ದಕ್ಷಿಣ ಕನ್ನಡ

ನೋವಿಗೆ ನೆರವಾಗುವುದೇ ಹಿಂದೂ ಧರ್ಮ: ಕೃಷ್ಣಪ್ರಸಾದ್ ಮಡ್ತಿಲ

Published On :

ಸುಬ್ರಹ್ಮಣ್ಯ: ಬದುಕಿನಲ್ಲಿ ಎಲ್ಲವೂ ಮಾನವತ ಧರ್ಮದಲ್ಲಿ ನಡೆದಾಗ ಅದು ದೇವರಿಗೆ ಸಲ್ಲುತ್ತದೆ. ಅದಕ್ಕೆ ಪ್ರತಿ ಫಲವಾಗಿ ದೇವರು ಜೀವನದಲ್ಲಿ ನೆಮ್ಮದಿ ಸಮೃದ್ಧಿಗಳನ್ನು ದಯಪಾಲಿಸುತ್ತಾನೆ. ಉದಾತ್ತ ಚಿಂತನೆಯೊಂದಿಗೆ ಪರಜೀವಿಗೆ ನೆರವು ನೀಡುವಂತಹದ್ದು ಹಿಂದೂ ಧರ್ಮದಲ್ಲಿ ಶ್ರೇಷ್ಠವಾದದ್ದು. ನೆರವು ನೀಡುವುದೇ ಹಿಂದೂ ಧರ್ಮ ಎಂದು ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಹೇಳಿದರು.
ಕುಕ್ಕೆಶ್ರೀ ಆಟೋ ಚಾಲಕ- ಮಾಲೀಕರ ಸಂಘದ 2ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಬುಧವಾರ ಸವಾರಿ ಮಂಟಪದ ಬಳಿ ನಡೆದ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ಉದ್ಘಾಟಿಸಿ ಆಶೀರ್ವಚನ ನೀಡಿ, ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಂಡು ಯುವಕರ ಸಂಘಟನೆ ಉನ್ನತಿ ಹೊಂದಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಗ್ರಾಪಂ ಸದಸ್ಯೆ ಪುಷ್ಪಾವತಿ, ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ವೆಂಕಟ್ರಮಣ ಗೌಡ, ಉದ್ಯಮಿ ದಿನೇಶ್ ಬಿ.ಎನ್, ಗ್ರಾಪಂ ಸದಸ್ಯ ಹರೀಶ್ ಇಂಜಾಡಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಉಮೇಶ್ ಕೆ.ಎನ್, ಕಾನೂನು ಸಲಹೆಗಾರ ನ್ಯಾಯವಾದಿ ವೆಂಕಪ್ಪ ಗೌಡ ಇದ್ದರು.
ಈ ಸಂಧರ್ಭದಲ್ಲಿ ಪರಿಸರ ಹಾಗೂ ರೈತಪರ ಹೋರಾಟಗಾರ ಕಿಶೋರ್ ಶಿರಾಡಿ, ಬುಡಕಟ್ಟು ಜನಾಂಗದ ಹೋರಾಟಗಾರ ಭಾಸ್ಕರ ಬೆಂಡೋಡಿ ಮತ್ತು ಜೀವನ ಯಶೋಗಾಥೆಗಾಗಿ ಅಕ್ಕಮ್ಮ ಬಸವನ ಮೂಲೆ ಇವರನ್ನು ಸನ್ಮಾನಿಸಲಾಯಿತು. ಸಂಘದ ವತಿಯಿಂದ ಸಂಕಷ್ಟಗೊಳಗಾದ ನಾಲ್ಕು ಕುಟುಂಬಗಳಿಗೆ ಧನ ಸಹಾಯ ನೀಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.