17ರಂದು ಸಮಸ್ತ ಮಹಾ ಸಮ್ಮೇಳನ
ಬಂಟ್ವಾಳ: ವಿಟ್ಲ ರೇಂಜ್ ಸಮಸ್ತ ಮದ್ರಸ ಮೆನೇಜ್ಮೆಂಟ್ ವತಿಯಿಂದ ಕರ್ನಾಟಕಕ್ಕೆ ಪ್ರಥಮ ಬಾರಿ ಆಗಮಿಸಲಿರುವ ಸಮಸ್ತದ ನೂತನ ಅಧ್ಯಕ್ಷ ಶೈಖುನಾ ತಖಿಯ್ಯುದ್ದೀನ್ ಕೋಯಕುಟ್ಟಿ ಉಸ್ತಾದ್ ಸನ್ಮಾನ ಹಾಗೂ ಸಮಸ್ತ ಮಹಾ ಸಮ್ಮೇಳನ 17ರಂದು ಕಲ್ಲಡ್ಕ-ಗೋಳ್ತಮಜಲಿನ ಸಂಶುಲ್ ಉಲಮಾ ನಗರದ ಕಾಳಂಬಾಡಿ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಅಪರಾಹ್ನ 2ಕ್ಕೆ ನಡೆಯುವ ಅಧ್ಯಯನ ಶಿಬಿರವನ್ನು ಸಮಸ್ತ ಮುಶಾವರ ದ.ಕ. ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಲಿದ್ದು, ಕಲ್ಲಡ್ಕ ಜುಮಾ ಮಸೀದಿ ಮುದರ್ರಿಸ್ ಕೆ.ಎಸ್. ಹೈದರ್ ದಾರಿಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶೈಖುನಾ ಪಾತೂರು ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸಲಿದ್ದು, ಖ್ಯಾತ ವಿದ್ವಾಂಸ ಎಂ.ಪಿ. ಮುಸ್ತಫಲ್ ಫೈಝಿ ತಿರೂರು 'ತ್ವರೀಕತ್ ಸತ್ಯ ಹಾಗೂ ಮಿಥ್ಯ' ವಿಷಯ ಮಂಡನೆಗೈಯುವರು.
ಸನ್ಮಾನ, ಸಮಾರೋಪ: ಸಂಜೆ 4.30ಕ್ಕೆ ನಡೆಯುವ ಸನ್ಮಾನ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ಜಬ್ಬಾರ್ ಮುಸ್ಲಿಯಾರ್ ಮಿತ್ಬೈಲು ಉದ್ಘಾಟಿಸಲಿದ್ದಾರೆ.
ಸಮಸ್ತ ಮುಶಾವರ ದ.ಕ. ಜಿಲ್ಲಾಧ್ಯಕ್ಷ ಸಯ್ಯಿದ್ ಫೈಝಿನುಲ್ ಆಬಿದೀನ್ ತಂಙಳ್ ದುಆ ನೆರವೇರಿಸುವರು.
ಸಮಸ್ತದ ನೂತನ ಅಧ್ಯಕ್ಷ ಶೈಖುನಾ ತಖಿಯ್ಯುದ್ದೀನ್ ಕೋಯಕುಟ್ಟಿ ಉಸ್ತಾದ್ ಹಾಗೂ ಕೋಶಾಧಿಕಾರಿ ಶೈಖುನಾ ಪಿ.ಪಿ. ಇಬ್ರಾಹಿಂ ಮುಸ್ಲಿಯಾರ್ ಪಾರನ್ನೂರು ಅವರನ್ನು ಕಲ್ಲಡ್ಕ ಸಮಸ್ತ ಮಹಾ ಸಮ್ಮೇಳನದ ಸ್ವಾಗತ ಸಮಿತಿ ಚೆಯರ್ಮೆನ್ ಹಾಜಿ ಕೆ.ಎಸ್. ಇಸ್ಮಾಯಿಲ್ ಕಲ್ಲಡ್ಕ ಹಾಗೂ ಕನ್ವೀನರ್ ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು ಸನ್ಮಾನಿಸುವರು.
ತರಗತಿ ಸಮಯ ಬದಲಾವಣೆ: ಸಮಸ್ತ ಅಂಗೀಕೃತ ಜಿಲ್ಲೆಯ ಎಲ್ಲಾ ಮದ್ರಸಗಳಲ್ಲಿ 17ರ ಭಾನುವಾರ ರಾತ್ರಿಯ ತರಗತಿಗಳನ್ನು ಅದೇ ದಿನ ಬೆಳಗ್ಗೆ 10 ರಿಂದ 12 ರ ತನಕ ನಡೆಸಲಾಗುವುದು ಎಂದು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಲತೀಫ್ ದಾರಿಮಿ ಹಾಗೂ ಜಿಲ್ಲಾ ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಐ. ಮೊದಿನಬ್ಬ ಹಾಜಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

