ಅಧಿಕ ಬೆಲೆಯಲ್ಲಿ ಹಾಲು ಮಾರಾಟ ವಿರುದ್ಧ ಕ್ರಮ
ಮಂಗಳೂರು: ನಂದಿನಿ ಹಾಲು ಖರೀದಿಸುವ ಗ್ರಾಹಕರಿಂದ ಮಾರಾಟಗಾರರು ನಿಗದಿತ ಮಾರಾಟ ದರಕ್ಕಿಂತ ಹೆಚ್ಚಿನ ಮೊತ್ತ ವಸೂಲಿ ಮಾಡುತ್ತಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಅಧಿಕೃತ ನಂದಿನಿ ಡೀಲರ್ಶಿಪ್ನ್ನು ರದ್ದುಗೊಳಿಸಲಾಗುವುದು ಎಂದು ಜಿಲ್ಲಾ ಹಾಲು ಒಕ್ಕೂಟ ಎಚ್ಚರಿಕೆ ನೀಡಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಫೆ. 10 ರಿಂದ ಜಾರಿಯಿರುವ ವಿವಿಧ ಮಾದರಿಯ ನಂದಿನಿ ಹಾಲು ಮತ್ತು ಮೊಸರಿನ ದರಗಳು ಇಂತಿವೆ. ನಂದಿನಿ ಹಾಲು- ನಂದಿನಿ ಟೋನ್ಡ್ ಹಾಲು(500ಮಿ.ಲೀ)- ರು. 14.00, ಹೋಮೋಜಿನೈಸ್ಡ್ ಹಸುವಿನ ಹಾಲು(500ಮಿ.ಲೀ.)- ರು. 15.50, ಶುಭಂ ಹಾಲು(500ಮಿ.ಲೀ.)- ರು. 17.00, ಸಮೃದ್ಧಿ ಹಾಲು(500ಮಿ.ಲೀ.)- ರು. 18.00. ನಂದಿನಿ ಮೊಸರು- ಮೊಸರು(200ಗ್ರಾಂ)- ರು. 8.50, 400ಗ್ರಾಂ- ರು. 15.50, 1000 ಗ್ರಾಂ- ರು. 35.00, 6ಕೆಜಿ ಜಂಬೋ ಪ್ಯಾಕ್- ರು. 204.00, ನಿಗದಿತ ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದು ಅಪರಾಧವಾಗಿದೆ. ಮಾರಾಟಗಾರ ಹೆಚ್ಚಿನ ದರ ಪಡೆದು ಶೋಷಣೆ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರು ಯಾವುದೇ ದೂರುಗಳಿದ್ದಲ್ಲಿ ಮಾರುಕಟ್ಟೆ ಸಹಾಯಕ ವ್ಯವಸ್ಥಾಪಕರು ಮಂಗಳೂರು- 9449488863, ಮಣಿಪಾಲ- 9480157404 ಸಂಪರ್ಕಿಸಬಹುದು. ಒಕ್ಕೂಟದಲ್ಲಿ ಪ್ರಸ್ತುತ ದಾಸ್ತಾನಿರುವ ಹಳೆ ಮುದ್ರಿತ ದರದ ಫಿಲಂನಲ್ಲಿ ಹಾಲು ಮೊಸರುನ್ನು ಪ್ಯಾಕ್ ಮಾಡಿ ಸರಬರಾಜು ಕೈಗೊಳ್ಳುತ್ತಿದ್ದು, ಗ್ರಾಹಕರು ಪರಿಷ್ಕೃತ ದರದಲ್ಲಿ ವ್ಯವಹರಿಸಬೇಕು ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

