ದಕ್ಷಿಣ ಕನ್ನಡ

ತಮಿಳು ಕಾರ್ಮಿಕರ ಸತ್ಯಾಗ್ರಹ ಸ್ಥಳಕ್ಕೆ ಪೂಜಾರಿ ಭೇಟಿ

Published On :

ಸುಳ್ಯ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ತಮಿಳು ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಸ್ಥಳಕ್ಕೆ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮಂಗಳವಾರ ಭೇಟಿ ನೀಡಿದರು.
ಕಾರ್ಮಿಕ ಮುಖಂಡರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿದು ಮಾತನಾಡಿದ ಅವರು, ನೀವು 25000 ದಷ್ಟು ಸಂಖ್ಯೆಯಲ್ಲಿದ್ದೀರಿ. ಆದರೆ, ಇಲ್ಲಿ ಸೇರಿರುವುದು 100 ರಷ್ಟು ಜನ. ನಿಮ್ಮ ಶಕ್ತಿ ಜನಪ್ರತಿನಿಧಿಗಳಿಗೆ ಗೊತ್ತಾದರೆ ಮಾತ್ರ ಅವರು ಓಡೋಡಿ ಬರುತ್ತಾರೆ. ಶಕ್ತಿ ಪ್ರದರ್ಶನ ಮಾಡದಿದ್ದರೆ ಯಾರೂ ಬರುವುದಿಲ್ಲ ಎಂದರು.
 ನಿಮ್ಮ ಬೇಡಿಕೆಗಳನ್ನು ಕೇಳದ ಬಿಜೆಪಿಯವರನ್ನು ಮತ ನೀಡಿ ಗೆಲ್ಲಿಸಿದ್ದೀರಿ. ಅವರು ನಿಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಇನ್ನಾದರೂ ನಿಮ್ಮ ಶಕ್ತಿ ಅರಿಯಿರಿ. ಮುಂದೆ ಕಾಂಗ್ರೆಸ್ ಸರ್ಕಾರ ಬಂದರೆ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹರಿಕೃಷ್ಣ ಬಂಟ್ವಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಮಾಜಿ ಜಿ.ಪಂ. ಸದಸ್ಯ ಭರತ್ ಮಂಡೋಡಿ, ಕಾಂಗ್ರೆಸ್ ನಾಯಕರಾದ ಧನಂಜಯ ಅಡ್ಪಂಗಾಯ, ಕೆ.ಎಂ. ಮುಸ್ತಪಾ, ಕೆ. ಗೋಕುಲ್‌ದಾಸ್, ಪಿ.ಎ. ಮಹಮ್ಮದ್, ದಿನೇಶ್ ಅಂಬೆಕಲ್ಲು ಮೊದಲಾದವರು ಇದ್ದರು.
ಸತ್ಯಾಗ್ರಹ ನಿಲ್ಲಿಸಲು ಪೂಜಾರಿ ತಾಕೀತು: ತಮಿಳು ಕಾರ್ಮಿಕರ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರು ಅಹೋರಾತ್ರಿ ಸತ್ಯಾಗ್ರಹವನ್ನು ಕೊನೆಗೊಳಿಸಲು ಸೂಚಿಸಿದ್ದರೂ ಇದಕ್ಕೊಪ್ಪದ ಕಾರ್ಮಿಕ ಮುಖಂಡರು ಸತ್ಯಾಗ್ರಹ ಮುಂದುವರಿಸಿದ್ದಾರೆ.
ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸ್ಪಷ್ಟ ಭರವಸೆ ನೀಡಬೇಕು. ಇಲ್ಲದಿದ್ದರೆ ಬುಧವಾರದಿಂದ ಪ್ರತಿಭಟನೆಯನ್ನು ಇನ್ನಷ್ಟು ಉಗ್ರಗೊಳಿಸಲಾಗುವುದು ಎಂದು ಕಾರ್ಮಿಕ ಮುಖಂಡ ಚಂದ್ರಲಿಂಗಂ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.