ದಕ್ಷಿಣ ಕನ್ನಡ

ವಿರೋಧಿಗಳೂ ಅಂಗೀಕರಿಸುವ ಏಕೈಕ ಪ್ರಸ್ಥಾನ 'ಸಮಸ್ತ'; ಅಬ್ದುಲ್ ಜಬ್ಬಾರ್ ಮುಸ್ಲಿಯಾರ್

Published On :

ಬಂಟ್ವಾಳ: ವಿರೋಧಿಗಳೂ ಕೂಡಾ ಅಂಗೀಕರಿಸುವ ಏಕೈಕ ಪ್ರಶ್ನಾತೀತ ಪ್ರಸ್ಥಾನವಾಗಿದೆ ಸಮಸ್ತ ಕೇರಳ ಜಂ- ಇಯ್ಯತುಲ್ ಉಲಮಾ ಎಂದು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಹೇಳಿದ್ದಾರೆ.
ಕಲ್ಲಡ್ಕ- ಗೋಳ್ತಮಜಲಿನ ಶಂಸುಲ್ ಉಲಮಾ ನಗರದ ಕಾಳಂಬಾಡಿ ಉಸ್ತಾದ್ ವೇದಿಕೆಯಲ್ಲಿ ವಿಟ್ಲ ರೇಂಜ್ ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ ಭಾನುವಾರ ನಡೆದ, ಕರ್ನಾಟಕಕ್ಕೆ ಪ್ರಥಮ ಬಾರಿ ಆಗಮಿಸಿದ ಸಮಸ್ತದ ನೂತನ ಅಧ್ಯಕ್ಷ ಶೈಖುನಾ ತಖಿಯ್ಯುದ್ದೀನ್ ಕೋಯಕುಟ್ಟಿ ಉಸ್ತಾದ್ಗೆ ಸನ್ಮಾನ ಹಾಗೂ ಸಮಸ್ತ ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಶೈಖುನಾ ತಖಿಯ್ಯುದ್ದೀನ್ ಕೋಯಕುಟ್ಟಿ ಉಸ್ತಾದ್ ಹಾಗೂ ಕೋಶಾಧಿಕಾರಿ ಶೈಖುನಾ ಪಿ.ಪಿ. ಇಬ್ರಾಹಿಂ ಮುಸ್ಲಿಯಾರ್ ಪಾರನ್ನೂರು ಅವರನ್ನು ಸಮ್ಮೇಳನ ಸ್ವಾಗತ ಸಮಿತಿಯ ಚೆಯರ್ಮ್ಯಾನ್ ಹಾಜಿ ಕೆ.ಎಸ್. ಇಸ್ಮಾಯಿಲ್ ಕಲ್ಲಡ್ಕ ಹಾಗೂ ಕನ್ವೀನರ್ ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು ಸನ್ಮಾನಿಸಿದರು.
ದ.ಕ. ಜಿಲ್ಲಾ ಸಮಸ್ತ ಮುಶಾವರ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುವಾ ನೆರವೇರಿಸಿದರು. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಅಬ್ದುಸ್ಸಮದ್ ಪೂಕೋಟೂರು, ಅಬ್ದುಲ್ ಬಾರಿ ಬಾಖವಿ ಕೊಡುವಳ್ಳಿ, ನಾಸಿರ್ ಫೈಝಿ ಕೂಡತ್ತಾಯಿ ಮುಖ್ಯ ಭಾಷಣ ಮಾಡಿದರು. ಪಟ್ಟಿಕ್ಕಾಡ್ ಜಾಮಿಅ ಅರಬಿಕ್ ಪ್ರಾಂಶುಪಾಲ ಶೈಖುನಾ ಆಲಿಕುಟ್ಟಿ ಉಸ್ತಾದ್, ಸಯ್ಯಿದ್ ಸ್ವಾಬಿಖಾಲಿ ಶಿಹಾಬ್ ತಂಙಳ್, ಸಯ್ಯಿದ್ ಪೂಕೋಯ ತಂಙಳ್ ತೃಕರೀಪುರ, ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್, ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಇಬ್ರಾಹಿಂ ಬಾಖವಿ ಕೆ.ಸಿ. ರೋಡ್, ಸಯ್ಯಿದ್ ಹಬೀಬುರ್ರಹ್ಮಾನ್ ತಂಙಳ್ ಗಡಿಯಾರ, ಸಯ್ಯಿದ್ ಬಾಅಲವಿ ತಂಙಳ್ ಕುಕ್ಕಾಜೆ, ಸಯ್ಯಿದ್ ಅಲವಿ ತಂಙಳ್ ವಾಲೆಮುಂಡೋವು, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕಣ್ಣೂರು, ಸಯ್ಯಿದ್ ಯಹ್ಯಾ ತಂಙಳ್ ಕೆಐಸಿ ಕುಂಬ್ರ, ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ, ಬಿ.ಕೆ. ಅಬ್ದುಲ್ ಖಾದರ್ ಅಲ್- ಖಾಸಿಮಿ ಬಂಬ್ರಾಣ, ಶೈಖುನಾ ಪಾತೂರು ಅಹ್ಮದ್ ಮುಸ್ಲಿಯಾರ್, ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಮುಹಮ್ಮದ್ ಹನೀಫ್ ಮಂಗಳೂರು, ಕೆ. ಅಶ್ರಫ್ ಮಂಗಳೂರು, ಹಾಜಿ ಮುಸ್ತಫಾ ಕೆಂಪಿ ಉಪ್ಪಿನಂಗಡಿ, ಅಬ್ದುರ್ರಹ್ಮಾನ್ ಹಾಜಿ ಹಾಸ್ಕೋ ಮೂಡುಬಿದಿರೆ, ಎಂ.ಎಸ್. ಮುಹಮ್ಮದ್, ಹಾಜಿ ಕೆ.ಪಿ. ಅಹ್ಮದ್ ಆಕರ್ಷಣ್ ಪುತ್ತೂರು, ಹಾಜಿ ನೌಶಾದ್ ಸೂರಲ್ಪಾಡಿ, ಹಾಜಿ ಮಜೀದ್ ಸೂರಲ್ಪಾಡಿ, ಹಾಜಿ ಮುಹಮ್ಮದ್ ಕುಂಞ ಯೇನಪೋಯ, ಹಾಜಿ ಜಿ. ಅಬ್ದುಲ್ ಖಾದರ್ ಗೋಳ್ತಮಜಲು, ಹಾಜಿ ಐ. ಮೊದಿನಬ್ಬ, ಟಿ.ಎಂ. ಶಹೀದ್ ಆರಂತೋಡು, ಹಾಜಿ ಬಿ.ಕೆ. ಮುಹಮ್ಮದ್ ಆತೂರು, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಹಾಜಿ ಅಬ್ದುಲ್ ಲತೀಫ್ ಮದರ್ ಇಂಡಿಯಾ, ಹಾಜಿ ಬಿ. ಹುಸೈನ್ ಕೊಡಾಜೆ, ಹಾಜಿ ಮಮ್ಮುಂಞ ಸೋನಾ ಮಂಗಳೂರು, ಹಾಜಿ ಎಚ್.ಎಸ್. ಉಸ್ಮಾನ್ ಪಾಣೆಮಂಗಳೂರು, ಹಾಜಿ ಎಸ್. ಅಬ್ಬಾಸ್ ಸಜಿಪ, ಹಾಜಿ ಅಬ್ಬಾಸ್ ಚಕ್ಕಮಕ್ಕಿ, ಹಾಜಿ ಬಿ.ಎಸ್. ಹುಸೈನ್ ಜೋಕಟ್ಟೆ, ಹಾಜಿ ಸಿ.ಕೆ. ಇಬ್ರಾಹಿಂ, ಹಾಜಿ ಕಣಚೂರು ಮೋರು, ಹಾಜಿ ಎಸ್.ಎಂ.ರಷೀದ್ ಮೊದಲಾದವರು ಭಾಗವಹಿಸಿದ್ದರು. ಸ್ವಾಗತ ಸಮಿತಿಯ ವೈಸ್ ಕನ್ವೀನರ್ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿ, ಕೋಶಾಧಿಕಾರಿ ಕೆ. ಅಬ್ದುಲ್ ಹಮೀದ್ ಹಾಜಿ ವಂದಿಸಿದರು. ಕೆ.ಐ. ಅಬ್ದುಲ್ ಖಾದರ್ ದಾರಿಮಿ ನಿರೂಪಿಸಿದರು. ಖ್ಯಾತ ವಿದ್ವಾಂಸ ಎಂ.ಪಿ. ಮುಸ್ತಫಲ್ ಫೈಝಿ ತಿರೂರು ಅವರಿಂದ 'ತ್ವರೀಖತ್ ಸತ್ಯ ಹಾಗೂ ಮಿಥ್ಯ' ಎಂಬ ವಿಷಯದಲ್ಲಿ ಅಧ್ಯಯನ ಶಿಬಿರ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.