ಸರ್ಪಸಂಸ್ಕಾರ ಕ್ಷೇತ್ರದಲ್ಲಿ ಶವಸಂಸ್ಕಾರ ಸೌಲಭ್ಯವಿಲ್ಲ
ಸುಬ್ರಹ್ಮಣ್ಯ: ಸರ್ಪ ಸಂಸ್ಕಾರಕ್ಕೆ ಹೆಸರುವಾಸಿಯಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದ ವಿಪರ್ಯಾಸ. ಶವ ಸಂಸ್ಕಾರಕ್ಕೆಂದು ಸೂಕ್ತ ಸ್ಥಳ ಗುರುತಿಸಿ ಅದನ್ನು ನೀಡಲಾಗಿದ್ದರೂ ಮೂಲ ಸೌಲಭ್ಯಗಳಿಲ್ಲದೆ ರುದ್ರಭೂಮಿಯ ಬಯಲಲ್ಲೇ ಶವ ಹೂಳುವ, ಸುಡುವ ಕಾರ್ಯ ಎಗ್ಗಿಲ್ಲದೆ ಸಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಜಗತ್ತಿನಲ್ಲೇ ಅತ್ಯಂತ ಹೆಸರುವಾಸಿಯಾದ ಪುಣ್ಯ ಕ್ಷೇತ್ರ. ನಾಗಾರಾಧನೆ ಸೇರಿದಂತೆ ಸರ್ಪ ಸಂಸ್ಕಾರದ ಕೇಂದ್ರ ಬಿಂದು. ಲಕ್ಷಗಟ್ಟಲೇ ಜನ ಬರುವ ಮತ್ತು ಅಭಿವೃದ್ಧಿ ಹೊಂದುತ್ತಾ ಬೆಳೆಯುತ್ತಿರುವ ಇಲ್ಲಿ ಆಧುನಿಕ ಚಿತಾಗಾರವೇ ಇಲ್ಲ.
ಸುಬ್ರಹ್ಮಣ್ಯ ಗ್ರಾಪಂ ಆಡಳಿತವು ಇಂಜಾಡಿ ಎಂಬಲ್ಲಿ ಶವ ಸಂಸ್ಕಾರಕ್ಕೆಂದು ಜಾಗ ಮೀಸಲಿಟ್ಟಿದೆ. ಸುಮಾರು 1 ಎಕರೆ ಜಾಗವನ್ನು ಶವಸಂಸ್ಕಾರಕ್ಕೆಂದು ಮೀಸಲಿಟ್ಟಿದ್ದರೂ ಯಾವುದೇ ಮೂಲ ಸೌಲಭ್ಯವಿಲ್ಲದೇ ಕೊರತೆಯಿಂದಾಗಿ ಬಯಲಲ್ಲೇ ಶವ ಧಪನಗೊಳಿಸುವಂಥ ದುಸ್ಥಿತಿ ಇದೆ.
ಅಲ್ಲದೆ ರುದ್ರಭೂಮಿ ಬಯಲು ಪ್ರದೇಶದಲ್ಲಿರುವುದರಿಂದ ಮೇಲ್ಛಾವಣಿ ಇಲ್ಲದ ಕಾರಣ ಮಳೆಗಾಲದಲ್ಲಿ ಶವಸಂಸ್ಕಾರ ಮಾಡಲು ತುಂಬಾ ಕಷ್ಟವಾಗುತ್ತಿದೆ. ಮಳೆಬಂದರೆ ಬೆಂಕಿ ನಂದಿಹೋಗಿ ಶವಗಳು ಅರ್ಧ ಸುಟ್ಟು ಉಳಿದ ಭಾಗವನ್ನು ನಾಯಿ ಮೊದಲಾದ ಪ್ರಾಣಿಗಳು ಎಳೆದಾಡಿ ಪರಿಸರವನ್ನು ಹಾಳು ಮಾಡುತ್ತವೆ. ಈ ರುದ್ರಭೂಮಿಯಲ್ಲಿ ಹೆಚ್ಚಾಗಿ ಕುಮಾರಧಾರ ಮತ್ತಿತರ ನದಿಯಲ್ಲಿ ಪತ್ತೆಯಾಗುವ ಅಪರಿಚಿತ ಶವಗಳನ್ನು ಹೆಚ್ಚಾಗಿ ಸಂಸ್ಕಾರ ಮಾಡಲಾಗುತ್ತದೆ. ಖಾಸಗಿ ಜನರು ತಮ್ಮ ಖಾಸಗಿ ಸ್ಥಳಗಲ್ಲೇ ಶವಸಂಸ್ಕಾರ ಮಾಡುತ್ತಾರೆ.
ಈ ಜಾಗದಲ್ಲಿ ಸುಸಜ್ಜಿತವಾದ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸುಮಾರು 30 ಲಕ್ಷ ಅಗತ್ಯವಿದೆ.
ಸರ್ಕಾರ ಗ್ರಾಮೀಣ ಮತ್ತು ನಗರಗಳಲ್ಲಿ ರುದ್ರಭೂಮಿ ಹಾಗೂ ಆಧುನಿಕ ಚಿತಾಗಾರ ಒದಗಿಸಲು ನೆರವು ನೀಡುತ್ತಿದೆ. ಆದರೆ ಇಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ ಭದ್ರತಾ ಸಿಬ್ಬಂದಿ, ಪ್ರಾರ್ಥನಾ ಮಂದಿರ, ಶೌಚಾಲಯ, ವಿದ್ಯುತ್ ಚಿತಾಗಾರದ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಪಂ ಮತ್ತು ಸ್ಥಳೀಯ ದೇವಾಲಯದ ಆಡಳಿತ ಈ ಸಮಸ್ಯೆ ಬಗ್ಗೆ ಈವರೆಗೆ ಸ್ಪಂದಿಸಿಲ್ಲ.
ಕೆಲ ವರ್ಷಗಳಿಂದ ಆಗಾಗ್ಗೆ ಅಪರಿಚಿತ ಶವಗಳು ಈ ಪರಿಸರದಲ್ಲಿ ಕಂಡು ಬರುತ್ತಿವೆ. ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿ ಹೊಂದಿ ದೊಡ್ಡದೊಡ್ಡ ಕಟ್ಟಡಗಳು ತಲೆಎತ್ತಿರುವುದರಿಂದ ಶವ ಸಂಸ್ಕಾರ ಮಾಡಲು ಸಮರ್ಪಕ ಸೌಲಭ್ಯವಿರುವ ಚಿತಾಗಾರದ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

