ಎಂಡೋಸಲ್ಫಾನ್ ಸಂತ್ರಸ್ತರಿಗೆ ನೆರವು: ನಟ ಚೇತನ್ ಭರವಸೆ
ಕ.ಪ್ರ.ವಾರ್ತೆ ಉಪ್ಪಿನಂಗಡಿ ಮಾ.10
ಕೊಕ್ಕಡ ಮತ್ತು ಸುತ್ತಮುತ್ತಲಿನ ಎಂಡೋಪೀಡಿತ ಪ್ರದೇಶಗಳ ಸಂತ್ರಸ್ತರ ಹಲವು ಮನೆಗಳಲ್ಲಿನ ಸಂತ್ರಸ್ತರನ್ನು ಶನಿವಾರ, ಕನ್ನಡ ಚಿತ್ರ ನಟ ಚೇತನ್ ಕುಮಾರ್ ಭೇಟಿ ಮಾಡಿ ಸಾಂತ್ವನ ಹೇಳಿದರು. ಸಂತ್ರಸ್ತರಿಗೆ ನೆರವಾಗುವ ಭರವಸೆಯನ್ನೂ ನೀಡಿದರು. ಇತ್ತೀಚೆಗೆ ಎಂಡೋ ವಿರೋಧಿ ಹೋರಾಟಗಾರ ಶ್ರೀಧರಗೌಡ ಕೆಂಗುಡೇಲು ನೇತೃತ್ವದಲ್ಲಿ ತಯಾರಾದ ಇಲ್ಲಿನ ಎಂಡೋಪೀಡಿತ ಹಲವು ಕುಟುಂಬಗಳ ಸಾಕ್ಷ್ಯ ಚಿತ್ರವನ್ನು ಬೆಂಗಳೂರಿನಲ್ಲಿ ನಟ ಚೇತನ್ ಕುಮಾರ್ ಮತ್ತು ನಟಿ ಪೂಜಾ ಗಾಂಧಿ ಮೊದಲಾದವರು ಇತ್ತೀಚೆಗೆ ಬಿಡುಗಡೆಗೊಳಿಸಿದ್ದು ಈ ಸಂದರ್ಭದಲ್ಲಿ ಸಂತ್ರಸ್ತರನ್ನು ಕಾಣಲು ಸ್ವತಃ ಬರುವುದಾಗಿ ಚೇತನ್ ತಿಳಿಸಿದ್ದರು. ಅಂತೆಯೇ ಶನಿವಾರ ರೆಖ್ಯಾ ಗ್ರಾಮದ ಮತ್ತು ಕೊಕ್ಕಡ ಪರಿಸರದ ಹಲವು ಮನೆಗಳನ್ನು, ಎಂಡೋಪಾಲನಾ ಕೇಂದ್ರವನ್ನೂ ಭೇಟಿ ಮಾಡಿದ ಇವರು ಇಲ್ಲಿನ ಪೀಡಿತರ ಸಮಸ್ಯೆಗಳ ಬಗ್ಗೆ ದುಃಖಿಸಿ ಈ ಬಗ್ಗೆ ಸರ್ಕಾರ ಆದ್ಯತೆ ನೆಲೆಯಲ್ಲಿ ಸ್ಪಂದಿಸಬೇಕು ಎಂದರು.
ಸಮಾಜದಿಂದ ಸಹಾಯ ಕೇಳುವೆ: ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ಹೊರದೇಶದ ಹಲವಾರು ಬೃಹತ್ ಕಂಪನಿಗಳು ಮತ್ತು ಚಿತ್ರೋದ್ಯಮದ ಹಲವಾರು ಗಣ್ಯರನ್ನು ಭೇಟಿ ಮಾಡಿ, ಎಂಡೋ ಪೀಡಿತರ ಬದಕಿನಲ್ಲಿ ಬೆಳಕಾಗಲು ಸಹಕಾರ ಕೇಳುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

