ದೇಶದ ಮೊದಲ ಕಚ್ಚಾತೈಲ ಭೂಗತ ಟ್ಯಾಂಕ್ ವರ್ಷಾಂತ್ಯಕ್ಕೆ ಸಂಪೂರ್ಣಟಿ ಆತ್ಮಭೂಷಣ್
ಮಂಗಳೂರು: ದೇಶದ ಮೊದಲ ಕಚ್ಚಾತೈಲ ಭೂಗತ ಸಂಗ್ರಹಗಾರ ಮಂಗಳೂರು ಹೊರವಲಯದ ಪೆರ್ಮುದೆ ಎಂಬಲ್ಲಿ ಸಿದ್ಧಗೊಳ್ಳುತ್ತಿದ್ದು, ಇದೇ ಡಿಸೆಂಬರ್ಗೆ ತೈಲ ಸಂಗ್ರಹಕ್ಕೆ ಸನದ್ಧವಾಗಲಿದೆ.
ಜೊತೆಗೆ ಉಡುಪಿಯ ಪಾದೂರು ಹಾಗೂ ವಿಶಾಖಪಟ್ಟಣದಲ್ಲೂ ಭೂಗತ ತೈಲ ಟ್ಯಾಂಕ್ ನಿರ್ಮಾಣವಾಗುತ್ತಿದ್ದು, 2014 ಡಿಸೆಂಬರ್ಗೆ ಪೂರ್ಣಗೊಳ್ಳಲಿವೆ. ಇದರೊಂದಿಗೆ, ತುರ್ತು ಪರಿಸ್ಥಿತಿ ಅಥವಾ ಆಪತ್ಕಾಲದಲ್ಲಿ ಬೇಕಾಗುವ ಕಚ್ಚಾತೈಲ ಸಂಗ್ರಹಿಸುವ ರಾಷ್ಟ್ರಗಳ ಸಾಲಿಗೆ ಭಾರತ ಸೇರಲಿದೆ.
ಇಂಡಿಯನ್ ಪೆಟ್ರೋಲಿಯಂ ಸ್ಟ್ರೆಟಜಿಕ್ ರಿಸೋರ್ಸಸ್ ಲಿಮಿಟೆಡ್(ಐಎಸ್ಪಿಆರ್ಎಲ್) ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಆರ್ಥಿಕ ನೆರವು ನೀಡುತ್ತಿದೆ.
2005ರಲ್ಲಿ ಪ್ರಾರಂಭ: ಪೆರ್ಮುದೆ, ಪಾದೂರು ಹಾಗೂ ವಿಶಾಖಪಟ್ಟಣದಲ್ಲಿ ಭೂಗತ ತೈಲಸಂಗ್ರಹಾಗಾರ ನಿರ್ಮಾಣ 2005ರಲ್ಲಿ ಶುರುವಾಯಿತು. ಆಗ ಇದ್ದ ವೆಚ್ಚ ಈಗ ದುಪ್ಪಟ್ಟಾಗಿದ್ದು ಪೆರ್ಮುದೆ ರು. 1,300 ಕೋಟಿ, ಪಾದೂರು ರು. 1,800 ಕೋಟಿ ಹಾಗೂ ವಿಶಾಖಪಟ್ಟಣ ರು. 1,114.50 ಕೋಟಿ ವೆಚ್ಚವಾಗಲಿದೆ. ಈ ಮೂರು ತೈಲ ಸಂಗ್ರಹಾಗಾರಗಳ ಕಾಮಗಾರಿ 2012ರಲ್ಲಿ ಮುಕ್ತಾಯವಾಗಬೇಕಿತ್ತು. ನಾನಾ ಕಾರಣಗಳಿಂದ ವಿಳಂಬವಾಗಿ ಪೆರ್ಮುದೆ 2012 ಡಿಸೆಂಬರ್ ಹಾಗೂ ಉಳಿದೆರೆಡು ತೈಲಸಂಗ್ರಹಾಗಾರಗಳ ಕಾಮಗಾರಿ 2014 ಡಿಸೆಂಬರ್ 3ನೇ ತ್ರೈಮಾಸಿಕಕ್ಕೆ ಮುಗಿಯಲಿದೆ.
ಪೆರ್ಮುದೆ ತೈಲ ಟ್ಯಾಂಕ್ ವಿಶೇಷ ಆರ್ಥಿಕ ವಲಯ (ಎಸ್ಇಝಡ್)ವ್ಯಾಪ್ತಿಯ 8 ಎಕರೆಯಲ್ಲಿ ನಿರ್ಮಾಣವಾಗಿದ್ದು, ಈಗಾಗಲೇ ಶೇ.90 ಕಾಮಗಾರಿ ಮುಕ್ತಾಯವಾಗಿದೆ. ದಕ್ಷಿಣ ಕೊರಿಯಾ ಎಂಜಿನಿಯರ್ಸ್ ಮತ್ತು ಕರಣ್ಚಂದ್ ಥಾಪರ್ ಕಂಪನಿ ನಿರ್ಮಾಣ ಕಾರ್ಯ ನಡೆಸುತ್ತಿದೆ. ಇಲ್ಲಿ ಶಾಟ್ಕಟ್ ತಾಂತ್ರಿಕತೆಯಲ್ಲಿ ಸಿಮೆಂಟ್, ಫೈಬರ್ ಮತ್ತು ಸ್ಟೀಲ್ ಮಿಶ್ರಣವನು ಕೊಂಕಣ್ ರೇಲ್ವೆ ಟನಲ್ಸ್ಗೆ ಬಳಸಿದಂತೆ ಭೂಗತ ತೈಲಸಂಗ್ರಹಾಗಾರದ ಮಣ್ಣಿಗೆ ಲೇಪಿಸಲಾಗಿದೆ.
ಸಮುದ್ರದಿಂದ ಪೈಪ್ಲೈನ್: ಪೆರ್ಮುದೆ, ಪಾದೂರು ತೈಲ ಟ್ಯಾಂಕ್ಗೆ ಕಚ್ಚಾ ತೈಲ ಪೂರೈಕೆ ಕಾರ್ಯವನು ಪಣಂಬೂರಿನಲ್ಲಿರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ನಿರ್ವಹಿಸಲಿದೆ. ವಿಶಾಖಪಟ್ಟಣ ಭೂಗತ ಟ್ಯಾಂಕ್ಗೆ ಎಚ್ಪಿಸಿಎಲ್ ತೈಲ ತುಂಬಲಿದೆ. ಪೆರ್ಮುದೆ ಮತ್ತು ಪಾದೂರು ಭೂಗತ ಟ್ಯಾಂಕ್ಗೆ ಸಮುದ್ರದಿಂದ ಪ್ರತ್ಯೇಕವಾಗಿ ತೈಲ ಪೂರೈಸಲು ಬೃಹತ್ ಪೈಪ್ಲೈನ್ ಅಳವಡಿಕೆ ಪ್ರಾರಂಭವಾಗಿದೆ. ಸಮುದ್ರದಲ್ಲಿ ಸಿಂಗಲ್ ಪಾಯಿಂಟ್ ಮೂರಿಂಗ್(ಎಸ್ಪಿಎಂ) ವಿಧಾನದಲ್ಲಿ ತೈಲ ಪೈಪ್ ಮೂಲಕ ಭೂಗತ ಟ್ಯಾಂಕ್ ಪ್ರವೇಶಿಸಲಿದೆ. ಒಮ್ಮೆಗೆ ಒಂದು ಹಡಗಿನಿಂದ 3 ಲಕ್ಷ ಟನ್ ತೈಲ ಹೊರತೆಗೆಯಬಹುದು. ಒಂದು ಭೂಗತ ಟ್ಯಾಂಕ್ಗೆ ತೈಲ ಭರ್ತಿ ಮಾಡಲು ಬರೋಬ್ಬರಿ 5 ತಿಂಗಳು ಬೇಕು.
10 ದಿನಗಳಿಗೆ ಸಾಕು: ಪೆರ್ಮುದೆಯಲ್ಲಿ 1.5 ಮಿಲಿಯನ್ ಟನ್, ಪಾದೂರಿನಲ್ಲಿ 2.5 ಮಿಲಿಯನ್ ಟನ್ ಹಾಗೂ ವಿಶಾಖಪಟ್ಟಣದಲ್ಲಿ 2.5 ಮಿಲಿಯನ್ ಟನ್ ತೈಲ ಸಂಗ್ರಹ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ ತೈಲ ಹಾಹಾಕಾರ ಸಂಭವಿಸಿದರೆ ಈ ಮೂರು ಭೂಗತ ಟ್ಯಾಂಕ್ಗಳಲ್ಲಿನ ಒಟ್ಟು ತೈಲ ದೇಶದ ಬಳಕೆಗೆ 10 ದಿನಕ್ಕೆ ಸಾಕು. ಈಗ ವಾಹನಗಳ ಹೆಚ್ಚಳದಿಂದ ತೈಲ ಸಂಗ್ರಹ ಮತ್ತಷ್ಟು ದಿನಗಳಿಗೆ ಸಾಕಾಗದು.
2ನೇ ಹಂತದಲ್ಲಿ 45 ದಿನಕ್ಕೆ: ಎರಡನೇ ಹಂತಕ್ಕೆ ಪಾದೂರಿನಲ್ಲಿ ರು. 3 ಸಾವಿರ ಕೋಟಿ ವೆಚ್ಚದಲ್ಲಿ 2.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಇನೊಂದು ಭೂಗತ ಟ್ಯಾಂಕ್ ನಿರ್ಮಾಣವಾಗಲಿದೆ.
ಅಲ್ಲದೆ ಒಡಿಶಾ, ರಾಜಸ್ತಾನ ಹಾಗೂ ಗುಜರಾತ್ನಲ್ಲಿ ತಲಾ ರು. 2.50 ಕೋಟಿ ವೆಚ್ಚದಲ್ಲಿ ಭೂಗತ ಟ್ಯಾಂಕ್ ತಲೆ ಎತ್ತಲಿದೆ. ಇವು ದೇಶಕ್ಕೆ 45 ದಿನಕ್ಕೆ ಬೇಕಾಗುವಷ್ಟು ತೈಲ ಸಂಗ್ರಹ ಸಾಮರ್ಥ್ಯ ಪಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

