ದಕ್ಷಿಣ ಕನ್ನಡ

ಇಂದು ಜನಜಾಗೃತಿ ಕಾರ್ಯಕ್ರಮ

Published On :

ಬೆಳ್ತಂಗಡಿ: ಸ್ವದೇಶಿ ಜಾಗರಣ ಮಂಚ್ ಹಾಗೂ ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಶ್ರಯದಲ್ಲಿ ಚಿಲ್ಲರೆ ವ್ಯಾಪರಕ್ಕೆ ವಿದೇಶಿ ಬಂಡವಾಳ(ಎಫ್‌ಡಿಐ) ಅಪಾಯದ ಹಲವು ಮುಖಗಳು ಜನಜಾಗೃತಿ ಕಾರ್ಯಕ್ರಮ ಮಾ.15 ರಂದು ರಾತ್ರಿ 8 ಗಂಟೆಗೆ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ. ಸ್ವದೇಶಿ ಜಾಗರಣ ಮಂಚ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಜಗದೀಶ್ ಮುಖ್ಯ ಭಾಷಣ ಮಾಡಲಿದ್ದಾರೆ. ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ. ಪಾಂಡುರಂಗ ಬಾಳಿಗ ಅಧ್ಯಕ್ಷತೆ ವಹಿಸಲಿದ್ದಾರೆ.
ಇಂದು ಮಹಾಗಣಯಾಗ
ಬೆಳ್ತಂಗಡಿ: ಲೋಕ ಕಲ್ಯಾಣಾರ್ಥವಾಗಿ ಮಾ.15 ರಂದು ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಅಷ್ಟೋತ್ತರ ಸಹಸ್ರ ನಾರೀಕೇಳ ಮಹಾಗಣಯಾಗ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ಕೋಣಂದೂರು ಗೋಪಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಯಾಗ ನಡೆಯಲಿದೆ. ಪೂರ್ಣಾಹುತಿ ಸಂದರ್ಭ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಂದ ಆಶೀರ್ವಚನವಿರುತ್ತದೆ. ಒಂದು ಕಾಯಿ ಗಣಹೋಮದ ಬಾಬ್ತು ರು. 300ಗಳ ಕೂಪನ್ ಅನ್ನದಾನಕ್ಕೆ 10,001 ಮತ್ತು 5,001ಗಳ ಸೇವಾ ಕಾರ್ಯ ನಡೆಸಲು ಅವಕಾಶವಿರುತ್ತದೆ. ಸುಮಾರು ರು. 7 ಲಕ್ಷ ವೆಚ್ಚವಾಗಲಿದೆ. ಯಾಗಕ್ಕೆ ಮನೆಗಳಿಂದ ಅಕ್ಕಿ, ಬೆಲ್ಲ, ಎಳ್ಳುನೀರು, ತೆಂಗಿನಕಾಯಿ, ಹೂವು, ತುಪ್ಪ, ತರಕಾರಿ, ಹಣ್ಣುಹಂಪಲು, ಅಡಿಕೆ ಮುಂತಾದವುಗಳನ್ನು ಸಮರ್ಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಮತ್ತು ಸುಮಾರು 5 ಸಾವಿರ ಮಂದಿಗೆ ಅನ್ನದಾನ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು  ಗಣಯಾಗ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಆರ್ಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.