಲ್ಪಟ್ಟ, ದಾಖಲೆ ಸರಿಯಾಗಿರುವ ನಿವೇಶನಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದು ಹೇಳಿದ್ದು, ಕಾಂಗ್ರೆಸ್ ಮಾಧ್ಯಮದ ಎದುರು ಮಾಡಿರುವ ಆರೋಪಕ್ಕೆ ದಾಖಲೆ ತೋರಿಸಲಿ. ಸುಳ್ಳು ಆರೋಪ ರಾಷ್ಟ್ರೀಯ ಪಕ್ಷಕ್ಕೆ ಶೋಭೆಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

