ದಕ್ಷಿಣ ಕನ್ನಡ

ಸುಳ್ಯ ನ.ಪಂ. ಆಡಳಿತ ಮತ್ತೆ ಬಿಜೆಪಿ ಬಗಲಿಗೆ

Published On :

ಸುಳ್ಯ: ಸುಳ್ಯ ನಗರ ಪಂಚಾಯಿತಿ ಆಡಳಿತವನ್ನು ಮತ್ತೆ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇಲ್ಲಿನ ಹದಿನೆಂಟು ವಾರ್ಡ್‌ಗಳ ಪೈಕಿ 12 ರಲ್ಲಿ ಗೆಲುವು ಸಾಧಿಸಿರುವ ಸ್ಪಷ್ಟ ಬಹುಮತ ಪಡೆದು ಅಧಿಕಾರ ಉಳಿಸಿಕೊಳ್ಳುವಲ್ಲಿ ಶಕ್ತವಾಗಿದೆ. ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಎಸ್.ಡಿ.ಪಿ.ಐ. 1 ಸ್ಥಾನ ಗಳಿಸುವ ಮೂಲಕ ಖಾತೆ ತೆರೆದುಕೊಂಡಿದೆ.
 ನ.ಪಂ. ಮಾಜಿ ಅಧ್ಯಕ್ಷರಾದ ಎಂ. ವೆಂಕಪ್ಪ ಗೌಡ, ಸುಮತಿ ನಾರಾಯಣ ಸೋಲು ಕಂಡಿದ್ದು, ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಗೆಲುವು ಸಾಧಿಸಿದ್ದಾರೆ.
ವಾರ್ಡ್‌ವಾರು ವಿವರ ಹೀಗಿದೆ...
ಒಂದನೇ ವಾರ್ಡ್- ದುಗಲಡ್ಕ
ಇಲ್ಲಿ ಕಾಂಗ್ರೆಸ್‌ನ ಚಂದ್ರಕುಮಾರ್ ಕಂದಡ್ಕ ವಿಜಯಿ. ಚಂದ್ರಕುಮಾರ್ 273 ಮತಗಳನ್ನು, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿನಯ ಕುಮಾರ್ ಕಂದಡ್ಕ  238 ಮತಗಳನ್ನು ಹಾಗೂ ಜೆಡಿಎಸ್‌ನ ಶಿವನ್ ಕಂದಡ್ಕ 33 ಮತಗಳನ್ನು ಪಡೆದಿದ್ದಾರೆ.
ಎರಡನೇ ವಾರ್ಡ್ ಕೊಕುಳಿ
ಇಲ್ಲಿ ಬಿಜೆಪಿಯ ಶೀಲಾವತಿ ಮಾಧವ 332 ಮತ ಪಡೆದು ವಿಜಯಿ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಶಶಿಕಲಾ ವಸಂತ 190 ಮತಗಳನ್ನು ಪಡೆದಿದ್ದಾರೆ.
ಮೂರನೇ ವಾರ್ಡ್ ಜಯನಗರ
ಮೂರನೇ ವಾರ್ಡ್‌ನಲ್ಲಿ ಬಿಜೆಪಿಯ ಜಾನಕಿ ನಾರಾಯಣ  ಜಯಶಾಲಿ. 439 ಮತಗಳನ್ನು ಪಡೆದ ಅವರು 393 ಮತ ಪಡೆದ ಕಾಂಗ್ರೆಸ್ಸಿನ ಗೀತಾ ಬಾಬು ಅವರನ್ನು ಸೋಲಿಸಿದ್ದಾರೆ. ಸಿಪಿಐಎಂನ ಡಿ.ಎಸ್. ಲಲಿತ 50  ಮತಗಳನ್ನು, ಜೆಡಿಎಸ್‌ನ ಮೀನಾಕ್ಷಿ ರಮೇಶ್ 89 ಮತಗಳನ್ನು, ಹಾಗೂ ಕೆಜೆಪಿಯ ಚಂದ್ರಾವತಿ ಆರ್.ಕೆ. 18 ಮತಗಳನ್ನು ಪಡೆದಿದ್ದಾರೆ.
ನಾಲ್ಕನೇ ವಾರ್ಡ್ ಶಾಂತಿನಗರ
ಇಲ್ಲಿ ಬಿಜೆಪಿ ಅಭ್ಯರ್ಥಿ ಹರಿಣಾಕ್ಷಿ ನಾರಾಯಣ ಕಾಂಗ್ರೆಸ್ಸಿನ ವಾಣಿ ಎಸ್. ಅವರನ್ನು ಸೋಲಿಸಿದ್ದಾರೆ. ಹರಿಣಾಕ್ಷಿ ನಾರಾಯಣ ಎಸ್. 420 ಮತಗಳನ್ನು, ಕಾಂಗ್ರೆಸ್ಸಿನ ವಾಣಿ ಎಸ್ 269 ಮತಗಳನ್ನು, ಜೆಡಿಎಸ್‌ನ ಶಾರದಾ ವೆಂಕಟೇಶ್ ತೋಳ್ಪಾಡಿ 39 ಮತಗಳನ್ನು ಪಡೆದಿದ್ದಾರೆ.
ಐದನೇ ವಾರ್ಡ್ ಹಳೆಗೇಟು
ಪ್ರತಿಷ್ಠೆಯ ಕಣವಾಗಿದ್ದ ಇಲ್ಲಿ ಬಿಜೆಪಿಯ ಪ್ರಕಾಶ್ ಹೆಗ್ಡೆ ವಿಜಯಿ. 405 ಮತ ಪಡೆದ ಅವರು ತಮ್ಮ ಪ್ರತಿಸ್ಪರ್ಧಿ 274 ಮತ ಪಡೆದ ಕಾಂಗ್ರೆಸ್ಸಿನ ಧನಂಜಯ ಅಡ್ಪಂಗಾಯರನ್ನು ಪರಾಭವಗೊಳಿಸಿದರು.
ಆರನೇ ವಾರ್ಡ್ ವೀರಮಂಗಲ
ತ್ರಿಕೋನ ಸ್ಪರ್ಧೆ ನಡೆದ ಇಲ್ಲಿ ಬಿಜೆಪಿಯ ಸುನಿತಾ ಡಿಸೋಜ ವಿಜಯಿ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಜೂಲಿಯಾ ಕ್ರಾಸ್ತಾರನ್ನು ಅವರು ಪರಾಭವಗೊಳಿಸಿದರು. ಸುನೀತಾ 303 ಮತಗಳನ್ನು, ಜೂಲಿಯಾ ಕ್ರಾಸ್ತಾ 243 ಮತಗಳನ್ನು,  ಪಕ್ಷೇತರ ಅಭ್ಯರ್ಥಿ ಜೂಲಿಯಾನ ಆರ್. ಕ್ರಾಸ್ತ 25 ಮತಗಳನ್ನು ಪಡೆದಿದ್ದಾರೆ.
ಏಳನೇ ವಾರ್ಡ್ ಬಿ.ಡಿ.ಒ.
ಇಲ್ಲಿ ಬಿಜೆಪಿಯ ಕೆ.ಎಂ. ಗಿರೀಶ್‌ಕುಮಾರ್ 203 ಮತ ಗಳಿಸಿ ವಿಜಯಿ. ಕಾಂಗ್ರೆಸ್ಸಿನ ದಿನೇಶ್ ಅಂಬೆಕಲ್ಲು 186 ಮತಗಳನ್ನು, ಜೆಡಿಎಸ್‌ನ ಎ.ಸಿ. ನಂದನ 37 ಮತಗಳನ್ನು, ಕೆಜೆಪಿಯ ಪ್ರಶಾಂತ್ ಎಂ.ಕೆ. 9 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಯತೀಶ್ ಕುಮಾರ್ ಸಿ. 170 ಮತಗಳನ್ನು ಪಡೆದಿದ್ದಾರೆ.
ಎಂಟನೇ ವಾರ್ಡ್ ಕುರುಂಜಿಭಾಗ್
ನೇರ ಸ್ಪರ್ಧೆ ನಡೆದ ಇಲ್ಲಿ ಬಿಜೆಪಿಯ ಕಿರಣ್‌ಕುಮಾರ್ 190 ಮತ ಗಳಿಸಿ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ನ ನಳಿನ್ ಕುಮಾರ್ ಕೋಡ್ತುಗುಳಿ ಅವರನ್ನು ಪರಾಭವಗೊಳಿಸಿದ್ದಾರೆ. ಕೋಡ್ತುಗುಳಿಯವರು 149 ಮತಗಳನ್ನು ಪಡೆದಿದ್ದಾರೆ.
ಒಂಬತ್ತನೇ ವಾರ್ಡ್ ಕೇರ್ಪಳ
ತ್ರಿಕೋನ ಸ್ಪರ್ಧೆ ನಡೆದ ಇಲ್ಲಿ ಬಿಜೆಪಿಯ ಮೋಹಿನಿ ನಾಗರಾಜ್ 146 ಮತಗಗಳನ್ನು ಪಡೆದು ವಿಜಯಿ. ಸಮೀಪದ ಪ್ರತಿಸ್ಪರ್ಧಿ  ಕಾಂಗ್ರೆಸ್ಸಿನ ಗೀತಾ ಕೆ. ಜಯರಾಮ 95 ಮತಗಳನ್ನು, ಕೆ.ಜೆ.ಪಿ.ಯ ಶಶಿಕಲಾ ಎ. 10 ಮತಗಳನ್ನು ಪಡೆದಿದ್ದಾರೆ.
ಹತ್ತನೇ ವಾರ್ಡ್ ಕುರುಂಜಿಗುಡ್ಡೆ
ಚತುಷ್ಕೋನ ಸ್ಪರ್ಧೆ ಏರ್ಪಟ್ಟ ಇಲ್ಲಿ ಬಿಜೆಪಿಯ ಗೋಪಾಲ ಎಸ್ 136 ಮತಗಳನ್ನು ಪಡೆದು ವಿಜಯಿ. ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಎಸ್. ಮಾಧವ 80 ಮತಗಳನ್ನು, ಕಾಂಗ್ರೆಸ್‌ನ ಉಮ್ಮರ್ ಎಸ್.ಎಂ 45 ಮತಗಳನ್ನು ಜೆಡಿಎಸ್‌ನ ಕೆ.ಎನ್.ಬಸವರಾಜ್ 2 ಮತಗಳನ್ನು ಪಡೆದಿದ್ದಾರೆ.
ಹನ್ನೊಂದನೇ ವಾರ್ಡ್ ಭಸ್ಮಡ್ಕ
ನೇರ ಸ್ಪರ್ಧೆ ನಡೆದ ಇಲ್ಲಿ ಬಿಜೆಪಿಯ ಮೀನಾಕ್ಷಿ 181 ಮತಗಳನ್ನು ಪಡೆದು ವಿಜಯಿ. ಕಾಂಗ್ರೆಸ್ಸಿನ ಭವಾನಿ ವಿಶ್ವನಾಥ 67 ಮತಗಳನ್ನು ಪಡೆದಿದ್ದಾರೆ.
ಹನ್ನೆರಡನೇ ವಾರ್ಡ್ ಕರೆಮೂಲೆ
ಕಾಂಗ್ರೆಸ್‌ನ ಕೆ.ಎಂ. ಮುಸ್ತಫ ಜಯಶಾಲಿ. ಮುಸ್ತಫ 210 ಮತಗಳನ್ನು, ಬಿಜೆಪಿಯ ಅಬ್ದುಲ್ ಹಾರಿಸ್ 129 ಮತಗಳನ್ನು, ಜೆಡಿಎಸ್‌ನ ಸಂಶುದ್ದೀನ್ ಡಿ.ಎಂ. 8 ಮತಗಳನ್ನು ಪಡೆದಿದ್ದಾರೆ.
ಹದಿಮೂರನೇ ವಾರ್ಡ್ ಬೂಡು
ಬಿಜೆಪಿಯ ಸುಮತಿ ನಾರಾಯಣ ಸೋಲು ಕಂಡಿದ್ದಾರೆ. 141 ಮತ ಪಡೆದ ಕಾಂಗ್ರೆಸ್ಸಿನ ಲತಾ ಪ್ರಸನ್ನ ಗೆಲುವು ಸಾಧಿಸಿದ್ದು, ಸುಮತಿ 139 ಮತ ಪಡೆದುಕೊಂಡಿದ್ದಾರೆ.
ಹದಿನಾಲ್ಕನೇ ವಾರ್ಡ ಕಲ್ಲುಮುಟ್ಲು
ಎಸ್.ಡಿ.ಪಿ.ಐ.ನ ಬಿ. ಉಮ್ಮರ್ ಜಯಶಾಲಿ. ಅವರು 304 ಮತ ಪಡೆದಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಜಿನ್ನಪ್ಪ ಪೂಜಾರಿ 282 ಮತಗಳನ್ನು, ಕಾಂಗ್ರೆಸ್ಸಿನ ಪಿ.ಎ ಮಹಮ್ಮದ್ 104 ಮತಗಳನ್ನು ಪಡೆದಿದ್ದಾರೆ.
ಹದಿನೈದನೇ ವಾರ್ಡ್ ನಾವೂರು
ಕಾಂಗ್ರೆಸ್ಸಿನ ಕೆ.ಗೋಕುಲದಾಸ್ 265 ಮತಗಳನ್ನು ಗಳಿಸಿ ವಿಜಯಿ. ಬಿಜೆಪಿಯ ಚಂದ್ರಶೇಖರ 119 ಮತಗಳನ್ನು, ಜೆಡಿಎಸ್‌ನ ಎನ್.ಬಿ. ಚೋಮ 114 ಮತಗಳನ್ನು, ಎಸ್.ಡಿ.ಪಿ.ಐ.ಯ ಉಮೇಶ್ ಎಚ್. 165 ಮತಗಳನ್ನು ಪಡೆದಿದ್ದಾರೆ.
ಹದಿನಾರನೇ ವಾರ್ಡ್ ಕಾಯರ್ತೋಡಿ
ಪ್ರತಿಷ್ಠೆಯ ಕಣವಾಗಿದ್ದ ಈ ವಾರ್ಡ್‌ನಲ್ಲಿ ಬಿಜೆಪಿಯ ಎನ್.ಎ. ರಾಮಚಂದ್ರರು ಕಾಂಗ್ರೆಸ್ಸಿನ ಎಂ.ವೆಂಕಪ್ಪ ಗೌಡರನ್ನು ಸೋಲಿಸಿದ್ದಾರೆ.
ಎನ್.ಎ. ರಾಮಚಂದ್ರ 302  ಮತಗಳನ್ನು, ಎಂ. ವೆಂಕಪ್ಪ ಗೌಡರು 295 ಮತಗಳನ್ನು ಪಡೆದಿದ್ದಾರೆ.
ಹದಿನೇಳನೇ ವಾರ್ಡ್ ಬೋರುಗುಡ್ಡೆ
ಕಾಂಗ್ರೆಸ್ಸಿನ ಪ್ರೇಮಾ ಶಿವಪ್ಪ 394 ಮತಗಳನ್ನು ಪಡೆದು ಬಿಜೆಪಿಯ ಹಾಜಿರಾ ಅವರನ್ನು ಪರಾಭವಗೊಳಿಸಿದ್ದಾರೆ. ಹಾಜಿರಾ 171 ಮತಗಳನ್ನು, ಜೆಡಿಎಸ್‌ನ ಭಾರತಿ ಎಸ್. 25 ಮತಗಳನ್ನು, ಎಸ್.ಡಿ.ಪಿ.ಐ.ಯ ಸಫಿ 19 ಮತಗಳನ್ನು ಪಡೆದಿದ್ದಾರೆ.
ಹದಿನೆಂಟನೇ ವಾರ್ಡ್ ಜಟ್ಟಿಪಳ್ಳ
ಬಿಜೆಪಿಯ ರಮಾನಂದ ರೈ ಅವರು 453 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್ಸಿನ ಕೆ.ಪಿ. ಶಿವಪ್ರಕಾಶ್ 422 ಮತಗಳನ್ನು, ಕೆ.ಜೆ.ಪಿ.ಯ ಮೋಹನ್ ಎಂ. 30 ಮತಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.