ಗುರುವಿನ ಗುರುಗಳಿಗೆ ವಿಶಿಷ್ಟ ಗುರುವಂದನೆ
ಉಪ್ಪಿನಂಗಡಿ: ನಿವೃತ್ತಿಯ ಅಂಚಿನಲ್ಲಿರುವ ಇಲ್ಲಿನ ಸರ್ಕಾರಿ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಬಿ. ಐತ್ತಪ್ಪ ನಾಯ್ಕ್ ತಮಗೆ ಶಿಕ್ಷಣ ನೀಡಿದ ಗುರುಗಳನ್ನು ಗುರುತಿಸಿ, ಕಯಿಸಿ ಅವರನ್ನು ಸಕಲ ಮರ್ಯಾದೆಗಳೊಂದಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಗುರುವಿನ ಗುರುವಿಗೆ ಸನ್ಮಾನಿಸುವ ವಿಶಿಷ್ಟ ಕಾರ್ಯಕ್ರಮ ಶಾಲೆಯಲ್ಲಿ ಭಾನುವಾರ ನಡೆಯಿತು.
ತಮ್ಮ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಕರ ಬಗ್ಗೆ ಸತತ ಸಂಪರ್ಕ ಇಟ್ಟಕೊಂಡು ಪ್ರಸ್ತುತ ಇರುವ 14 ಮಂದಿ ಗುರುಗಳನ್ನು ಆಹ್ವಾನಿಸಿ ತಾವು ಈ ಮಟ್ಟಕ್ಕೆ ಬೆಳೆಯಲು ಇವರ ಕೊಡುಗೆ ಅಪಾರವೆಂದು ಗುರುಗಳನ್ನು ಶ್ಲಾಘಿಸಿ ನೆರೆದ ನೂರಾರು ಸಭಿಕರ ಸಮ್ಮುಖದಲ್ಲಿ ಫಲಪುಷ್ಪ, ಶಾಲು ಸ್ಮರಣಿಕೆ ಅರ್ಪಿಸಿದರು.
ಬಿ. ಐತ್ತಪ್ಪ ನಾಯ್ಕರ ಗುರುಗಳಾದ ಡಾ. ಸದಾಶಿವ ಭಟ್ಟ, ಕೆ. ತಾರಾನಾಥ ಶೆಟ್ಟಿ, ಬಿ. ರಾಮ್ ಭಟ್, ಎನ್. ಸಂಜೀವ ರೈ, ಶ್ರೀಪತಿ ಭಟ್, ಕೆ. ವೆಂಕಟರಮಣ ಭಟ್, ಕೆ. ಗುಲಾಬಿ, ಸುಬ್ರಾಯ ಭಟ್, ಕೆ. ಮಾಹಾಲಿಂಗ ಭಟ್, ಎಂ. ಶ್ರೀಧರ ಭಟ್, ಬಿ. ಫಕೀರ ನಾಯ್ಕ, ಎಂ. ಮಾಧವ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಗುರು ಪರಂಪರೆ ಮರೆಯುತ್ತಿರುವ ಇಂದಿನ ದಿನಗಳಲ್ಲಿ ವೃದ್ಧ ಗುರುಗಳನ್ನು ಕರೆಸಿ ಅವರನ್ನು ಸನ್ಮಾನಿಸಿ ಗೌರವಿಸುವ ಅನುಪಮ ನಡೆ ಎಂದರು.
ಧನ್ಯ ಕುಮಾರ ರೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ, ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಆಡಳಿತ ಧರ್ಮದರ್ಶಿ ಕರುಣಾಕರ ಸುವರ್ಣ, ಯು.ವಿ. ಭಟ್, ಎನ್. ಸುಕುಮಾರ ಗೌಡ ಇದ್ದರು. ನುಳಿಯಾಲು ರಘುನಾಥ ರೈ ಅಭಿನಂದನಾ ಭಾಷಣ ಮಾಡಿದರು. ಎಂ. ಪುಷ್ಪಲತಾ ತಿಲಕ್ ನಿರೂಪಿಸಿದರು. ಬಿ. ಐತಪ್ಪ ನಾಯ್ಕ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

