ದಕ್ಷಿಣ ಕನ್ನಡ

ಅಬಕಾರಿ ಇಲಾಖೆಯಿಂದ 32 ಪ್ರಕರಣ, 37 ಲೀ. ಮದ್ಯವಶ, 72 ಮಂದಿಗೆ ನೋಟಿಸ್

Published On :

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯವರು 37.030 ಲೀ.ಮದ್ಯ ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 32 ಪ್ರಕರಣ ದಾಖಲಿಸಿದ್ದಾರೆ.
 ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. 2 ಬೈಕ್ ಮತ್ತು ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಾನಾ ಪಕ್ಷಗಳು, ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 72 ನೋಟಿಸ್ ನೀಡಲಾಗಿದೆ.
ಪೊಲೀಸರು ಬರುತ್ತಾರೆ !: 13 ಉಪನ್ಯಾಸಕರಿಗೆ ನೋಟಿಸ್ ನೀಡಲಾಗಿದ್ದು, ಕೆಲವರು ಉತ್ತರಿಸಿಲ್ಲ. ತರಬೇತಿ ಪಡೆದ 6 ಮಂದಿ ಬುಧವಾರ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿಲ್ಲ. ಅನಧಿಕೃತ ಗೈರು ಹಾಜರಾದವರನ್ನು ಗುರುತಿಸಿ ಅವರ ಮನೆಗಳಿಗೆ ಪೊಲೀಸ್ ಕಳುಹಿಸಿ ಕರೆತರುವ ಬಗ್ಗೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.
--
ಉಜಿರೆ ಜನಾರ್ದನ ದೇವಸ್ಥಾನ: ಸಾಂಸ್ಕೃತಿಕ ವೈಭವ
ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಪ್ರತಿಸಂಜೆ ಶ್ರೀ ಸುದರ್ಶನ ಕಲಾ ವೇದಿಕೆಯಲ್ಲಿ ಸಂಗೀತ, ನೃತ್ಯ, ಯಕ್ಷಗಾನ, ತಾಲಮದ್ದಳೆ, ಭರತನಾಟ್ಯ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಕಲಾಭಿಮಾನಿಗಳ ಮನಸೂರೆಗೊಂಡಿದೆ.
ಮೊದಲ ದಿನ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಮಕ್ಕಳ ಯಕ್ಷಗಾನ ಮಂಡಳಿಯ ವತಿಯಿಂದ ಅರುಣ್ ಕುಮಾರ್ ಸಂಯೋಜನೆಯಲ್ಲಿ 'ವಿದ್ಯುನ್ಮತಿ ಕಲ್ಯಾಣ' ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಹಿಮ್ಮೇಳದಲ್ಲಿ ಜಯರಾಮ ಕುದ್ರೆತ್ತಾಯ (ಭಾಗವತ), ಜನಾರ್ದನ ತೋಳ್ಪಡಿತ್ತಾಯ (ಚೆಂಡೆ), ಚಂದ್ರಶೇಖರ ಆಚಾರ್ಯ (ಮದ್ದಳೆ), ಮೋಹಿನಿ ಅಂಚನ್, ಈಶ್ವರ ಚಂದ್ರ ನಿಡ್ಲೆ, ವಿದ್ಯಾಪ್ರಭು, ಕಾರ್ತಿಕ್ ಭಟ್, ಮಂಜುನಾಥ ಭಟ್, ಸಾಯಿ ಸುಮ, ಹರೀಶ್ ನಡಿಗಲ್, ಆಶಾಲತಾ,  ರಾಜೇಶ್ ಕುಮಾರ್, ವನಿತಾ (ನಾರದ) ಮತ್ತು ಅರುಣ್ ಕುಮಾರ್ ವಿವಿಧ ಪಾತ್ರ ನಿರ್ವಹಿಸಿದರು. ನರೇಂದ್ರ ಕುಮಾರ್ ಮಾರ್ಗದರ್ಶನ ನೀಡಿದ್ದರು. ಬೆಂಗಳೂರಿನ ರಕ್ಷಾ ನಾಯಕರಿಂದ ಜಾದೂ ಪ್ರದರ್ಶನ ನಡೆಯಿತು.
ಎರಡನೇ ದಿನ ಸಂಜೆ ಉಜಿರಯ ಕೃಷ್ಣಗಾನ ಸುಧಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಕಿ ಕೆ.ಆರ್.ಶಾಂತಾ ನಿರ್ದೇಶನದಲ್ಲಿ ನಡೆಯಿತು. ವಯಲಿನ್‌ನಲ್ಲಿ  ಗುರುರಾಜ್ ಹಾಗೂ ಮೃದಂಗದಲ್ಲಿ ಚಂದ್ರಶೇಖರ ಆಚಾರ್ಯ ಸಹಕರಿಸಿದ್ದರು.
ತೋನ್ಸೆ ಪುಷ್ಕಳಕುಮಾರ್ ಸಂಯೋಜನೆಯಲ್ಲಿ ನಡೆದ ಭಕ್ತಿ ಭಾವಗಾನ ಲಹರಿ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಅಜಯ ವಾರಿಯರ್, ದಿವ್ಯಾ ರಾಘವನ್, ಕೆ.ಎಸ್. ಸುರೇಖಾ ಮತ್ತು ದಿನೇಶ್ ಕಿನ್ನಿಗೋಳಿ ಭಕ್ತಿಭಾವ ಜಾನಪದಗೀತೆಗಳನ್ನು ಪ್ರಸ್ತುತಪಡಿಸಿ ದರು. ಸೋಮಶೇಖರ ಶೆಟ್ಟಿ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.