ದಕ್ಷಿಣ ಕನ್ನಡ

ರಾತ್ರಿ ಪಾಳಿಎಎಸ್‌ಐಗೆ ನಾಯಿ ದಾಳಿ

Published On :

ಮಂಗಳೂರು: ಚುನಾವಣೆ ಕರ್ತವ್ಯ ಬಿರುಸಿನ ನಡುವೆ ಪಾಂಡೇಶ್ವರ ಠಾಣೆ ಎಎಸ್‌ಐ ಶ್ರೀಕಲಾಗೆ ನಾಯಿ ದಾಳಿ ಮಾಡಿ ಕಾಲುಗಳಿಗೆ ಗಂಭೀರ ಗಾಯ ಮಾಡಿದೆ. ಮಹಾಕಾಳಿಪಡ್ಪು ಬಳಿ ಬೆಳಗ್ಗಿನ ಜಾವ 3 ಗಂಟೆಗೆ ಗಸ್ತು ನಿರ್ವಹಿಸುತ್ತಿರುವ ವೇಳೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿತ್ತು.  ಬೆಳಗ್ಗಿನ ಜಾವ ಎಎಸ್‌ಐಗೆ ತೂಕಡಿಕೆ ಬರುತ್ತಿತ್ತು. ಅದನ್ನು ನಿವಾರಿಸಲು ರಸ್ತೆಯಲ್ಲಿ ವಾಕಿಂಗ್ ಮಾಡತೊಡಗಿದರು. ಆಗ ಎಲ್ಲಿಂದಲೋ ಓಡಿ ಬಂದ ನಾಯಿ ಬಲಕಾಲಿಗೆ ಕಚ್ಚಿದೆ. ಒಂದು ಅಂಗುಲ ಮಾಂಸವನ್ನೇ ಕಚ್ಚಿ ಎಳೆದಿದೆ. ನಾಯಿಯನ್ನು ಓಡಿಸಲು ಒದ್ದಾಡುತ್ತಿರುವಾಗ ನಾಯಿ ತಕ್ಷಣ ಇನ್ನೊಂದು ಕಾಲಿಗೆ ಕಚ್ಚಿದೆ. ಅಷ್ಟರಲ್ಲಿ ಬೊಬ್ಬೆಗೆ ಕಾನ್‌ಸ್ಟೇಬಲ್ ಓಡಿ ಬಂದು ನಾಯಿ ಓಡಿಸಿ ರಕ್ಷಿಸಿದರು. ಹಸಿದ ಹುಲಿಯಂತಿದ್ದ ನಾಯಿ ಬೇಟೆಗೆ ಹೊಂಚು ಹಾಕಿದಂತಿತ್ತು ಎನ್ನುತ್ತಾರೆ ಎಎಸ್‌ಐ.
ಆಸ್ಪತ್ರೆಗೆ ದಾಖಲು: ಶ್ರೀಕಲಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕನಿಷ್ಠ ಒಂದುವಾರ ಚಿಕಿತ್ಸೆ ಪಡೆಯಬೇಕಾಗಿದೆ. ನಾಯಿ ಕಡಿತದಿಂದ ರ್ಯಾಬಿಸ್ ಬರುವ ಸಾಧ್ಯತೆಯಿಂದ ಹೆಚ್ಚಿನ ಇಂಜಕ್ಷನ್‌ಗಳನ್ನು ನೀಡಲಾಗಿದೆ. ಮಹಿಳಾ ಪೊಲೀಸರು ರಾತ್ರಿ ಪಾಳಿ ಮಾಡಬೇಕಾಗಿದೆ. 'ರಾತ್ರಿ ಮಕ್ಕಳನ್ನು ಮಲಗಿಸಿ, ಹೊರಗಡೆಯಿಂದ ಬೀಗ ಹಾಕಿ ಬರುತ್ತಾರೆ. ಬೆಳಗ್ಗೆ ವಾಪಸ್ ಆಗುವುದರಿಂದ ಮಕ್ಕಳಿಗೆ ಗೊತ್ತಾಗುವುದಿಲ್ಲ. ಒಂದು ವೇಳೆ ಎಚ್ಚರವಾಗಿ ಭಯ ಆದರೆ ನನಗೊಂದು ಕರೆ ಮಾಡಿ' ಎಂದು ಮಕ್ಕಳಿಗೆ ಹೇಳಿದ್ದೇನೆ ಎನ್ನುತ್ತಾರೆ ಶ್ರೀಕಲಾ.
ಬೆಂಕಿ ಅವಘಡ: ಗಾಯಾಳು ಮಹಿಳೆ ಸಾವು
ವಿಟ್ಲ: ಏಮಾಜೆ ನಿವಾಸಿ ಮಹಿಳೆಯೊಬ್ಬರು ಎಂಟು ದಿನಗಳ ಹಿಂದೆ ಆಕಸ್ಮಿಕ ಬೆಂಕಿ ಅವಘಡದಿಂದ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ನೆಟ್ಲಮುಡ್ನೂರು ಗ್ರಾಮದ ಏಮಾಜೆ ನಿವಾಸಿ ಬೇಬಿ (25) ಮನೆಯಲ್ಲಿ ಫೆ. 26ರಂದು ಉರಿಯುತ್ತಿದ್ದ ದೀಪಕ್ಕೆ ಸೀಮೆಯೆಣ್ಣೆ ಹಾಕುವ ಸಮಯ ಅವಘಡ ಸಂಭವಿಸಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಈ ಸಂಬಂಧ ಸಹೋದರ ಪರ್ಲ ಶಂಕರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಕೆಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.