ಸುದ್ದಿ ಸಂಕ್ಷೇಪ
ಈ ಕುಟುಂಬಕ್ಕೆ ಬೇಕಿದೆ ನೆರವು
ಬಂಟ್ವಾಳ: ಮಗಳು ಅಂಗವಿಕಲೆ. ತಂಡೆ ಕಿಡ್ನಿ ವೈಫಲ್ಯದಿಂದ ಬಳುಲುತ್ತಿದ್ದಾರೆ. ಬಡತನದ ಬದುಕೇ ನಡೆಸುವುದು ಕಷ್ಟವಾಗಿರುವ ಇವರಿಗೆ ದಾನಿಗಳ ನೆರವಿನ ಅಗತ್ಯವಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ಶಿವಾಜಿನಗರ ಲೇಔಟ್ನಲ್ಲಿ ಈ ನತದೃಷ್ಟ ತಂದೆ- ಮಗಳು ವಾಸಿಸುತ್ತಿದ್ದಾರೆ. ಮನೆ ಯಜಮಾನ ಪದ್ಮನಾಭ-ಸ್ವಾತಿ ದಂಪತಿಯ ಒಬ್ಬಳೇ ಮಗಳು ಪೂಜಾ. ಈಕೆಗೆ ವಯಸ್ಸಾದರೂ ಶರೀರ ಸ್ವಾಧೀನದಲ್ಲಿಲ್ಲ. ಮಾತನಾಡಲು ಮಾತ್ರ ಬರುವ ಈಕೆ ಪ್ರತಿಯೊಂದೂ ಕೆಲಸಕ್ಕೂ ಇತರರನ್ನೇ ಆಶ್ರಯಿಸಬೇಕು. ವಾಚ್ ರಿಪೇರಿ ಮಾಡಿ, ಕುಟುಂಬ ಸಲಹುತ್ತಿದ್ದ ಪದ್ಮನಾಭ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಕೊಳ್ಳಬೇಕಾದಿಗೆ. ಈ ಕುಟುಂಬಕ್ಕೆ ಸಹೃದಯಿಗಳ ನೆರವು ಅಗತ್ಯವಿದ್ದು, ನೆರವು ನೀಡಲಿಚ್ಛಿಸುವವರು ಪದ್ಮನಾಭ್ ಅವರು ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ- 4512500100697901 ಹಣ ಜಮಾ ಮಾಡಬಹುದು. ಇವರನ್ನು 8971734552ರಲ್ಲಿ ಸಂಪರ್ಕಿಸಿ.
10ಕ್ಕೆ ನುಡಿನಮನ
ಕಾಂತಾವರ: ಕನ್ನಡ ಸಂಘದ ವತಿಯಿಂದ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮದ 6ನೇ ವರ್ಷದ 'ನುಡಿನಮನ- 63' ಮಾ.10ರಂದು ಮ. 3 ಕ್ಕೆ ಕಾಂತಾವರ ರಥಬೀದಿಯ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದ ಪಂಪ ಮಹಾಕವಿ ಸಭಾಭವನದಲ್ಲಿ ನಡೆಯಲಿದೆ. 'ನಮ್ಮ ಕನ್ನಡ ನಮ್ಮದು' ತಿಂಗಳ ಸರಣಿ- ಕನ್ನಡದ ಮಹತ್ವ ಮತ್ತು 'ಮರೆಯಬಾರದ ಕಾದಂಬರಿಗಳ ವರ್ಷಪೂರ್ತಿ ಮರು ಓದು' ಕಾರ್ಯಕ್ರಮದಲ್ಲಿ ರಾಘವೇಂದ್ರ ಬಿ. ರಾವ್ (ಅನುಬೆಳ್ಳೆ) ಅವರು ವಿಶುಕುಮಾರ್ ಅವರ 'ಭೂಮಿ' ಪುಸ್ತಕದ ಕುರಿತು ಮತನಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

