ದಕ್ಷಿಣ ಕನ್ನಡ

ಸಾತ್ನಾದ ವಿದ್ವಾಂಸ ನೀರಜ್ ಜೈನ್ ನಿಧನ: ವೀರೇಂದ್ರಹೆಗ್ಗಡೆ ಸಂತಾಪ

Published On :

ದರ್ಮಸ್ಥಳ: ಸಾತ್ನಾದ ಖ್ಯಾತ ವಿದ್ವಾಂಸ ನೀರಜ್ ಜೈನ್ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ.
 ನೀರಜ್ ಜೈನ್ ನಿಧನ ಸುದ್ದಿ ತಿಳಿದು ವಿಷಾದವಾಯಿತು. ಜೈನ ಧರ್ಮದ ಬಗ್ಗೆ ಆಳ ಅಧ್ಯಯನ ನಡೆಸಿದ ಅವರು, ಇತರ ಧರ್ಮಗಳ ಬಗ್ಗೆಯೂ ಪ್ರಭುತ್ವ ಹೊಂದಿದ್ದರು. ತಮ್ಮ ಪ್ರವಚನದಲ್ಲಿ ಅವರ ವಿಷಯ ಮಂಡನೆ ಮತ್ತು ವಿಚಾರಧಾರೆಯ ಶೈಲಿ ಅದ್ಭುತವಾಗಿತ್ತು. ಅವರು ಯಾವುದೇ ವಿಚಾರವನ್ನು ತಮ್ಮ ಪ್ರವಚನದಲ್ಲಿ ಪ್ರಸ್ತಾಪಿಸಿದರೂ ತಾತ್ವಿಕ ಹಿನ್ನೆಲೆಯೊಂದಿಗೆ 'ಇದಮಿತ್ಥಂ' ಎನ್ನುವಂತೆ ವಿವರಿಸುತ್ತಿದ್ದರು. ಕಳೆದ ನಲುವತ್ತು ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದೊಂದಿಗೆ ನಿಕಟ ಸಂಬಂಧ ಹೊಂದಿದ ಅವರು, ನಮ್ಮ ಕುಟುಂಬದ ಓರ್ವ ಸದಸ್ಯರಂತೆ ಇಲ್ಲಿನ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಹೆಗ್ಗಡೆ ಸ್ಮರಿಸಿದ್ದಾರೆ.
 ಬಿರ್ಲಾ ಕಂಪೆನಿಯ ಪ್ರಿಯಂವದಾ ಬಿರ್ಲಾ ಅವರನ್ನು ನಮ್ಮ ಕ್ಷೇತ್ರಕ್ಕೆ ಪರಿಚಯಿಸಿ ಪ್ರತಿವರ್ಷ ಇಲ್ಲಿ ನಡೆಯುವ ಸಾಮೂಹಿಕ ವಿವಾಹಕ್ಕೆ ದಾನ ನೀಡುವಂತೆ ಪ್ರೋತ್ಸಾಹಿಸಿದ್ದಾರೆ. ಖ್ಯಾತ ವಿದ್ವಾಂಸರಾದ ನೀರಜ್ ಜೈನ್ ಅವರ ಕೊರತೆ ತುಂಬಲಾರದಷ್ಟು ದೊಡ್ಡ ಶೂನ್ಯತೆಯನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ- ತಾಳ್ಮೆಯನ್ನಿತ್ತು ಶ್ರೀಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುವುದಾಗಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.