ದಕ್ಷಿಣ ಕನ್ನಡ

ಡ್ರಗ್ಸ್ ಪತ್ತೆಗೆ ಶ್ವಾನದಳ ಮೇಲ್ದರ್ಜೆಗೆ: ಎಡಿಜಿಪಿ

Published On :

ಮಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಪತ್ತೆಗೆ ಪೊಲೀಸ್ ಇಲಾಖೆಯಲ್ಲಿರುವ ಶ್ವಾನದಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಶ್ವಾನದಳವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಎಡಿಜಿಪಿ ಎ. ಎಂ.ಪ್ರಸಾದ್ ಹೇಳಿದ್ದಾರೆ.   ಮಂಗಳೂರಿನ ರೋಶನಿ ನಿಲಯದಲ್ಲಿ ಗುರುವಾರ 'ಮಾದಕ ವ್ಯಸನ ನಿಯಂತ್ರಣಕ್ಕೆ ತಾಂತ್ರಿಕತೆ ಬಳಕೆ' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ವಿದೇಶಿ ಶ್ವಾನಕ್ಕಿಂತ ಭಾರತೀಯ ಶ್ವಾನಗಳು ಉತ್ತಮವಾಗಿದ್ದು, ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಸೂಕ್ಷ್ಮಮತಿ ಹೊಂದಿವೆ. ಪ್ರಸ್ತುತ ಅಯೋಡೆಕ್ಸ್, ವೈಟ್‌ಪೈಂಟ್ ಮುಂತಾದವುಗಳಲ್ಲಿ ಡ್ರಗ್ಸ್ ಅಂಶಗಳು ಪತ್ತೆಯಾಗಿವೆ. ತಾಂತ್ರಿಕವಾಗಿ ಡ್ರಗ್ಸ್ ಅಂಶವನ್ನು ಪತ್ತೆ ಮಾಡುವುದಕ್ಕಿಂತ ನಿಖರವಾಗಿ ಶ್ವಾನದಳದಿಂದ ಸಾಧ್ಯ. ಈಗ ಬೆಂಗಳೂರು ಮತ್ತು ಮಂಗಳೂರಲ್ಲಿ ಶ್ವಾನದಳದ ಡ್ರಗ್ಸ್ ಪತ್ತೆ ಸ್ಕ್ವಾಡ್ ಇದೆ. ಇದನ್ನು ಎಲ್ಲ ವಲಯಗಳಿಗೆ ವಿಸ್ತರಿಸಲಾಗುವುದು ಎಂದರು.   ಎಸ್ಪಿ ಅಭಿಷೇಕ್ ಗೋಯಲ್ ಮಾತನಾಡಿ, ಡ್ರಗ್ಸ್ ಚಟ ಕುರಿತು ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಹದ್ದುಗಣ್ಣು ಇಡಬೇಕಾಗಿದೆ ಎಂದರು. 'ಅಪರಾಧ ಮತ್ತು ನೀವು' ಪುಸ್ತಕ ಬಿಡುಗಡೆ ಮಾಡಲಾಯಿತು. ಕಿಯೋಸ್ಕ್ ತರಬೇತಿ ಪಡೆದ 18 ಮಂದಿಗೆ ಪ್ರಮಾಣಪತ್ರ ನೀಡಲಾಯಿತು.  ಕ್ರಿಮಿನಾಲಜಿ ಮತ್ತು ಫೋರೇನ್ಸಿಕ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ಅಶೋಕ್ ಪ್ರಸ್ತಾವಿಕ ಮಾತನಾಡಿದರು. ಮಾಜಿ ಪ್ರಾಂಶುಪಾಲ ಜೆಸಿಂತಾ ಡಿಸೋಜ, ಸಂಸ್ಥೆ ಅಧ್ಯಕ್ಷ ಲೋಯಿಮಾ ಡಿಸೋಜ, ಡಾ.ದೀಪ್ತಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.