ಸುಳ್ಯ: ಅಧಿಕಾರ ಉಳಿಸಿಕೊಂಡ ಬಿಜೆಪಿ, ಖಾತೆ ತೆರೆದ ಎಸ್ಡಿಪಿಐ
ಸುಳ್ಯ: ಸುಳ್ಯ ನಗರ ಪಂಚಾಯಿತಿ ಆಡಳಿತವನ್ನು ಮತ್ತೆ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇಲ್ಲಿನ 18 ವಾರ್ಡ್ಗಳ ಪೈಕಿ 12 ರಲ್ಲಿ ಗೆಲುವು ಸಾಧಿಸಿರುವ ಸ್ಪಷ್ಟ ಬಹುಮತ ಪಡೆದು ಅಧಿಕಾರ ಉಳಿಸಿಕೊಳ್ಳುವಲ್ಲಿ ಶಕ್ತವಾಗಿದೆ. ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಎಸ್.ಡಿ.ಪಿ.ಐ. 1 ಸ್ಥಾನ ಗಳಿಸುವ ಮೂಲಕ ಖಾತೆ ತೆರೆದುಕೊಂಡಿದೆ. ನ.ಪಂ. ಮಾಜಿ ಅಧ್ಯಕ್ಷರಾದ ಎಂ. ವೆಂಕಪ್ಪ ಗೌಡ, ಸುಮತಿ ನಾರಾಯಣ ಸೋಲು ಕಂಡಿದ್ದು, ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಗೆಲುವು ಸಾಧಿಸಿದ್ದಾರೆ.
ವಾರ್ಡ್ವಾರು ವಿವರ: ದುಗಲಡ್ಕ ವಾರ್ಡ್ನಲ್ಲಿ ಕಾಂಗ್ರೆಸ್ನ ಚಂದ್ರಕುಮಾರ್ ಕಂದಡ್ಕ ವಿಜಯಿ. ಚಂದ್ರಕುಮಾರ್ 273 ಮತಗಳನ್ನು, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿನಯ ಕುಮಾರ್ ಕಂದಡ್ಕ 238 ಮತ ಪಡೆದಿದ್ದಾರೆ. ಕೊಕುಳಿ ವಾರ್ಡ್ನಲ್ಲಿ ಬಿಜೆಪಿಯ ಶೀಲಾವತಿ ಮಾಧವ 332 ಮತ ಪಡೆದು ವಿಜಯಿ. ಕಾಂಗ್ರೆಸ್ಸಿನ ಶಶಿಕಲಾ ವಸಂತ 190 ಮತಗಳನ್ನು ಪಡೆದಿದ್ದಾರೆ. ಜಯನಗರ ವಾರ್ಡ್ನಲ್ಲಿ ಬಿಜೆಪಿಯ ಜಾನಕಿ ನಾರಾಯಣ ಜಯಶಾಲಿ. 439 ಮತ ಪಡೆದ ಅವರು 393 ಮತ ಪಡೆದ ಕಾಂಗ್ರೆಸ್ಸಿನ ಗೀತಾ ಬಾಬು ಅವರನ್ನು ಸೋಲಿಸಿದ್ದಾರೆ.
ಶಾಂತಿನಗರ ವಾರ್ಡ್ನಲ್ಲಿ ಬಿಜೆಪಿಯ ಹರಿಣಾಕ್ಷಿ ನಾರಾಯಣ (420) ಕಾಂಗ್ರೆಸ್ಸಿನ ವಾಣಿ ಎಸ್. (269) ಅವರನ್ನು ಸೋಲಿಸಿದ್ದಾರೆ. ಹಳೆಗೇಟು ವಾರ್ಡ್ನಲ್ಲಿ ಬಿಜೆಪಿಯ ಪ್ರಕಾಶ್ ಹೆಗ್ಡೆ 405 ಮತ ಪಡೆದು, 274 ಮತ ಪಡೆದ ಕಾಂಗ್ರೆಸ್ಸಿನ ಧನಂಜಯ ಅಡ್ಪಂಗಾಯರನ್ನು ಪರಾಭವಗೊಳಿಸಿದರು. ವೀರಮಂಗಲ ವಾರ್ಡ್ನಲ್ಲಿ ಬಿಜೆಪಿಯ ಸುನಿತಾ ಡಿಸೋಜ ಕಾಂಗ್ರೆಸ್ಸಿನ ಜೂಲಿಯಾ ಕ್ರಾಸ್ತಾ (243)ರನ್ನು ಅವರನ್ನು 303 ಮತ ಪಡೆದು ಸೋಲಿಸಿದರು. ಬಿ.ಡಿ.ಒ. ವಾರ್ಡ್ನಲ್ಲಿ ಬಿಜೆಪಿಯ ಕೆ.ಎಂ. ಗಿರೀಶ್ಕುಮಾರ್ 203 ಮತ ಗಳಿಸಿ, ಕಾಂಗ್ರೆಸ್ಸಿನ ದಿನೇಶ್ ಅಂಬೆಕಲ್ಲು (186)ರನ್ನು ಸೋಲಿಸಿದರು.
ಕುರುಂಜಿಭಾಗ್ ವಾರ್ಡ್ನಲ್ಲಿ ಬಿಜೆಪಿಯ ಕಿರಣ್ಕುಮಾರ್ (190) ಮತ ಗಳಿಸಿ ಜೆಡಿಎಸ್ನ ನಳಿನ್ ಕುಮಾರ್ ಕೋಡ್ತುಗುಳಿ ಅವರನ್ನು ಪರಾಭವಗೊಳಿಸಿದ್ದಾರೆ. ಕೇರ್ಪಳದಲ್ಲಿ ಬಿಜೆಪಿಯ ಮೋಹಿನಿ ನಾಗರಾಜ್ 146 ಮತ ಪಡೆದು ಕಾಂಗ್ರೆಸ್ಸಿನ ಗೀತಾ ಕೆ. ಜಯರಾಮ (95) ಅವರನ್ನು ಸೋಲಿಸಿದರು. ಕುರುಂಜಿಗುಡ್ಡೆ ವಾರ್ಡ್ನಲ್ಲಿ ಬಿಜೆಪಿಯ ಗೋಪಾಲ ಎಸ್. 136 ಮತ ಪಡೆದು ಪಕ್ಷೇತರ ಅಭ್ಯರ್ಥಿ ಎಸ್. ಮಾಧವ (80) ಅವರನ್ನು ಸೋಲಿಸಿದರು. ಭಸ್ಮಡ್ಕ ವಾರ್ಡ್ನಲ್ಲಿ ಬಿಜೆಪಿಯ ಮೀನಾಕ್ಷಿ 181 ಮತಗಳನ್ನು ಪಡೆದು ಕಾಂಗ್ರೆಸ್ಸಿನ ಭವಾನಿ ವಿಶ್ವನಾಥ (67) ವಿರುದ್ಧ ಗೆಲವು ಸಾಧಿಸಿದರು. ಕರೆಮೂಲೆ ವಾರ್ಡ್ನಲ್ಲಿ ಕಾಂಗ್ರೆಸ್ನ ಕೆ.ಎಂ. ಮುಸ್ತಫ 210 ಮತ ಪಡೆದು ಬಿಜೆಪಿಯ ಅಬ್ದುಲ್ ಹಾರಿಸ್ (129) ಅವರನ್ನು ಪರಾಭವಗೊಳಿಸಿದರು. ಬೂಡು ವಾರ್ಡ್ನಲ್ಲಿ ಬಿಜೆಪಿಯ ಸುಮತಿ ನಾರಾಯಣ (139) ಸೋಲು ಕಂಡಿದ್ದಾರೆ. 141 ಮತ ಪಡೆದ ಕಾಂಗ್ರೆಸ್ಸಿನ ಲತಾ ಪ್ರಸನ್ನ ಗೆಲುವು ಸಾಧಿಸಿದರು. ನಾವೂರು ವಾರ್ಡ್ನಲ್ಲಿ ಕಾಂಗ್ರೆಸ್ಸಿನ ಕೆ.ಗೋಕುಲದಾಸ್ 265 ಮತಗಳನ್ನು ಗಳಿಸಿ ವಿಜಯಿ. ಬಿಜೆಪಿಯ ಚಂದ್ರಶೇಖರ 119 ಮತ ಗಳಿಸಿದರು. ಪ್ರತಿಷ್ಠಿತ ಕಾಯರ್ತೋಡಿ ವಾರ್ಡ್ನಲ್ಲಿ ಬಿಜೆಪಿಯ ಎನ್.ಎ. ರಾಮಚಂದ್ರ (302) ಕಾಂಗ್ರೆಸ್ಸಿನ ಎಂ.ವೆಂಕಪ್ಪ ಗೌಡರನ್ನು (295) ಸೋಲಿಸಿದ್ದಾರೆ. ಬೋರುಗುಡ್ಡೆ ವಾರ್ಡ್ನಲ್ಲಿ ಕಾಂಗ್ರೆಸ್ಸಿನ ಪ್ರೇಮಾ ಶಿವಪ್ಪ 394 ಮತಗಳನ್ನು ಪಡೆದು ಬಿಜೆಪಿಯ ಹಾಜಿರಾ ಅವರನ್ನು (171) ಪರಾಭವಗೊಳಿಸಿದ್ದಾರೆ. ಜಟ್ಟಿಪಳ್ಳದಲ್ಲಿ ಬಿಜೆಪಿಯ ರಮಾನಂದ ರೈ ಅವರು 453 ಮತಗಳನ್ನು ಪಡೆದು ಕಾಂಗ್ರೆಸ್ಸಿನ ಕೆ.ಪಿ. ಶಿವಪ್ರಕಾಶ್ (422)ರನ್ನು ಮಣಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

