ದಕ್ಷಿಣ ಕನ್ನಡ

ಪ್ರಯಾಣಿಕನಾಗಿ ಆಂಬುಲೆನ್ಸ್‌ನಲ್ಲಿ ಹೊರಟ ಯುವಕ ಮೃತ್ಯುವಶ

Published On :

ಉಪ್ಪಿನಂಗಡಿ/ಪುತ್ತೂರು: ಚೆನ್ನರಾಯಪಟ್ಟಣದಲ್ಲಿ ಸೋಮವಾರ ರಾತ್ರಿ ಟ್ಯಾಂಕರ್ ಮತ್ತು ಆಂಬುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿ ಪುತ್ತೂರು ತಾಲೂಕಿನ ಯುವಕ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಪಂಜಳ ಜನತಾ ಕಾಲನಿ ನಿವಾಸಿ ಐತ್ತಪ್ಪ ಅವರ ಪುತ್ರ ಶೇಖರ್ (19) ಮೃತರು.  
 ಬೆಂಗಳೂರಿನಲ್ಲಿ ಆಂಬುಲೆನ್ಸ್ ಚಾಲಕನಾಗಿದ್ದ ಈತ ಸೋಮವಾರ ರಾತ್ರಿ ತನ್ನ ಊರು ಉಪ್ಪಿನಂಗಡಿಗೆ ಹೊರಟಿದ್ದರು. ಇದೇ ಸಂದರ್ಭದಲ್ಲಿ, ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಶೇಖರ್ ಅವರ ಸ್ನೇಹಿತರೊಬ್ಬರು ತಾನು ಮಂಗಳೂರಿಗೆ ಹೊರಟಿದ್ದು ತನ್ನ ಆಂಬುಲೆನ್ಸ್‌ನಲ್ಲಿ ಬರುವಂತೆ ತಿಳಿಸಿದ್ದರು ಎನ್ನಲಾಗಿದ್ದು, ಗೆಳೆಯನೊಂದಿಗೆ ಊರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.  ಅಪಘಾತದಲ್ಲಿ ಮೃತಪಟ್ಟ 6 ಮಂದಿಯಲ್ಲಿ ಇವರು ಕೂಡಾ ಒಬ್ಬರು. ಹತ್ತನೇ ತರಗತಿ ವರೆಗೆ ಓದಿರುವ ಶೇಖರ ತನ್ನ ತಂದೆ, ತಾಯಿ, ಸಹೋದರಿಯ ಪಾಲಿಗೆ ಬದುಕಿನ ಆಶಾಕಿರಣವಾಗಿದ್ದ. ಇದೀಗ ಕುಟುಂಬದ ಏಕೈಕ ಪುತ್ರನನ್ನು ಕಳೆದು ಅನಾಥವಾದಂತಾಗಿದೆ.
ಹಲ್ಲೆ ಆರೋಪಿಗಳು ನ್ಯಾಯಾಲಯಕ್ಕೆ ಶರಣು
ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ನೆಕ್ಕರೆ ಎಂಬಲ್ಲಿ ಕಳೆದ ಶನಿವಾರ ವ್ಯಕ್ತಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ ಆರೋಪ ಎದುರಿಸುತ್ತಿದ್ದ ಮೂವರು ಮಂಗಳವಾರ ಪುತ್ತೂರಿನ ನ್ಯಾಯಾಲಯಕ್ಕೆ ಶರಣಾಗಿದ್ದು ನ್ಯಾಯಾಲಯವು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಅರಿಯಡ್ಕ ಗ್ರಾಮದ ನೆಕ್ಕರೆ ನಿವಾಸಿಗಳಾದ ಪ್ರಸಾದ್ ,ಚಂದ್ರ ಮತ್ತು ಭವಾನಿ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳು.
ಆಸ್ತಿ ವಿವಾದದ ಹಿನ್ನಲೆಯಲ್ಲಿ ಆರೋಪಿಗಳು ಕಳೆದ ಶನಿವಾರ ನೆರೆಯ ನಿವಾಸಿ ಸುಂದರ ಎಂಬವರಿಗೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದರೆಂದು ಆರೋಪಿಸಲಾಗಿತ್ತು.
ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.