ದಕ್ಷಿಣ ಕನ್ನಡ

ಗೆದ್ದವರು ಸ್ವಚ್ಛ ಆಡಳಿತ ನೀಡಿ ಮಾದರಿಯಾಗಿ: ಪೂಜಾರಿ

Published On :

ಪುತ್ತೂರು: ಪುರಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹತಾಶರಾಗಬೇಕಾಗಿಲ್ಲ ಎಂದ ಅವರು ಗೆದ್ದವರು ಅಹಂಕಾರ ತೋರದೆ ಸ್ವಚ್ಚ ಆಡಳಿತ ನೀಡುತ್ತಾ ಕಾರ್ಯಕರ್ತರೊಂದಿಗೆ ಸನ್ನಡತೆಯೊಂದಿಗೆ ಬೆರೆಯುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಬಿಜೆಪಿಯವರಂತೆ ನಾವಲ್ಲ ಎಂದು ತೋರಿಸಿ ಕೊಡಬೇಕು. ಮಾದರಿಯಾಗುವಂಥ ಕೆಲಸ ಮಾಡಿ ತೋರಿಸಿ ಎಂದು ಜನಾರ್ದನ ಪೂಜಾರಿ ತಿಳಿಸಿದರು.
ಅವರು ಪುತ್ತೂರಿನ ಜೈನ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀತಯಾಡಳಿತ ಚುನಾವಣೆಯಲ್ಲಿ ಗೆದ್ದಮಾತ್ರಕ್ಕೆ ವಿಜಯೋತ್ಸವ ಆಚರಿಸುವುದು ಸರಿಯಲ್ಲ ಎಂದ ಪೂಜಾರಿ ಶೀಘ್ರದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದ್ದು ಅದಕ್ಕಾಗಿ ಸಿದ್ಧತೆ ನಡೆಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.
ಕೆಪಿಸಿಸಿ ಕಾರ್ಯದರ್ಶಿ ವಿನಯ ಕುಮಾರ್ ಮಾತನಾಡಿ ಕರಾವಳಿಯಲ್ಲಿ ಪರಿವರ್ತನೆಯ ಫಲಿತಾಂಶವನ್ನು ಜನತೆ ನೀಡಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ದುರಾಡಳಿತದ ವಿರುದ್ಧ ಜನರು ಇದೇ ಫಲಿತಾಂಶವನ್ನು ನೀಡಲಿದ್ದಾರೆ ಎಂದರು. ಪುತ್ತೂರು ಜಿಲ್ಲೆಯಾಗುವ ಕನಸಿನೊಂದಿಗೆ ಪುರಸಭಾ ಪ್ರಣಾಳಿಕೆಯಲ್ಲಿ ತಿಳಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವತ್ತ ಮುಂದಾಗುವಂತೆ ಅವರು ನೂತನ ಸದಸ್ಯರಿಗೆ ತಿಳಿಸಿದರು. ಸಂಕಪ್ಪ ರೈ ಅಧ್ಯಕ್ಷತೆ ವಹಿಸಿದ್ದರು. ಶಕುಂತಳಾ ಶೆಟ್ಟಿ, ಕಳ್ಳಿಗೆ ತಾರಾನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಪ್ರವೀಣ್ ಚಂದ್ರ ಆಳ್ವ, ಪಿ.ಪಿ. ವರ್ಗೀಸ್, ಎಂ. ವೆಂಕಪ್ಪ ಗೌಡ ಉಪಸ್ಥಿತರಿದ್ದರು. ನೂತನ ಸದಸ್ಯರನ್ನು ವಿನಯ ಕುಮಾರ್ ಸೊರಕೆ ಗೌರವಿಸಿದರು.
ಪಕ್ಷಕ್ಕೆ ಸೇರ್ಪಡೆಗೊಂಡ ಎಸ್‌ಡಿಪಿಐ ಪಕ್ಷದ ಅಬ್ದುಲ್ ರಹಿಮಾನ ಪಡೀಲು ಸಹಿತ ಹಲವು ಕಾರ್ಯಕರ್ತರನ್ನು ಪಕ್ಷದ ಧ್ವಜ ನೀಡಿ ಬರಮಾಡಿಕೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.