ದಕ್ಷಿಣ ಕನ್ನಡ

ಈಡೇರದ ಸೇತುವೆ ಬೇಡಿಕೆ: ಬಸ್ತಿಕಾಡು ಗ್ರಾಮಸ್ಥರಿಂದ ಮತ ಬಹಿಷ್ಕಾರ ನಿರ್ಧಾರ

Published On :

ಸುಳ್ಯ: ಸೇತುವೆ ಬೇಡಿಕೆ ಈಡೇರಿಕೆಗಾಗಿ ಪಂಜ ಸಮೀಪದ ಬಸ್ತಿಕಾಡು ಪ್ರದೇಶದ ಜನರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.
 ಪಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತ್ಕುಂಜ ಗ್ರಾಮದ ಬಸ್ತಿಕಾಡಿಗೆ ಹೋಗುವಲ್ಲಿ ಬೊಳ್ಮಲೆ ಎಂಬಲ್ಲಿ ಬಸ್ತಿಕಾಡು ರಸ್ತೆಗೆ ಅಡ್ಡಲಾಗಿ ಪಂಜ ಹೊಳೆ ಹರಿಯುತ್ತದೆ. ಬಸ್ತಿಕಾಡು ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ 2, ಪರಿಶಿಷ್ಟ ಪಂಗಡದ 16 ಹಾಗೂ ಇತರ 2 ಒಟ್ಟು 20 ಮನೆಗಳಿದ್ದು, ಸಂಪರ್ಕ ಸೇತುವೆಯ ಕೊರತೆಯಿಂದಾಗಿ ಈ ಭಾಗದ ಜನರಿಗೆ ಸಂಚಾರ ದುಸ್ತರವಾಗಿದೆ.
 ಈ ಬೇಡಿಕೆ ಈಡೇರಿಕೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಈಡೇರದ ಪರಿಣಾಮ ಈ ಬಾರಿ ಮತದಾನವನ್ನೇ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಬಸ್ತಿಕಾಡಿನಲ್ಲಿ ಜರುಗಿದ ಪರಿಸರದ ಜನರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಬೇಡಿಕೆ ಈಡೇರುವವರೆಗೆ ನಿರಂತರ ಹೋರಾಟ ನಡೆಸುವುದಾಗಿ ಈ ಸಭೆಯಲ್ಲಿ ನಿರ್ಧರಿಸಲಾಯಿತು.
 ಮುಖ್ಯ ರಸ್ತೆಯಿಂದ 100 ಮೀ. ದೂರದಲ್ಲಿರುವ ಈ ಮನೆಗಳಿಗೆ ವಾಹನಗಳ ಮೂಲಕ ಬರಬೇಕಾದರೆ 3 ಕಿ.ಮೀ. ಸುತ್ತಿ ಬರಬೇಕಾದ ಅನಿವಾರ್ಯತೆ ಇದೆ. ವೃದ್ಧರು, ರೋಗಿಗಳು ಮಳೆಗಾಲದಲ್ಲಿ ಸಂಚರಿಸುವುದು ದುಸ್ತರ. ಇಷ್ಟು ಜನವಸತಿಯಿದ್ದರೂ ಈವರೆಗೆ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸದಿರುವುದು ವಿಪರ್ಯಾಸ ಎಂದು ಗ್ರಾಮಸ್ಥರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.